ರವಿವಾರವೂ ಬ್ಯಾಂಕ್ ಖಾತೆಗೆ ಹಣ ಜಮೆ : ಆ. 1ರಿಂದ ಹಣಕಾಸು ವರ್ಗಾವಣೆಯಲ್ಲಿ ಹೊಸ ವ್ಯವಸ್ಥೆ
Team Udayavani, Jun 5, 2021, 7:20 AM IST
ಮುಂಬಯಿ: ಈ ವರ್ಷದ ಆಗಸ್ಟ್ 1ರಿಂದ ರವಿವಾರ ರಜೆ ಇದ್ದರೂ ಸಂಬಳ, ಡಿವಿಡೆಂಡ್ ಸಹಿತ ಇತರ ಪಾವತಿಗಳು ಗ್ರಾಹಕರ ಖಾತೆಗೆ ಪಾವತಿಯಾಗಲಿವೆ. ಜತೆಗೆ ಪ್ರತೀ ತಿಂಗಳ ಸಾಲದ ಕಂತು ಕೂಡ ರಜೆ ಇದ್ದರೂ ಕಡಿತಗೊಳ್ಳಲಿದೆ.
ಈ ಬಗ್ಗೆ ಆರ್ಬಿಐ ಶುಕ್ರವಾರ ಹೊಸ ನೀತಿ ಬಿಡುಗಡೆ ಮಾಡಿದೆ. ನ್ಯಾಶನಲ್ ಅಟೊಮೇಟೆಡ್ ಕ್ಲಿಯರಿಂಗ್ ಹೌಸ್ ಎಂಬ ಹೊಸ ಸೂತ್ರದ ಅನ್ವಯ ಈ ಕ್ರಮ ಜಾರಿಯಾಗಲಿದೆ. ಇದರಿಂದಾಗಿ ಬ್ಯಾಂಕ್ಗಳಿಗೆ ರಜೆ ಇದ್ದರೂ ವಾರದ 7 ದಿನಗಳಲ್ಲಿ ನಿರಂತರವಾಗಿ ಪಾವತಿ ಪ್ರಕ್ರಿಯೆ ಮುಂದುವರಿಯಲಿದೆ.
ದೊಡ್ಡ ಮೊತ್ತದ ಹಣವನ್ನು ಹಲವು ಮಂದಿ ಗ್ರಾಹಕರ ಖಾತೆಗಳಿಗೆ ಸುಲಭವಾಗಿ ವರ್ಗಾಯಿಸುವ ನಿಟ್ಟಿನಲ್ಲಿ ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದೆ. ವಿತ್ತೀಯ ಸಂಸ್ಥೆ ಗಳು, ಬ್ಯಾಂಕ್ಗಳು, ಕಾರ್ಪೊರೇಟ್ ಸಂಸ್ಥೆಗಳು, ಸರಕಾರಗಳಿಗೆ ಈ ವ್ಯವಸ್ಥೆ ಅನುಕೂಲಕರವಾಗಿ ಪರಿಣಮಿಸಲಿದೆ.
ಯಾವುದಕ್ಕೆ ಅನುಕೂಲ?
ಸಂಸ್ಥೆಗಳು, ಸರಕಾರಗಳಿಗೆ ಡಿವಿ ಡೆಂಡ್, ಬಡ್ಡಿ ಪಾವತಿ, ಸಂಬಳ ವಿತರಣೆ, ಪಿಂಚಣಿ ನೀಡಿಕೆ, ಬಿಲ್ ಪಾವತಿ, ಸಾಲ ಕಂತು ಪಾವತಿ, ಮ್ಯೂಚ್ಯುವಲ್ ಫಂಡ್ ಹೂಡಿಕೆ, ವಿಮಾ ಪ್ರೀಮಿಯಂ ಪಾವತಿ ಮಾಡಲು ರಜೆಯ ದಿನ ಗಳಲ್ಲೂ ಸಾಧ್ಯವಾಗಲಿದೆ. ರಜೆಯಂದೂ ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸಾಧ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು