Udayavni Special

ಭೀಮಾ ನದಿಯಲ್ಲಿ ನೀರಿನ ಹರಿವು ಇಳಿದರೂ ಜನರಲ್ಲಿ ತಗ್ಗದ ಪ್ರವಾಹ ಭೀತಿ !

ಮಧ್ಯರಾತ್ರಿ 8 ಲಕ್ಷ ಕ್ಯೂಸೆಕ್‌ ಹರಿವು ಹೆಚ್ಚುವ ಸಾಧ್ಯತೆ

Team Udayavani, Oct 17, 2020, 10:42 PM IST

ಭೀಮಾ ನದಿಯಲ್ಲಿ ನೀರಿನ ಹರಿವು ಇಳಿದರೂ ಜನರಲ್ಲಿ ತಗ್ಗದ ಪ್ರವಾಹ ಭೀತಿ !

ಯಾದಗಿರಿ; ಸದ್ಯಕ್ಕೆ ಭೀಮಾನದಿಯಲ್ಲಿ ಒಳಹರಿವು 2.70 ಲಕ್ಷ ಕ್ಯೂಸೆಕ್‌ಗೆ ಇಳಿಕೆಯಾದರೂ ಜಿಲ್ಲೆಯ ಜನರಲ್ಲಿ ಪ್ರವಾಹದ ಭೀತಿ ಆವರಿಸಿದೆ. ಸನ್ನತಿ ಬ್ಯಾರೇಜ್‌ಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ರಾತ್ರಿವೇಳೆ ಪ್ರವಾಹ ಹೆಚ್ಚಾದರೂ ಆಗಬಹುದು ಎಂದು ಸುಳಿವು ನೀಡಿದ್ದಾರೆ.

ಕಳೆದರೆಡು ದಿನಗಳಿಂದ ಭೀಮಾನದಿ ಪಾತ್ರಕ್ಕೆ 3.70 ಲಕ್ಷ ಕ್ಯೂಸೆಕ್ ವರೆಗೆ ನೀರು ಹರಿಸಲಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ 7 ಲಕ್ಷ ಕ್ಯೂಸೆಕ್ ಒಳಹರಿವು ಹೆಚ್ಚಳವಾಗುವ ಸಾಧ್ಯತೆಯ ಕುರಿತು ಜಿಲ್ಲಾಡಳಿತ ಎಚ್ಚರಿಕೆಯನ್ನು ನೀಡಿತ್ತು. ಆದರೇ, ಪ್ರಸ್ತುತ ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಸಂಜೆ ವೇಳೆಗೆ ಕೊಂಚಮಟ್ಟಿಗೆ ಪ್ರವಾಹ ಇಳಿಕೆ ಕಂಡಿದ್ದು ಶನಿವಾರ ಸಂಜೆ ವೇಳೆಗೆ ನೀರಿನ ಪ್ರಮಾಣ ಮತ್ತಷ್ಟು ಇಳಿಕೆಯಾಗಿದೆ.

ಕಲಬುರಗಿಯ ಸೊನ್ನ ಬ್ಯಾರೇಜ್‌ನಿಂದ 8 ಲಕ್ಷ ಕ್ಯೂಸೆಕ್ ನೀರು ಹರಿದು ಬರುವ ಕುರಿತು ಅಲ್ಲಿನ ಜಿಲ್ಲಾಡಳಿತ ಎಚ್ಚರಿಕೆ ನೀಡುತ್ತಿದ್ದಂತೆ ಯಾದಗಿರಿಯಲ್ಲಿ ಜನರು ತೀವ್ರ ಆತಂಕದ ಸ್ಥಿತಿಗೆ ಸಿಲುಕಿದ್ದಾರೆ. ಪ್ರವಾಹ 3 ಲಕ್ಷ ಕ್ಯೂಸೆಕ್ ಆಸುಪಾಸಿನಲ್ಲಿಯೇ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು ಇನ್ನೂ 8 ಲಕ್ಷ ಕ್ಯೂಸೆಕ್ ನೀರು ಬಂದರೆ ನಮ್ಮ ಪಾಡೇನು ಎಂದು ರೈತರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ, ಶಿರವಾಳ, ರೋಜಾ ಎಸ್, ಅಣಬಿ, ಹಬ್ಬಳ್ಳಿ, ತಂಗಡಗಿ, ಮರಮಕಲ್, ಬಲಕಲ್, ನಾಲವಡಗಿ, ಯಾದಗಿರಿ ತಾಲೂಕಿನ ಗೂಡೂರು, ಗೊಂದಡಗಿ, ಭೀಮನಳ್ಳಿ, ಬೆಳಗುಂದಿ, ಆನೂರು(ಬಿ)ಮತ್ತು (ಕೆ),ಸಾವೂರ, ಮಲ್ಹಾರ, ಲಿಂಗೇರಿ, ಕೌಳೂರು, ಮುಷ್ಟೂರು, ಎಮ್.ಹೊಸಳ್ಳಿ, ಯಾದಗಿರಿ(ಬಿ), ಅಬ್ಬೆತುಮಕೂರು, ಠಾಣಗುಂದಿ, ಹೆಡಗಿಮದ್ರಾ, ತಳಕ್ ಮತ್ತು ವಡಗೇರಾ ತಾಲೂಕಿ ಹಾಲಗೇರಾ, ಗೋಡಿಹಾಳ, ಕಂದಹಳ್ಳಿ, ಕುಮನೂರು, ಅರ್ಜುನಗಿ, ಬಿಳ್ಹಾರ, ಬೂದಿಹಾಳ, ಬೆನಕನಹಳ್ಳಿ, ಶಿವನೂರು, ಸೂಗೂರು, ಜೋಳದಡಗಿ, ಸಂಗಮ್, ಮಾಚನೂರು, ನಾಯ್ಕಲ್, ಗಡ್ಡೆಸೂಗೂರ, ಬೀರನಾಳ, ಬಬಲಾದ್ ಹಾಗೂ ಹುಲಕಲ್ ಗ್ರಾಮ ಸೇರಿದಂತೆ 45ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹ ನೀರು ನುಗ್ಗುವ ಆತಂಕವಿದೆ.

