ಅಂಜುಂ ಪರ್ವೇಜ್ ‘ನಮ್ಮ ಮೆಟ್ರೋ’ಗೆ ನೂತನ ಸಾರಥಿ ?
Team Udayavani, Jul 14, 2021, 6:19 PM IST
ಬೆಂಗಳೂರು: ‘ನಮ್ಮ ಮೆಟ್ರೋ’ಗೆ ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್ ನೂತನ ಸಾರಥಿ ಆಗಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿರುವ ಅವರನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯೋಜನೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಆದೇಶ ಹೊರಬೀಳಲಿದೆ.
ಅಜಯ್ ಸೇಠ್ ಕೇಂದ್ರದ ಹಣಕಾಸು ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ ನಂತರ ಆ ಸ್ಥಾನಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರನ್ನು ನಿಯೋಜಿಸಲಾಗಿತ್ತು. ಈಗ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಂಜುಂ ಪರ್ವೇಜ್ ಅವರನ್ನು ನೇಮಿಸಲಾಗುತ್ತಿದೆ.
ಇದನ್ನೂ ಓದಿ :ಭಾರತಕ್ಕೆ ಎಂದೂ ಅಭದ್ರತೆಯ ಸ್ಥಿತಿ ಒದಗಿರಲಿಲ್ಲ : ಕೇಂದ್ರದ ವಿರುದ್ಧ ಗಾಂಧಿ ಟ್ವೀಟಾಕ್ರೋಶ