Udayavni Special

2021ರ ಟಿ20 ವಿಶ್ವಕಪ್‌ ನಡೆಸಲು ಆಸ್ಟ್ರೇಲಿಯ ಯೋಜನೆ?

ಬಿಸಿಸಿಐನಿಂದಲೂ ಸಕಾರಾತ್ಮಕ ಸ್ಪಂದನೆ? ಆಗ ಐಪಿಎಲ್‌ ಆಯೋಜನೆಯ ಹಾದಿ ಸುಗಮ

Team Udayavani, May 30, 2020, 5:30 AM IST

2021ರ ಟಿ20 ವಿಶ್ವಕಪ್‌ ನಡೆಸಲು ಆಸ್ಟ್ರೇಲಿಯ ಯೋಜನೆ?

ಮೆಲ್ಬರ್ನ್: ಈ ವರ್ಷಾಂತ್ಯದ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇದು ಆಸ್ಟ್ರೇಲಿಯದಲ್ಲಿ ನಡೆಯುತ್ತದೋ ಅಥವಾ ಮುಂದೂಡಲ್ಪಡುತ್ತದೋ ಎಂಬುದು ಜೂ. 10ರ ಬಳಿಕವೇ ತಿಳಿದು ಬರಲಿದೆ. ಅಕಸ್ಮಾತ್‌ ಇದು ಮುಂದೂಡಲ್ಪಟ್ಟದ್ದೇ ಆದರೆ ಆಸ್ಟ್ರೇಲಿಯದ ಮುಂದಿನ ಹೆಜ್ಜೆ ಏನೆಂಬುದು ಕುತೂಹಲಕ್ಕೆಡೆಮಾಡಿದೆ.

ಕೋವಿಡ್‌-19 ಕಾರಣದಿಂದ ಆಸ್ಟ್ರೇಲಿಯ ಆತಿಥ್ಯದ ಟಿ20 ವಿಶ್ವಕಪ್‌ ನಡೆಯದೇ ಹೋದರೆ ಇದನ್ನು 2022ಕ್ಕೆ ಮುಂದೂಡಲಾಗುತ್ತದೆ ಎಂಬುದು ಭಾರೀ ಪ್ರಚಾರ ಪಡೆದ ಸುದ್ದಿ. ಆದರೆ ಗುರುವಾರ ನಡೆದ ಐಸಿಸಿ ಕಾನ್ಫರೆನ್ಸ್‌ ನಲ್ಲಿ ಎಲ್ಲ ಸಾಧ್ಯತೆಯನ್ನು ಜೂ. 10ರ ತನಕ ಕಾದಿರಿಸಲು ನಿರ್ಧರಿಸಲಾಗಿದೆ. ಈ ನಡುವೆ ಈ ವರ್ಷ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯದೇ ಹೋದರೆ 2022ರ ಬದಲು 2021ರ ಟಿ20 ವಿಶ್ವಕಪ್‌ ಆತಿಥ್ಯ ತನಗಿರಲಿ ಎಂಬುದಾಗಿ “ಕ್ರಿಕೆಟ್‌ ಆಸ್ಟ್ರೇಲಿಯ’ ಐಸಿಸಿಗೆ ಪತ್ರ ಬರೆದಿದ್ದಾಗಿ ವರದಿಯಾಗಿದೆ. 2021ರ ಅಂತ್ಯದಲ್ಲಿ ಈ ವಿಶ್ವಕಪ್‌ ನಡೆಸುವ ಹಕ್ಕು ಭಾರತದ್ದಾಗಿದೆ.

ಬಿಸಿಸಿಐಯಿಂದಲೂ ಇಂಥದೇ ಪ್ರಸ್ತಾವ ಕೇಳಿಬಂದಿದೆ ಎಂಬುದಾಗಿಯೂ ವರದಿಯಾಗಿದೆ. 2021ರ ವಿಶ್ವಕಪ್‌ ಆತಿಥ್ಯವನ್ನು ಆಸ್ಟ್ರೇಲಿಯಕ್ಕೆ ಬಿಟ್ಟುಕೊಟ್ಟರೆ, ಮುಂದೂಡಲ್ಪಟ್ಟ ಈ ವರ್ಷದ ವಿಶ್ವಕಪ್‌ ಪಂದ್ಯಾವಳಿಯನ್ನು 2022ರಲ್ಲಿ ನಡೆಸಲು ಭಾರತ ಸಿದ್ಧವಿದೆ ಎನ್ನಲಾಗಿದೆ.

ಬಿಸಿಸಿಐಗೆ ಐಪಿಎಲ್‌ ಅತ್ಯಗತ್ಯ
ಇದು ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ಬಿಸಿಸಿಐ ತಂತ್ರವೆಂಬುದು ರಹಸ್ಯವೇನಲ್ಲ. ಒಂದು ವೇಳೆ ಈ ವರ್ಷದ ಟಿ20 ವಿಶ್ವಕಪ್‌ ಪಂದ್ಯಾವಳಿ ಮುಂದೂಡಲ್ಪಟ್ಟರೆ ಆ ಅವಕಾಶದಲ್ಲಿ ಐಪಿಎಲ್‌ ನಡೆಸುವುದು ಬಿಸಿಸಿಐ ಯೋಜನೆ! ಆದ್ದರಿಂದ ಭಾರತ 2021ರ ಟಿ20 ಆತಿಥ್ಯವನ್ನು ಆಸ್ಟ್ರೇಲಿಯಕ್ಕೆ ಬಿಟ್ಟುಕೊಡುವಂತೆ ಐಸಿಸಿಗೆ ಸೂಚಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕೂಟ ನಡೆಸದಿದ್ದರೆ ಭಾರೀ ನಷ್ಟ!
ಕೋವಿಡ್‌-19 ಕಾರಣದಿಂದ ಈ ವರ್ಷದ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ನಡೆಸುವುದು ಭಾರೀ ಸವಾಲು, ಅಷ್ಟೇ ರಿಸ್ಕ್ ಕೂಡ ಹೌದು. ಅಕಸ್ಮಾತ್‌ ಇದನ್ನು ನಡೆಸದೇ ಹೋದರೆ ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಂಥದೊಂದು ಅಡಕತ್ತರಿಯಲ್ಲಿ ಸಿಲುಕಿದೆ “ಕ್ರಿಕೆಟ್‌ ಆಸ್ಟ್ರೇಲಿಯ’.

