ಆಸ್ಟ್ರೇಲಿಯನ್ ಓಪನ್ ಟೆನಿಸ್: ಆ್ಯಶ್ಲಿ ಬಾರ್ಟಿ, ನಡಾಲ್ ಕ್ವಾ. ಫೈನಲ್ ಪ್ರವೇಶ
Team Udayavani, Jan 24, 2022, 5:00 AM IST
ಮೆಲ್ಬರ್ನ್: ನೆಚ್ಚಿನ ಆಟಗಾರರಾದ ಆ್ಯಶ್ಲಿ ಬಾರ್ಟಿ, ರಫೆಲ್ ನಡಾಲ್ “ಆಸ್ಟ್ರೇಲಿಯನ್ ಓಪನ್’ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಈ ಹಂತಕ್ಕೇರಿದ ಉಳಿದ ಪ್ರಮುಖರೆಂದರೆ ಮ್ಯಾಡಿಸನ್ ಕೀಸ್, ಕ್ರೆಜಿಕೋವಾ, ಜೆಸ್ಸಿಕಾ ಪೆಗ್ಯುಲಾ; ಡೆನ್ನಿಸ್ ಶಪೊವಲೋವ್ ಮತ್ತು ಗೇಲ್ ಮಾನ್‌ಫಿಲ್ಸ್..
ಆತಿಥೇಯ ನಾಡಿವ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ 74 ನಿಮಿಷಗಳ ಹೋರಾಟದ ಬಳಿಕ ಅಮೆರಿಕದ ಅಮಂಡಾ ಅನಿಸಿಮೋವಾ ಆಟವನ್ನು 6-4, 6-3ರಿಂದ ಕೊನೆಗೊಳಿಸಿದರು. ಹಾಲಿ ಚಾಂಪಿಯನ್ ನವೋಮಿ ಒಸಾಕಾ ಅವರನ್ನು ಮಣಿಸುವ ಮೂಲಕ ಅನಿಸಿಮೋವಾ ಭಾರೀ ಸುದ್ದಿಯಾಗಿದ್ದರು. ಇದಕ್ಕೂ ಮೊದಲು 2019ರ ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಅನಿಸಿಮೋವಾಗೆ ಸೋಲುಣಿಸಿದ ಬಾರ್ಟಿ, ಅಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಎತ್ತಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಬಾರ್ಟಿ ಮತ್ತೋರ್ವ ಅಮೆರಿಕನ್ ಆಟಗಾರ್ತಿ ಜೆಸ್ಸಿಕಾ ಪೆಗುಲಾ ವಿರುದ್ಧ ಸೆಣಸಲಿದ್ದಾರೆ. ಪೆಗುಲಾ 7-6 (7-0), 6-3ರಿಂದ ಮರಿಯಾ ಸಕ್ಕರಿ ಆಟ ವನ್ನು ಕೊನೆಗೊಳಿಸಿದರು. ಅಮೆರಿಕಕ್ಕೆ ಮತ್ತೊಂದು ಸಂಭ್ರಮ ತಂದಿತ್ತವರು ಮ್ಯಾಡಿಸನ್ ಕೀಸ್. ಅವರು ಸ್ಪೇನ್‌ನ ಪೌಲಾ ಬಡೋಸಾ ವಿರುದ್ಧ 6-3, 6-1ರ ಸುಲಭ ಜಯ ಸಾಧಿಸಿದರು. ಇವರ ಕಾ.ಫೈನಲ್ ಎದುರಾಳಿ ಜೆಕ್ ಗಣರಾಜ್ಯದ ಕ್ರೆಜಿಕೋವಾ. ಇವರು ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ ವಿರುದ್ಧ 6-2, 6-2ರಿಂದ ವಿಕ್ಟರಿ ಸಾಧಿಸಿದರು.
