iPhone 16 launch: ಐಫೋನ್ 16 ಸರಣಿ ಭಾರತದಲ್ಲಿ ಸೆ. 9ಕ್ಕೆ ಬಿಡುಗಡೆ
ಸಾಮಾನ್ಯವಾಗಿ ಆಪಲ್ ತನ್ನ ಹೊಸ ಪ್ರಾಡಕ್ಟ್ ಗಳನ್ನು ಮಂಗಳವಾರ ಬಿಡುಗಡೆ ಮಾಡುತ್ತದೆ.
Team Udayavani, Aug 28, 2024, 3:54 PM IST
ಬೆಂಗಳೂರು: ಐಫೋನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಫೋನ್ 16 ಸರಣಿಯ ಮೊಬೈಲ್ ಫೋನ್ ಗಳ ಬಿಡುಗಡೆ ದಿನಾಂಕವನ್ನು Apple ಘೋಷಿಸಿದೆ.
ಆಪಲ್ ಮಾಧ್ಯಮಗಳಿಗೆ ಆಹ್ವಾನ ನೀಡಿದ್ದು ಇದರಲ್ಲಿ 16ರ ಸರಣಿಯ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ್ದು, ಇಟ್ಸ್ ಗ್ಲೋ ಟೈಮ್ ಎಂಬ ಶೀರ್ಷಿಕೆಯಲ್ಲಿ, ಸೆಪ್ಟೆಂಬರ್ 9 ರಂದು ಬೆಳಿಗ್ಗೆ 10ಕ್ಕೆ (ಪೆಸಿಫಿಕ್ ಟೈಮ್) ಆಪಲ್ ಪಾರ್ಕ್ ನ ಸ್ಟೀವ್ ಜಾಬ್ಸ್ ಥಿಯೇಟರ್ ನಲ್ಲಿ ಸ್ಪೆಷಲ್ ಇವೆಂಟ್ ಇರುವುದಾಗಿ ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ ಐಫೋನ್ 16, 16 ಪ್ಲಸ್, 16 ಪ್ರೊ ಮತ್ತು 16 ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದರ ಜೊತೆ ನೂತನ ವಾಚ್ ಮತ್ತು ಏರ್ ಪಾಡ್ಸ್ ಅನ್ನು ಬಿಡುಗಡೆ ಮಾಡುವ ಸಂಭವವಿದೆ.
ಸಾಮಾನ್ಯವಾಗಿ ಆಪಲ್ ತನ್ನ ಹೊಸ ಪ್ರಾಡಕ್ಟ್ ಗಳನ್ನು ಮಂಗಳವಾರ ಬಿಡುಗಡೆ ಮಾಡುತ್ತದೆ. ಈ ಬಾರಿ ಸೋಮವಾರ ಬಿಡುಗಡೆ ಕಾರ್ಯಕ್ರಮ ಮಾಡಿರುವುದು ಅನೇಕರ ಅಚ್ಚರಿಗೆ ಕಾರಣವಾಗಿದೆ.
ಈ ಕಾರ್ಯಕ್ರಮವನ್ನು ಸೆ. 9ರಂದು ಬೆಳಿಗ್ಗೆ 10 (ಪೆಸಿಫಿಕ್ ಟೈಮ್) ರಿಂದ (ಭಾರತೀಯ ಕಾಲಮಾನ ಸೆ.9 ರಾತ್ರಿ 9.30 ರಿಂದ) apple.com ನಲ್ಲಿ ವೀಕ್ಷಿಸಬಹುದು ಎಂದು ಆಪಲ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್- ಚೆನ್ನೈ ಘಟಕ ಪುನರಾರಂಭ
iPhone series: ಹೊಸ ಐಫೋನ್ 16 ಸರಣಿ- ಇದರಲ್ಲಿ ಏನೇನು ವೈಶಿಷ್ಟ್ಯಗಳಿವೆ ?
iPhone-16: ಭಾರತದಲ್ಲೇ ಉತ್ಪಾದನೆ ಕಾರಣ ಐಫೋನ್-16 ಬೆಲೆಯಲ್ಲಿ ಇಳಿಕೆ
Hyundai Alcazar 2024: ಭಾರತದ ಮಾರುಕಟ್ಟೆಗೆ ಹುಂಡೈ ಅಲ್ಕಜಾರ್ ಬಿಡುಗಡೆ
Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್‌ನಲ್ಲಿ “ಎಕ್ಸ್’ ಬಳಕೆಗೆ ತಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.