“ವೇಳಾಪಟ್ಟಿಯಂತೆ ಟಿ20 ವಿಶ್ವಕಪ್‌ ನಡೆದೀತೆಂಬುದು ನಮ್ಮ ನಂಬಿಕೆ. ಆದರೆ ಕೋವಿಡ್‌-19 ಕಾರಣದಿಂದ ಇದನ್ನು ನಡೆಸುವುದೂ ಭಾರೀ ಸವಾಲಾಗಿದೆ. ವೀಕ್ಷಕರ ನಿರ್ಬಂಧ ಮುಂದುವರಿದರೆ ಪಂದ್ಯಗಳು ಖಾಲಿ ಸ್ಟೇಡಿಯಂಗಳಲ್ಲಿ ಆಡಿಸಬೇಕಾಗುತ್ತದೆ. ಇದರಿಂದ ನಮ್ಮ ಕ್ರಿಕೆಟ್‌ ಮಂಡಳಿಗೆ ಸುಮಾರು 80 ಮಿಲಿಯನ್‌ ಆಸ್ಟ್ರೇಲಿಯನ್‌ ಡಾಲರ್‌ಗಳಷ್ಟು ನಷ್ಟ ಸಂಭವಿಸಲಿದೆ’ ಎಂದು ಸಿಎಒ ಕೆವಿನ್‌ ರಾಬರ್ಟ್ಸ್ ಹೇಳಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

News-tdy-1

ಕೋವಿಡ್ ನಿಂದ ರಕ್ಷಣೆ ಪಡೆಯಲು ಬಂದಿದೆ ಕೋವಿಡ್ ಕೊಡೆ..! : ವೈರಲ್ ಆಯಿತು ಕೋವಿಡ್ ಕೊಡೆ

covid19-india

ಒಂದೇ ದಿನ 22,752 ಹೊಸ ಪ್ರಕರಣ: ದೇಶದಲ್ಲಿ 7.42 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಪ್ರತಿಮೆ ಆಯ್ತು ಈಗ ಮುಂಬೈನಲ್ಲಿ ಅಂಬೇಡ್ಕರ್ ಮನೆಗೆ ನುಗ್ಗಿ ಹಲವು ವಸ್ತುಗಳ ನಾಶ

ಪ್ರತಿಮೆ ಆಯ್ತು ಈಗ ಮುಂಬೈನಲ್ಲಿ ಡಾ.ಅಂಬೇಡ್ಕರ್ ಮನೆಗೆ ನುಗ್ಗಿ ಹಲವು ವಸ್ತುಗಳ ನಾಶ!

ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಅಟ್ಟಹಾಸ : ಒಂದೇ ದಿನ ಮೂವರ ಸಾವು

ದ.ಕ ಜಿಲ್ಲೆಯಲ್ಲಿ ಕೋವಿಡ್-19 ಅಟ್ಟಹಾಸ: ಒಂದೇ ದಿನ ಮೂವರ ಸಾವು

suresh-kumar

ಶಾಲಾ ಕಾಲೇಜು ಪುನರಾರಂಭ: ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಸಚಿವ ಸುರೇಶ್ ಕುಮಾರ್

bhojegwod

ವಿಧಾನ ಪರಿಷತ್ ಸದಸ್ಯ ಎಚ್.ಎಲ್ ಭೋಜೆಗೌಡರಿಗೆ ಕೋವಿಡ್-19 ಸೊಂಕು ದೃಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ

ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ

ಭಾರತದಲ್ಲೇ ಐಪಿಎಲ್ ನಡೆಸಲು ಮೊದಲ ಪ್ರಾಶಸ್ತ್ಯ: ಅರುಣ್ ಧುಮಾಲ್

ಭಾರತದಲ್ಲೇ ಐಪಿಎಲ್ ನಡೆಸಲು ಮೊದಲ ಪ್ರಾಶಸ್ತ್ಯ: ಅರುಣ್ ಧುಮಾಲ್

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಜಾದೂಗಾರ ಮಹೇಂದ್ರ ಸಿಂಗ್ ಧೋನಿ

39ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಜಾದೂಗಾರ ಮಹೇಂದ್ರ ಸಿಂಗ್ ಧೋನಿ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

8-July-10

ಮತ್ತೆ 33 ಮಂದಿಗೆ ಕೋವಿಡ್ ದೃಢ

News-tdy-1

ಕೋವಿಡ್ ನಿಂದ ರಕ್ಷಣೆ ಪಡೆಯಲು ಬಂದಿದೆ ಕೋವಿಡ್ ಕೊಡೆ..! : ವೈರಲ್ ಆಯಿತು ಕೋವಿಡ್ ಕೊಡೆ

8-July-09

ಓರ್ವನಿಗೆ ಕೋವಿಡ್ ಪಾಸಿಟಿವ್‌

8-July-08

ಮತ್ತೆ 6 ಮಂದಿಗೆ ಕೋವಿಡ್ ಸೋಂಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.