ಇದನ್ನೂ ಓದಿ:ಭಾರತವನ್ನು ಕ್ಲೀನ್ ಸ್ವೀಪ್ ಮಾಡಿದ ದಕ್ಷಿಣ ಆಫ್ರಿಕಾ
ನಡಾಲ್ ವರ್ಸಸ್ ಶಪೊವಲೋವ್
ರಫೆಲ್ ನಡಾಲ್ 14ನೇ ಸಲ “ಮೆಲ್ಬರ್ನ್ ಪಾರ್ಕ್’ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. ಫ್ರಾನ್ಸ್‌ನ ಆ್ಯಡ್ರಿಯನ್ ಮನ್ನಾರಿನೊ ವಿರುದ್ಧ ಮೊದಲ ಸೆಟ್‌ನಲ್ಲಿ ಸ್ಪೇನಿಗ ಭಾರೀ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಮುಂದಿನ ಸೆಟ್‌ಗಳನ್ನು ಸುಲಭದಲ್ಲಿ ವಶಪಡಿಸಿಕೊಂಡರು. ಅಂತರ 7-6 (16-14), 6-2, 6-2.
ನಡಾಲ್ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಕೆನಡಾದ ಡೆನ್ನಿಸ್ ಶಪೊವಲೋವ್. ಅವರು ಅಲೆಕ್ಸಾಂಡರ್ ಜ್ವೆರೇವ್‌ಗೆ 6-3, 7-6 (7-5), 6-3ರಿಂದ ಸೋಲುಣಿಸಿದರು. ದಿನದ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್ ಸರ್ಬಿಯಾದ ಮಿಯೋಮಿರ್ ಕೆಮನೋವಿಕ್ ವಿರುದ್ಧ 7-5, 7-6 (7-4), 6-3ರಿಂದ ಮೇಲುಗೈ ಸಾಧಿಸಿದರು
ಕ್ವಾರ್ಟರ್ ಫೈನಲ್‌ಗೆ ಸಾನಿಯಾ-ರಾಜೀವ್ ರಾಮ್
ಸಾನಿಯಾ ಮಿರ್ಜಾ ಮತ್ತು ಅವರ ಅಮೆರಿಕನ್ ಜತೆಗಾರ ರಾಜೀವ್ ರಾಮ್ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ರವಿವಾರದ ದ್ವಿತೀಯ ಸುತ್ತಿನ ಮುಖಾಮುಖಿಯಲ್ಲಿ ಇವರು ಎಲೆನ್ ಪೆರೆಝ್-ಮಿಡ್ಲ್ಕೂಪ್ ವಿರುದ್ಧ ದಿಟ್ಟ ಹೋರಾಟವೊಂದನ್ನು ಪ್ರದರ್ಶಿಸಿ 7-6 (8-6), 6-4 ಅಂತರದ ಗೆಲುವು ಸಾಧಿಸಿದರು.
ಕ್ವಾ.ಫೈನಲ್‌ನಲ್ಲಿ ಸಾನಿಯಾ-ರಾಜೀವ್ ರಾಮ್ ಆಸ್ಟ್ರೇಲಿಯನ್ ಜೋಡಿಯೊಂದನ್ನು ಎದುರಿಸಬೇಕಿದೆ. ಇಲ್ಲಿ ಆತಿಥೇಯ ನಾಡಿನ ಸಮಂತಾ ಸ್ಟೋಸರ್-ಮ್ಯಾಥ್ಯೂ ಹಾಗೂ ಜೇಮಿ ಫೋರ್ಲಿಸ್-ಜಾಸನ್ ಕ್ಯುಬ್ಲಿರ್ ಜೋಡಿ ಮುಖಾಮುಖೀ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ?
ಯುಜಿಡಿ ಪೈಪ್ ಲೈನ್ ಗೆ ಖಾಸಗಿ ಲೇಔಟ್ ನ ಪೈಪ್ ಲೈನ್ ಜೋಡಣೆ : ಅಧಿಕಾರಿಗಳಿಂದ ತಡೆ
ಜಿಲ್ಲೆಯಲ್ಲಿ ಆತ್ಮಹತ್ಯೆ ಹೆಚ್ಚಳ
ಕೋವಿಡ್ 19: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ
ರೋಹಿತ್ ಶರ್ಮಾಗೆ ಬ್ರೇಕ್ ಕೊಟ್ಟಿದ್ಯಾಕೆ? ಇದು ಅನಗತ್ಯ: ರವಿ ಶಾಸ್ತ್ರಿ