ಕೊರೊನಾದಿಂದ ಚೇತರಿಸಿದ ಅಮಿತ್ ಮಿಶ್ರಾ, ಪ್ರಸಿದ್ಧ್ ಕೃಷ್ಣ
Team Udayavani, May 20, 2021, 12:29 AM IST
ಹೊಸದಿಲ್ಲಿ: ಟೀಮ್ ಇಂಡಿಯಾದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. 14ನೇ ಐಪಿಎಲ್ ವೇಳೆ ಮಿಶ್ರಾಗೆ ಸೋಂಕು ತಗಲಿತ್ತು. ಐಪಿಎಲ್ ಮುಂದೂಡಲ್ಪಟ್ಟ ಕೆಲವೇ ದಿನಗಳಲ್ಲಿ ಪ್ರಸಿದ್ಧ್ ಕೃಷ್ಣ ಅವರ ಫಲಿತಾಂಶವೂ ಪಾಸಿಟಿವ್ ಬಂದಿತ್ತು.
“ನನ್ನ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ರಿಯಲ್ ಹೀರೋಗಳಾದ ಆರೋಗ್ಯ ಸಿಬಂದಿಯ ಕೆಲಸವನ್ನು ನಾನು ಅಭಿನಂದಿಸುತ್ತೇನೆ. ಇವರ ಪರಿಶ್ರ ಮದಿಂದಲೇ ನಾನು ಚೇತರಿಸಿಕೊಂಡಿದ್ದೇನೆ’ ಎಂದಿರುವ ಮಿಶ್ರಾ, ವೈದ್ಯರೊಂದಿಗಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಮೀಸಲು ಆಟಗಾರರಾಗಿದ್ದಾರೆ. ನೆಗೆಟಿವ್ ವರದಿ ಬಂದುದರಿಂದ ಅವರೂ ತಂಡದ ಜತೆಯಲ್ಲೇ ಇಂಗ್ಲೆಂಡ್ಗೆ ತೆರಳುವ ನಿರೀಕ್ಷೆಯಲ್ಲಿದ್ದಾರೆ.