ಈಗಾಗಲೇ ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ 14ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಕಾಳಜಿ ಕೇಂದ್ರಗಳಲ್ಲಿ ಇರಿಸಿದ್ದು, ನೋಡಲ್ ಅಧಿಕಾರಿಗಳನ್ನು ನೇಮಿಸಿ ಅಗತ್ಯ ಮುನ್ನೆಚ್ಚರಿಕೆಯನ್ನುವಹಿಸಿದೆ. ಸನ್ನತಿ ಬ್ಯಾರೇಜ್‌ನಿಂದ ಹೆಚ್ಚಿನ ನೀರು ಬರುವ ಸಾಧ್ಯತೆಯಿಂದ ಯಾದಗಿರಿಯ ಹೊರವಲಯದ ಗುರುಸಣಿಗಿ ಬ್ರಿಡ್ಜ್ ಕಂ ಬ್ಯಾರೇಜ್ ನ 14 ಗೇಟ್ ಗಳನ್ನು ತೆರೆದು ಭೀಮಾ ತೀರಕ್ಕೆ ನೀರು ಹರಿಸಲಾಗುತ್ತಿದೆ.

ಯಾದಗಿರಿ ಹೊರವಲಯದ ಭೀಮಾ ನದಿ ತೀರದಲ್ಲಿರುವ ಕುಡಿಯುವ ನೀರು ಸರಬರಾಜು ಘಟಕ ಶುಕ್ರವಾರ ಪ್ರವಾಹದಲ್ಲಿ ಜಲಾವೃತಗೊಂಡಿತ್ತು. ಶನಿವಾರ ಸಂಜೆ ವೇಳೆ ಪ್ರವಾಹ ನೀರು ಸಂಪೂರ್ಣ ಇಳಿಕೆಯಾಗಿದ್ದು ಕಂಡು ಬಂತು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

irani

ಪೊಲೀಸರೆಂದು ನಂಬಿಸಿ, ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್ ನ ನಾಲ್ವರ ಬಂಧನ

vijayendra

ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಬಿ.ವೈ. ವಿಜಯೇಂದ್ರ

jds

ಕುಂದಗೋಳ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಎಸ್ ಅಕ್ಕಿ ಕಾಂಗ್ರೆಸ್ ಸೇರ್ಪಡೆ

01

ಲಾಕ್ ಡೌನ್ ವೇಳೆ ಕಾರ್ಮಿಕರ ಪಾಡನ್ನು ಹಾಡಿನ ರೂಪದಲ್ಲಿ ಬರೆದು “RAPPER” ಆದ ಯುವಕ

ಖರೀದಿದಾರರ ಕಣ್ಣಲ್ಲಿ ನೀರು!: ಮುಂಬೈ, ಪೂನಾದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ

ಖರೀದಿದಾರರ ಕಣ್ಣಲ್ಲಿ ನೀರು!: ಮುಂಬೈ, ಪೂನಾದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ…

puneeth

ಅಂಜನಾದ್ರಿ ಆಂಜನೇಯನ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HASAN-TDY-1

ಮಳೆಗೆ ಕಳೆಕಟ್ಟಿದ ರಾಗಿ ಬೆಳೆ

KOLAR-TDY-2

ಮರು ಮೌಲ್ಯ ಮಾಪನ: 135 ಶಾಲೆಗೆ ಶೇ.100 ಫ‌ಲಿತಾಂಶ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

irani

ಪೊಲೀಸರೆಂದು ನಂಬಿಸಿ, ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್ ನ ನಾಲ್ವರ ಬಂಧನ

KOLAR-TDY-1

ಕೋವಿಡ್ ಸಾವಿನ ಪ್ರಮಾಣ ತಗ್ಗಿಸಲು ಪರೀಕ್ಷೆ ಹೆಚ್ಚಿಸಿ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

HASAN-TDY-1

ಮಳೆಗೆ ಕಳೆಕಟ್ಟಿದ ರಾಗಿ ಬೆಳೆ

KOLAR-TDY-2

ಮರು ಮೌಲ್ಯ ಮಾಪನ: 135 ಶಾಲೆಗೆ ಶೇ.100 ಫ‌ಲಿತಾಂಶ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

irani

ಪೊಲೀಸರೆಂದು ನಂಬಿಸಿ, ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್ ನ ನಾಲ್ವರ ಬಂಧನ

KOLAR-TDY-1

ಕೋವಿಡ್ ಸಾವಿನ ಪ್ರಮಾಣ ತಗ್ಗಿಸಲು ಪರೀಕ್ಷೆ ಹೆಚ್ಚಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.