ಸಿಖ್ ಯುವಕನಿಂದ ರಾಣಿ 2ನೇ ಎಲಿಜಬೆತ್ ಹತ್ಯೆ ಬೆದರಿಕೆ :1919ರ ಗೋಲಿಬಾರ್ ಗೆ ಪ್ರತೀಕಾರವಂತೆ
Team Udayavani, Dec 27, 2021, 10:00 PM IST
ಲಂಡನ್ : ಜಲಿಯನ್ವಾಲಾಬಾಗ್ನಲ್ಲಿ 1919ರಲ್ಲಿ ಬ್ರಿಟಿಷರು ನಡೆಸಿದ ಗೋಲಿಬಾರ್ಗೆ ಪ್ರತೀಕಾರವಾಗಿ ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಅವರನ್ನು ಹತ್ಯೆ ಮಾಡುವುದಾಗಿ ಸಿಖ್ ಯುವಕ ಬೆದರಿಕೆ ಹಾಕಿದ ವಿಡಿಯೋ ಬೆಳಕಿಗೆ ಬಂದಿದೆ.
ಈ ಬಗ್ಗೆ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ನ್ಯಾಪ್ಚಾಟ್ನಲ್ಲಿ ಹಂಚಿಕೊಳ್ಳಲಾಗಿದ್ದ ವಿಡಿಯೋ ಹಲವಾರು ಶಂಕೆಗಳಿಗೆ ಕಾರಣವಾಗಿದೆ. ವಿಂಡ್ಸರ್ ಕ್ಯಾಸಲ್ ಅರಮನೆ ಆವರಣಕ್ಕೆ ಅಕ್ರಮವಾಗಿ ವ್ಯಕ್ತಿಯೊಬ್ಬ ಪ್ರವೇಶಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ವಿಡಿಯೋದಲ್ಲಿ ಹೇಳಿಕೊಳ್ಳಲಾಗಿರುವ ಪ್ರಕಾರ ಯುವಕನ ಹೆಸರು ಜಸ್ವಂತ್ ಸಿಂದ್ ಚೈಲ್. ಆತ 1919ರಲ್ಲಿ ಜಲಿಯನ್ವಾಲಾಬಾಗ್ನಲ್ಲಿ ಬ್ರಿಟೀಷರು ನಡೆಸಿದ್ದ ಗೋಲಿಬಾರ್ಗೆ ಪ್ರತೀಕಾರವಾಗಿ ರಾಣಿ ಎರಡನೇ ಎಲಿಜಬೆತ್ ಅವರನ್ನು ಹತ್ಯೆ ಮಾಡುವುದಾಗಿ ಹೇಳಿಕೊಂಡಿದ್ದಾನೆ. ವಿಂಡ್ಸರ್ ಕ್ಯಾಸಲ್ಗೆ ನುಗ್ಗಿ ಬಂಧನಕ್ಕೆ ಒಳಗಾಗಿರುವ ಯುವಕನ ವಯಸ್ಸು 19 ಆಗಿದ್ದು, ಪೊಲೀಸರ ಪ್ರಕಾರ ಆತ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ.
ಇದನ್ನೂ ಓದಿ : ಆನ್ಲೈನ್ ಗೇಮ್ ಗಾಗಿ ನೆರೆಮನೆಗೆ ಕನ್ನ ಹಾಕಿ 1.50 ಲಕ್ಷ ರೂ. ದೋಚಿದ ಆಸಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು