ಡಾಕ್ಟರ್‌ ಕಣ್ಣಲ್ಲಿ ಆ್ಯಕ್ಟರ್‌ ಕನಸು; ಲವ್‌ 360 ನಾಯಕ ಪ್ರವೀಣ್‌ ಮಾತು

ಕನ್ನಡದಲ್ಲಿ ಅನೇಕ ಹೊಸ ಪ್ರತಿಭೆಗಳನ್ನು ಶಶಾಂಕ್‌ ತಮ್ಮ ಸಿನಿಮಾ ಮೂಲಕ ಬಿಗ್‌ ಸ್ಕ್ರೀನ್‌ಗೆ ಪರಿಚಯಿಸಿದ್ದಾರೆ.

Team Udayavani, Aug 18, 2022, 2:22 PM IST

ಡಾಕ್ಟರ್‌ ಕಣ್ಣಲ್ಲಿ ಆ್ಯಕ್ಟರ್‌ ಕನಸು; ಲವ್‌ 360 ನಾಯಕ ಪ್ರವೀಣ್‌ ಮಾತು

ತನ್ನ ಟೀಸರ್‌, ಟ್ರೇಲರ್‌ ಮತ್ತು ಹಾಡುಗಳ ಮೂಲಕ ಸೌಂಡ್‌ ಮಾಡುತ್ತಿರುವ ಶಶಾಂಕ್‌ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ “ಲವ್‌ 360′ ಈ ವಾರ ತೆರೆಗೆ ಬರುತ್ತಿದೆ. ಇನ್ನು “ಲವ್‌ 360′ ಸಿನಿಮಾದ ಮೂಲಕ ನವ ಪ್ರತಿಭೆ ಪ್ರವೀಣ್‌ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಮೂಲತಃ ಡಾಕ್ಟರ್‌ ಆಗಿರುವ ಪ್ರವೀಣ್‌, “ಲವ್‌ 360′ ಸಿನಿಮಾದ ಮೂಲಕ ಆ್ಯಕ್ಟರ್‌ ಆಗಿ ಬೆಳ್ಳಿತೆರೆಮೇಲೆ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ ಪ್ರವೀಣ್‌, ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

*ನಿಮ್ಮ ಹಿನ್ನೆಲೆ ಬಗ್ಗೆ ಏನು ಹೇಳುತ್ತೀರಿ?
ನಾನು ಮೂಲತಃ ಬಳ್ಳಾರಿ ಜಿಲ್ಲೆ ಹೊಸಪೇಟೆಯವನು. ನಾನು ಯಾವುದೇ ಸಿನಿಮಾ ಹಿನ್ನೆಲೆಯಿಂದ ಬಂದವನಲ್ಲ. ನಮ್ಮ ಫ್ಯಾಮಿಲಿಯಲ್ಲಿ ಕೂಡ ಯಾರೂ ಸಿನಿಮಾರಂಗದಲ್ಲಿಲ್ಲ. ನಮ್ಮದು ವೈದ್ಯಕೀಯ ಹಿನ್ನೆಲೆಯ ಕುಟುಂಬ. ನಮ್ಮ ತಂದೆ-ತಾಯಿ, ತಮ್ಮ ಎಲ್ಲರೂ ಕೂಡ ವೃತ್ತಿಯಲ್ಲಿ ಡಾಕ್ಟರ್. ನಾನು ಕೂಡ ಎಂಬಿಬಿಎಸ್‌ ಸ್ಟಡೀಸ್‌ ಮಾಡಿದ್ದೇನೆ.

*ಡಾಕ್ಟರ್‌ಗೆ ಆ್ಯಕ್ಟರ್‌ ಆಗುವ ಯೋಚನೆ ಬಂದಿದ್ದು ಯಾವಾಗ?
ನನಗೆ ಮೊದಲಿನಿಂದಲೂ ಆ್ಯಕ್ಟಿಂಗ್‌ ಅಂದ್ರೆ, ಅದೇನೋ ಒಂಥರಾ ಆಸಕ್ತಿ. ಆದ್ರೆ ನನಗೆ ಆ್ಯಕ್ಟಿಂಗ್‌ ಇಷ್ಟ ಅಂತ ಮನೇಲಿ ಹೇಳಿಕೊಳ್ಳೋದಕ್ಕೆ ತುಂಬ ಭಯವಿತ್ತು. ಹೀಗಾಗಿ ಮೆಡಿಕಲ್‌ ಓದುತ್ತಿರುವಾಗಲೇ, ಮನೆಯಲ್ಲಿ ಗೊತ್ತಿಲ್ಲದಂತೆ ಆ್ಯಕ್ಟಿಂಗ್‌ ಟ್ರೈನಿಂಗ್‌ ಪಡೆದುಕೊಂಡೆ. ಕೊನೆಗೆ ಮನೆಯವರನ್ನೂ ಒಪ್ಪಿಸಿ, ಅಂದುಕೊಂಡಂತೆ “ಲವ್‌ 360′ ಸಿನಿಮಾದ ಮೂಲಕ ಆ್ಯಕ್ಟರ್‌ ಆದೆ.

*”ಲವ್‌ 360′ ಸಿನಿಮಾಕ್ಕೆ ಆಯ್ಕೆಯಾಗಿದ್ದು ಹೇಗೆ?
ನಮ್ಮ ಪರಿಚಿತರೊಬ್ಬರ ಮೂಲಕ ನಿರ್ದೇಶಕ ಶಶಾಂಕ್‌ ಅವರ ಪರಿಚಯವಾಯ್ತು. ಅವರು ಕೂಡ ಹೊಸ ಆರ್ಟಿಸ್ಟ್‌ಗಳ ಜೊತೆಗೆ ಒಂದು ಸಿನಿಮಾ ಮಾಡುವ ಯೋಚನೆಯಲ್ಲಿದ್ದರು. ಕೊನೆಗೆ ಸಿನಿಮಾದ ಸಬ್ಜೆಕ್ಟ್ ಮತ್ತು ಕ್ಯಾರೆಕ್ಟರ್‌ಗೆ ನಾನು ಹೊಂದಾಣಿಕೆಯಾಗುತ್ತೇನೆ ಎಂದು ನನ್ನನ್ನು ಈ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ ಎರಡು ತಿಂಗಳು ರಿಹರ್ಸಲ್‌, ವರ್ಕ್‌ಶಾಪ್‌ ಮೂಲಕ ಸಿನಿಮಾಕ್ಕೆ ತಯಾರಿ ಮಾಡಿಕೊಂಡೆ.

*”ಲವ್‌ 360′ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?
ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಲವ್‌ಸ್ಟೋರಿ ಸಿನಿಮಾ. ಈ ಸಿನಿಮಾದಲ್ಲಿ ನಾನೊಬ್ಬ ಬೋಟ್‌ ಮೆಕ್ಯಾನಿಕ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಯಂಗ್‌ ಆ್ಯಂಡ್‌ ಎನರ್ಜಿಟಿಕ್‌ ಆಗಿರುವಂಥ ಲವರ್‌ ಬಾಯ್‌ ಕ್ಯಾರೆಕ್ಟರ್‌ ನನ್ನದು. ಇದೊಂದು ಲವ್‌ಸ್ಟೋರಿ ಸಿನಿಮಾವಾದ್ರೂ, ಕಥೆಗೆ ಬೇರೆ ಬೇರೆ ಆಯಾಮಗಳಿವೆ. ಇಲ್ಲಿ ಲವ್‌ ಜೊತೆಗೆ ಕ್ರೈಂ-ಥ್ರಿಲ್ಲರ್‌, ಆ್ಯಕ್ಷನ್‌, ಸಸ್ಪೆನ್ಸ್‌ ಹೀಗೆ ಬೇರೆ ಬೇರೆ ಎಲಿಮೆಂಟ್ಸ್‌ ಇದೆ.

* ನಿರ್ದೇಶಕ ಶಶಾಂಕ್‌ ಅವರೊಂದಿಗೆ ಕೆಲಸ ಹೇಗಿತ್ತು?
ಕನ್ನಡದಲ್ಲಿ ಅನೇಕ ಹೊಸ ಪ್ರತಿಭೆಗಳನ್ನು ಶಶಾಂಕ್‌ ತಮ್ಮ ಸಿನಿಮಾ ಮೂಲಕ ಬಿಗ್‌ ಸ್ಕ್ರೀನ್‌ಗೆ ಪರಿಚಯಿಸಿದ್ದಾರೆ. ಅವರೊಂದಿಗೆ ಕೆಲಸ ಮಾಡುವುದೇ ಒಂದು ವಿಶೇಷ ಅನುಭವ. ಪ್ರತಿದಿನ ಅವರಿಂದ ಹೊಸದೇನಾದ್ರೂ ಕಲಿತುಕೊಳ್ಳುತ್ತಿದ್ದೆ. ಹೊಸಬರ ಟ್ಯಾಲೆಂಟ್‌ ಹೇಗೆ ಶೋ ಕೇಸ್‌ ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ತುಂಬ ಸಪೋರ್ಟಿವ್‌ ಆಗಿದ್ದರಿಂದ, ಕಂಫ‌ರ್ಟ್‌ ಜೋನ್‌ನಲ್ಲಿ ಸಿನಿಮಾ ಮುಗಿದಿದ್ದೇ ಗೊತ್ತಾಗಲಿಲ್ಲ.

* ರಿಲೀಸ್‌ಗೂ ಮುನ್ನ “ಲವ್‌ 360′ ಸಿನಿಮಾಕ್ಕೆ ರೆಸ್ಪಾನ್ಸ್‌ ಹೇಗಿದೆ?
ಈಗಾಗಲೇ “ಲವ್‌ 360′ ಸಿನಿಮಾದ ಟ್ರೇಲರ್‌, ಸಾಂಗ್ಸ್‌ ಎಲ್ಲವೂ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಪ್ರಮೋಶನ್ಸ್‌ ಸಮಯದಲ್ಲೂ ಎಲ್ಲ ಕಡೆಗಳಿಂದ ಬಿಗ್‌ ರೆಸ್ಪಾನ್ಸ್‌ ಸಿಗ್ತಿದೆ. ಆಡಿಯನ್ಸ್‌, ಇಂಡಸ್ಟ್ರಿ ಕಡೆಯಿಂದ ಎಲ್ಲರೂ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಅಂತೆಯೇ ಥಿಯೇಟರ್‌ನಲ್ಲೂ ಸಿನಿಮಾ ಆಡಿಯನ್ಸ್‌ಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ.

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.