ಬೀದರ್ – ಬೆಂಗಳೂರು ವಿಮಾನಯಾನ ಆರಂಭ
Team Udayavani, May 25, 2020, 7:17 PM IST
ಬೀದರ್: ಲಾಕ್‌ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ದೇಶಿಯ ವಿಮಾನಯಾನ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿರುವುದರಿಂದ ಮೊದಲ ದಿನವಾದ ಸೋಮವಾರದಿಂದ ಬೆಂಗಳೂರು ಮತ್ತು ಬೀದರ್ ನಡುವೆ ವಿಮಾನ ಹಾರಾಟ ಪ್ರಾರಂಭವಾಗಿದೆ.
ಫೆ. 7ರಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಂಡಿದ್ದ ನಾಗರಿಕ ವಿಮಾನಯಾನ ಸೇವೆ ನಂತರ ಕೋವಿಡ್ ಲಾಕ್‌ಡೌನ್ ಕಾರಣ ಕಳೆದ ಎರಡು ತಿಂಗಳಿಂದ ಸೇವೆ ಸ್ಥಗಿತಗೊಂಡಿತ್ತು. ಸೋಮವಾರದಿಂದ ವಿಮಾನಯಾನ ಆರಂಭಗೊಂಡಿದ್ದು, 70 ಸೀಟಿನ ಆಸನವುಳ್ಳ ಟ್ರೂಜೆಟ್ ಸಂಸ್ಥೆಯ ವಿಮಾನ ಬೆಳಿಗ್ಗೆ ಬೆಂಗಳೂರಿನಿಂದ ಬೆಳಿಗ್ಗೆ 11.45ಕ್ಕೆ ಹೊರಟು ನಗರದ ಹೊರವಲಯದ ಚಿದ್ರಿ ಬಳಿಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1.25ಕ್ಕೆ ಬಂದಿಳಿಯಿತು. ಒಟ್ಟು 8 ಜನರು ಪ್ರಯಾಣ ಮಾಡಿದರು.
ಇನ್ನೂ ಇದೇ ವಿಮಾನ ಮರಳಿ ಮಧ್ಯಾಹ್ನ 2 ಗಂಟೆಗೆ ಬೀದರ್ ನಿಂದ ಬೆಂಗಳೂರಿಗೆ ಹೊರಟು ಮಧ್ಯಾಹ್ನ 3.40ಕ್ಕೆ ತಲುಪಿತು. ಬೀದರ್ ನಿಂದ 11 ಜನರು ರಾಜಧಾನಿಗೆ ಪ್ರಯಾಣ ಬೆಳೆಸಿರು. ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಯಿತು. ಮಾಸ್ಕ್‌ಗಳ ಬಳಕೆ ಕಡ್ಡಾಯ ಮಾಡಲಾಗಿದ್ದು, ಜಿಎಂಆರ್ ಸಂಸ್ಥೆ ಸಿಬ್ಬಂದಿಗಳು ಎಲ್ಲ ಪ್ರಯಾಣಿಕರ ಥರ್ಮಲ್ ಸ್ಕ್ಯಾನಿಂಗ್ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