ಒಪ್ಪಂದದ ಪ್ರಕಾರವೇ ವನಿತಾ ಕ್ರಿಕೆಟಿಗರಿಗೆ ವೇತನ ನೀಡಲಾಗಿದೆ: ಬಿಸಿಸಿಐ
Team Udayavani, May 27, 2021, 12:10 AM IST
ಹೊಸದಿಲ್ಲಿ : ಭಾರತದ ವನಿತಾ ತಂಡದ ಆಟಗಾರ್ತಿಯರಿಗೆ ಕಳೆದ 8 ತಿಂಗಳಿಂದ ವೇತನ ಪಾವತಿ ಮಾಡಿಲ್ಲ ಎಂಬ ವರದಿಗಳನ್ನು ಬಿಸಿಸಿಐ ಅಲ್ಲಗಳೆದಿದೆ. ಪ್ರತಿಯೊಬ್ಬ ಆಟಗಾರ್ತಿಗೂ ಒಪ್ಪಂದದ ಪ್ರಕಾರವೇ ತಿಂಗಳ ವೇತನ ನೀಡಲಾಗಿದೆ ಎಂದು ಬುಧವಾರ ಸ್ಪಷ್ಟಪಡಿಸಿದೆ.
ಭಾರತ ತಂಡದ ವೇದಾ ಕೃಷ್ಣಮೂರ್ತಿ, ಏಕ್ತಾ ಬಿಷ್ಟ್, ಅನುಜಾ ಪಾಟೀಲ್ ಮತ್ತು ಡಿ. ಹೇಮಲತಾ ಮೊದಲಾದ ಆಟ ಗಾರ್ತಿಯರಿಗೆ ಕಳೆದ 8 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂಬ ವರದಿ ಕುರಿತು ಬಿಸಿಸಿಐ ಸ್ಪಷ್ಟನೆ ನೀಡಿತು. “ಈ ಸುದ್ದಿಯಲ್ಲಿ ಹುರುಳಿಲ್ಲ. ಒಪ್ಪಂದದ ಪ್ರಕಾರ ಎಲ್ಲ ಆಟಗಾರ್ತಿಯರಿಗೂ ತಿಂಗಳ ವೇತನ ಪಾವತಿ ಮಾಡಲಾಗಿದೆ’ ಎಂದು ತಿಳಿಸಿದೆ.
ಇದನ್ನೂ ಓದಿ :ಉನಾದ್ಕತ್ಗೆ ತಂಡದ ಬಾಗಿಲು ಎಂದೋ ಮುಚ್ಚಿದೆ!
“ವಾರ್ಷಿಕ ಒಪ್ಪಂದದಂತೆ ಎಲ್ಲ ಆಟಗಾರ್ತಿಯರಿಗೂ ವೇತನ ಪಾವತಿ ಮಾಡಲಾಗುತ್ತಿದೆ. ಕಳೆದ 2020ರ ವಾರ್ಷಿಕ ಒಪ್ಪಂದ ಸಪ್ಟೆಂಬರ್ನಲ್ಲಿ ಕೊನೆಗೊಂಡಿದೆ. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಪಾವತಿಗಳನ್ನು ಮಾಡಲಾಗಿದೆ’ ಎಂದು ಬಿಸಿಸಿಐ ಉನ್ನತ ಹುದ್ದೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.