ಎಡದಂಡೆ ಕಾಲುವೆ ಕುಸಿತಕ್ಕೆ ಶಾಶ್ವತ ಪರಿಹಾರ ಎಂದು? ಸತತ ನಾಲ್ಕು ಬಾರಿ ಕುಸಿತಗೊಂಡ ಕಾಲುವೆ

Team Udayavani, Mar 9, 2022, 7:04 PM IST

ಎಡದಂಡೆ ಕಾಲುವೆ ಕುಸಿತಕ್ಕೆ ಶಾಶ್ವತ ಪರಿಹಾರ ಎಂದು?

ಹುಣಸಗಿ: ರೈತರ ಜೀವನಾಡಿಯಾದ ಬಸವಸಾಗರ ಜಲಾಶಯದ ಎಡದಂಡೆ ಮುಖ್ಯಕಾಲುವೆ ಸತತ ನಾಲ್ಕು ಬಾರಿ ಕುಸಿತಗೊಂಡರೂ ಕೂಡ ಇವರೆಗೂ ಕುಸಿತ ತಡೆಗಟ್ಟಲು ಸಾಧ್ಯವಾಗಿಲ್ಲ. ಇತ್ತ ರೈತರ ಆತಂಕವೂ ತಪ್ಪಿಲ್ಲ!

ಪದೇ ಪದೇ ಕಾಲುವೆ ಕುಸಿತ ಸುದ್ದಿ ರೈತರು ಕೇಳಿಕೊಂಡು ಬರುವುದಾಗಿದೆ ಹೊರುತಾಗಿ ಇಲ್ಲಿಗೆ ಶಾಶ್ವತ ಪರಿಹಾರ ಏನೂ ಇಲ್ಲವೇ? ಎಂಬ ಪ್ರಶ್ನೆ ರೈತಾಪಿ ಜನರಿಂದ ಕೇಳಿ ಬರುತ್ತಿವೆ.
ರೈತರ ಹಿತದೃಷ್ಟಿಯಿಂದ ಈಗಾಗಲೇ ಮರಳು ತುಂಬಿದ ಚೀಲ ಹಚ್ಚಿ ತಾತ್ಕಾಲಿಕ ಕಾಮಗಾರಿಯೂ ನಡೆಸಲಾಗಿದೆ. ನಾಲ್ಕು ದಿನಗಳಲ್ಲಿಯೇ ಪೂರ್ಣಗೊಳಿಸಲಾಗುತ್ತಿದೆ ಎಂದು ಎಂಜನಿಯರುಗಳು ತಿಳಿಸುತ್ತಾರೆ.

ಗುಣಮಟ್ಟದ ಮಣ್ಣು ಇಲ್ಲದೆ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೇ ಐಸಿಸಿ ಕಮೀಟಿಯಿಂದ ಪರಿಶೀಲಿಸಿದಾಗ ಮಣ್ಣು ಸರಿ ಇಲ್ಲ ಎಂದು ಮಾಹಿತಿ ನೀಡಿದ್ದರು. ಹಾಗಾಗಿ ಶಾಶ್ವತವಾಗಿ ಕೆಲಸ ಆದಾಗಲೇ ಸಮಸ್ಯೆ ತಡೆಗಟ್ಟಬಹುದಾಗಿದೆ ಎಂದು ಎಂಜನಿಯರ ರವಿಕುಮಾರ ತಿಳಿಸುತ್ತಾರೆ.

ಎಡದಂಡೆ ಮುಖ್ಯಕಾಲುವೆ ಸುಮಾರು 77. 52 ಕಿ.ಮೀ ಉದ್ದ ಚಲಿಸಿದೆ. 10,000 ಕ್ಯೂಸೆಕ್ಸ್ ನೀರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಹುಣಸಗಿ ಶಾಖಾ ಕಾಲುವೆ, ಶಹಾಪುರ ಶಾಖಾ ಕಾಲುವೆ, ಮುಡಬಾಳ ಶಾಖಾ ಕಾಲುವೆ ಹಾಗೂ ಜೇವರ್ಗಿ ಶಾಖಾ ಮತ್ತು ಇಂಡಿ ಶಾಖಾ ಕಾಲುವೆಗಳ ಸೇರಿ ಒಟ್ಟು 4.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಹೊಂದಿದೆ.

ಕೈಗೊಂಡ ಕಾಮಗಾರಿ: ಕಾಲುವೆ ಲೈನಿಂಗ್ ಮತ್ತು ಬ್ಯಾಂಕಿಂಗ್ ಕುಸಿತದಿಂದಾಗಿಯೇ 2012 ರಲ್ಲಿ ಕ್ಲೋಸರ್ ಅವಧಿಯಲ್ಲಿ ರೂ. 11,437 ಲಕ್ಷ ಅನುದಾನ ತಾಂತ್ರಿಕ ಮಂಜೂರಾತಿ ಪಡೆದು ಮುಖ್ಯಕಾಲುವೆ ಕಿಮೀ 41 ರಿಂದ 77 ಕಿಮೀ ವರೆಗೂ(ಪ್ಯಾಕೇಜ-1) ಅಲ್ಲಲ್ಲಿ ತುರ್ತು 25 ಕಿಮೀ ಕಾಮಗಾರಿ ಮೂರು ಪ್ಯಾಕೇಜ್‌ಗಳಲ್ಲಿ ನಡೆಸಲಾಗಿತ್ತು.

ಪ್ಯಾಕೇಜ ಎರಡರಲ್ಲಿ ಎಡದಂಡೆ ಕಾಲುವೆ ಕಿ.ಮೀ 62 ರಿಂದ 68 ರವರೆಗೂ ರೂ.5463.91 ಲಕ್ಷ ಅನುದಾನದಲ್ಲಿ ಆಧುನೀಕರಣಗೊಳಿಸಲಾಗಿತ್ತು. ಪ್ಯಾಕೇಜ ಮೂರರಲ್ಲಿ ಕಿ.ಮೀ. 70 ರಿಂದ 73 ರವರೆಗೆ ರೂ.3180.57 ಲಕ್ಷ ಅನುದಾನದಲ್ಲಿ ಕಾಮಗಾರಿ ಕೈಗೊಂಡು ಜೂನ್-2012 ರಲ್ಲಿ ಪೂರ್ಣಗೊಳಿಸಲಾಗಿದೆ.

ಇದನ್ನೂ ಓದಿ : ಹೆಚ್.ಕೆ.ಕುಮಾರಸ್ವಾಮಿ ರಾಜ್ಯದಲ್ಲಿಯೇ ಅತ್ಯಂತ ಸೋಮಾರಿ ಶಾಸಕ: ಹೆಚ್.ಎಂ.ವಿಶ್ವನಾಥ್ ವಾಗ್ದಾಳಿ

ಮುಖ್ಯವಾಗಿ ಕಾಲುವೆಯ 62 ರಿಂದ 68 ಕಮೀ ನಡುವೆ ಅಗ್ನಿ ಬಳಿಯೇ ಪದೇ ಪದೇ ಕಾಲುವೆ ಕುಸಿತಗೊಳ್ಳುತ್ತಿದೆ. 2014 ರಲ್ಲಿ ಮತ್ತು 2015 ರಲ್ಲಿ ಕುಸಿತಗೊಂಡ ನಂತರ 2017 ರಲ್ಲಿ ಕುಸಿದಿತ್ತು. ಮತ್ತೇ 2020 ರಲ್ಲಿ ಅದೇ ಸ್ಥಳದಲ್ಲಿಯೇ ಕುಸಿದು ಅಧಿಕಾರಿಗಳನ್ನು ಬೆಚ್ಚುಬೀಳಿಸಿತ್ತು.

ಸದ್ಯ ಪ್ರಸಕ್ತ 2022 ರಲ್ಲಿ ಅದೇ ಸ್ಥಳದಲ್ಲಿಯೇ ಕುಸಿತಗೊಂಡಿದ್ದು ಆಶ್ಚರ್ಯ ಮೂಡಿಸಿದೆ. ಮೂರು ಬಾರಿ ಸಂಬಂಧಿಸಿದ ಗುತ್ತಿಗೇದಾರರೆ ಕಾಲುವೆ ರಿಪೇರಿ ಮಾಡಿಸಿದ್ದಾರೆ. ಆದರೆ ನಾಲ್ಕನೆ ಬಾರಿ ಕೆಬಿಜೆಎನ್‌ಎಲ್ ನಿಗಮದ ಮೇಲಾಧಿಕಾರಿಗಳ ಮೇರೆಗೆ ಈಗಾ ಕುಸಿತ ಕಾಲುವೆ ತಾತ್ಕಾಲಿಕ ಕಾಮಗಾರಿ ಕೈಗೊಂಡಿದೆ ಎಂದು ಎಂಜನಿಯರ ತಿಳಿಸುತ್ತಾರೆ.

ಒಟ್ಟಾರೆ ಶಾಶ್ವತ ಪರಿಹಾರ ಹುಡಕಬೇಕು ಅಥವಾ ಪಕ್ಕದ ಸ್ಥಳದಲ್ಲಿ ಪರ್ಯಾಯ ಕಾಲುವೆ ಕಟ್ಟಿಂಗ್ ಮಾಡಬೇಕು ಎಂಬ ಒತ್ತಾಯ ರೈತಾಪಿ ಜನರಿಂದ ಕೇಳಿಬರುತ್ತಿದೆ.

ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರು ಭೇಟಿ ನೀಡಲಿದ್ದಾರೆ. ನಂತರ ಪರಿಶೀಲಿಸಿ ಅವರ ನಿರ್ಣಯದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು.

-ರವಿಕುಮಾರ, ಸಹಾಯಕ ಎಂಜಿನಿಯರ್, ಕೆಬಿಜೆಎನ್ ಎಲ್ ವಿಭಾಗ-7, ಹುಣಸಗಿ

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.