ತಿಹಾರ್ ಜೈಲಿನಲ್ಲಿ ತನಿಖೆಗೆ ಹೆದರಿ ಮೊಬೈಲನ್ನೇ ನುಂಗಿದ ಕೈದಿ
ಕೊಲೆ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿರುವ 29 ವರ್ಷದ ಯುವಕನ ಬಳಿ ಮೊಬೈಲ್ ಇತ್ತು.
Team Udayavani, Jan 20, 2022, 2:25 PM IST
ನವದೆಹಲಿ: ತನ್ನ ಬಳಿ ಮೊಬೈಲ್ ಇರುವುದು ಜೈಲಧಿಕಾರಿಗೆ ತಿಳಿಯಬಾರದು ಎನ್ನುವ ಕಾರಣಕ್ಕೆ ಖೈದಿಯೊಬ್ಬ ಮೊಬೈಲ್‌ನ್ನೇ ನುಂಗಿರುವ ಘಟನೆ ನವದೆಹಲಿಯ ತಿಹಾರ್ ಜೈಲಿನಲ್ಲಿ ಜ.5ರಂದು ನಡೆದಿದೆ.
ಕೊಲೆ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿರುವ 29 ವರ್ಷದ ಯುವಕನ ಬಳಿ ಮೊಬೈಲ್ ಇತ್ತು. ಆ ದಿನ ಕೈದಿಗಳಲ್ಲಿ ಮೊಬೈಲ್ ಮತ್ತು ಇತರ ವಸ್ತುಗಳು ಇವೇ ಎಂಬ ಬಗ್ಗೆ ಹಿರಿಯ ಅಧಿಕಾರಿಗಳು ತಪಾಸಣೆ ನಡೆಸಲು ಆಗಮಿಸಿದ್ದಾರೆ. ಅವರ ಕೈಗೆ ಸಿಕ್ಕಿ ಬೀಳಬಾರದು ಎಂದು ಕೈದಿ ಮೊಬೈಲ್‌ನ್ನು ನುಂಗಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಕೈದಿಯನ್ನು ಜೆ.ಬಿ.ಪಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಆತನಿಗೆ ಎಂಡೋಸ್ಕಪಿ ಮಾಡಿ, ಮೊಬೈಲ್‌ನ್ನು ಹೊರತೆಗೆಯಲಾಗಿದೆ. ಹೊಟ್ಟೆಯಲ್ಲಿ ಮೊಬೈಲ್ ಇದ್ದ ವಿಡಿಯೋವನ್ನೂ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
“ಅಘಾಡಿ’ಗೆ ಲೋಕಲ್ ಯಶಸ್ಸು
ಮುಂಬೈ: ಮಹಾರಾಷ್ಟ್ರದ 106 ನಗರಸಭೆಗಳ ಸದಸ್ಯತ್ವಕ್ಕಾಗಿ ಇತ್ತೀಚೆಗೆ ನಡೆದಿದ್ದ ಚುನಾವಣಾ ಫಲಿತಾಂಶ ಬುಧವಾರ ಹೊರಬಿದ್ದಿದೆ. ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ “ಮಹಾ ವಿಕಾಸ್ ಅಘಾಡಿ’ ಒಕ್ಕೂಟದ ಪ್ರಮುಖ ಪಕ್ಷವಾದ, ಮಾಜಿ ಸಿಎಂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ 25 ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಕ್ಕೇರುವ ಅರ್ಹತೆ ಪಡೆದಿದೆ.
ಅಘಾಡಿಯ ಇನ್ನೆರಡು ಪಕ್ಷಗಳಾದ ಕಾಂಗ್ರೆಸ್ 18, ಶಿವಸೇನೆ 14 ಕಡೆ ಜಯ ಸಾಧಿಸಿವೆ. ಪ್ರಮುಖ ವಿಪಕ್ಷವಾದ ಬಿಜೆಪಿ 24 ಕಡೆ ಗೆಲುವು ದಾಖಲಿಸಿದೆ ಮತ್ತು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ ಎಂದು ಪಕ್ಷದ ಮುಖಂಡ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ
ಭದ್ರತಾಲೋಪ? ತಮಿಳುನಾಡಿನಲ್ಲಿ ಬಿಜೆಪಿ ಮುಖಂಡನ ಹತ್ಯೆ, ಎಐಡಿಎಂಕೆ ಆಕ್ರೋಶ
ಮತ್ತೊಂದು ಶಾಕ್: ಹಿರಿಯ ನಾಯಕ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ಗುಡ್ ಬೈ, ಎಸ್ಪಿ ಬೆಂಬಲ
ಮತ್ತೆ ಪ್ರಧಾನಿ ಮೋದಿ ಭೇಟಿ ತಪ್ಪಿಸಿಕೊಂಡ ತೆಲಂಗಾಣ ಸಿಎಂ ಕೆಸಿಆರ್
IPL ಬೆಟ್ಟಿಂಗ್: ಠೇವಣಿದಾರರ ಹಣ ಬಳಸಿ 1 ಕೋಟಿ ರೂ. ಕಳೆದುಕೊಂಡ ಪೋಸ್ಟ್ ಮಾಸ್ಟರ್, ಬಂಧನ!