67ನೇ ವಯಸ್ಸಲ್ಲಿ ಪಿಎಚ್.ಡಿ. ಪಡೆದ ವಡೋದರಾ ಮಹಿಳೆ
Team Udayavani, Jun 23, 2021, 6:56 AM IST
ವಡೋದರಾ: “ಅಯ್ಯೋ ಅರವತ್ತು ವರ್ಷ ಆಯ್ತು. ರಾಮಾ, ಕೃಷ್ಣಾ ಎಂದು ಧ್ಯಾನ ಮಾಡುತ್ತಾ ದಿನ ಕಳೆಯುವುದು’- ಇದು ಸಾಮಾನ್ಯವಾಗಿ ಇಳಿ ವಯಸ್ಸಿನವರು ಹೇಳುವ ಮಾತು. ಆದರೆ ಗುಜರಾತ್ನ ವಡೋದರಾದ ಉಷಾ ಲೋದಯಾ ಅವರ ಕತೆಯೇ ಬೇರೆ. ಕಲಿಯುವುದರಲ್ಲಿ ಚುರುಕಾಗಿದ್ದ ಅವರಿಗೆ 16ನೇ ವಯಸ್ಸಿನಲ್ಲಿ ವಿವಾಹ ನಿಶ್ಚಯವಾಗಿತ್ತು. ಬಿಎಸ್ಸಿ ಮೊದಲ ವರ್ಷದಲ್ಲಿ ದ್ದಾಗ ಮದುವೆಯಾದ್ದರಿಂದ ಶಿಕ್ಷಣ ಅರ್ಧಕ್ಕೇ ನಿಲ್ಲಿಸಬೇಕಾಯಿತು. ಅಂಥವರು ಐದು ದಶಕಗಳ ಬಳಿಕ 67ನೇ ವಯಸ್ಸಿನಲ್ಲಿ ಅವರು ಪಿಎಚ್.ಡಿ ಪೂರ್ತಿ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅದಕ್ಕೆ ಸಂಬಂಧಿಸಿದ ಮೌಖೀಕ ಸಂದರ್ಶನ (ವೈವಾ) ಕೂಡ ಪೂರ್ತಿಯಾಗಿದೆ.
ಮದುವೆ ಬಳಿಕ ಪತಿಯ ಪ್ರೋತ್ಸಾಹದಿಂದ ಬಿಎಸ್ಸಿ ಪೂರ್ತಿಗೊಳಿಸಿದ ಅವರು, ಮಹಾರಾಷ್ಟ್ರದ ಶತ್ರುಂಜಯ ಅಕಾಡೆಮಿಯಿಂದ ಜೈನ ಸಿದ್ಧಾಂತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಅದೇ ವಿಚಾರದಲ್ಲಿ ಅವರು ಸಂಶೋಧನ ಪ್ರಬಂಧ ಮಂಡಿಸಿದ್ದಾರೆ. 7ನೇ ತರಗತಿಯಲ್ಲಿ ವೈದ್ಯೆಯಾಗಬಯಸಿದ್ದೆ. ನಿಜವಾದ ವೈದ್ಯೆ ಅಲ್ಲದಿದ್ದರೂ ನಾನು ಈಗ ನನ್ನ ಹೆಸರಿನ ಮೊದಲು “ಡಾ’ ಎಂದು ಹಾಕಿಕೊಳ್ಳಬಹುದು ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