ಪೈಲ್ವಾನ್‌ ಎದುರು ಸುಲ್ತಾನ್‌! ಹೌದು ಸ್ವಾಮಿ ನಿಜ

Team Udayavani, Dec 7, 2019, 8:19 PM IST

ಬೆಂಗಳೂರು: ಕನ್ನಡದ ಜನಪ್ರಿಯ ಲಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 7 ಕಾರ್ಯಕ್ರಮ ನಿರೀಕ್ಷೆಗಿಂತ ಚೆನ್ನಾಗಿ ಮೂಡಿಬರುತ್ತಿದೆ. ಈಗಾಗಲೇ 50 ಎಪಿಸೋಡ್‌ಗಳನ್ನು ಪೂರೈಸಿದೆ. ಈ ವಾರ ವೀಕ್ಷಕರಿಗೆ ಕುತೂಹಲದ ಸಂಗತಿಯನ್ನು ವಾಹಿನಿ ಬಿಡುಗಡೆ ಮಾಡಿದೆ. ಅಂದ ಹಾಗೆ ಈ ವಾರಾಂತ್ಯದಲ್ಲಿ ಮನರಂಜನೆಯಂತೂ ಭರ್ಜರಿಯಾಗಿಯೇ ಇದೆ.

ಈ ವಾರ ಎಲಿಮಿನೇಶನ್‌ ಒಂದು ನಡೆಯಲಿದ್ದು, ಅದರ ಜತೆಗೆ ಮೇಲೆ ಇಬ್ಬರು ಸೂಪರ್‌ ಸ್ಟಾರ್‌ಗಳು ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಾರ ಕ್ಯಾಪ್ಟನ್‌ ಬಿಟ್ಟು 12 ಜನರು ಎಲಿಮಿನೇಶನ್‌ಗೆ ನಾಮಿನೇಟ್‌ ಆಗಿದ್ದಾರೆ. ಅವರಲ್ಲಿ ಒಬ್ಬರನ್ನು ಬಿಗ್‌ ಬಾಸ್‌ ಹೊರಕ್ಕೆ ಕಳುಹಿಸಲಿದೆ. ಈ ವಾರದ ಮನೆಯಿಂದ ಹೊರ ಬಂದ ಸ್ಪರ್ಧಿಗೆ ಮನೆಯಿಂದ ಹೊರ ಬರುವಾಗ ಬೇಸರ ಆದರೂ, ವೇದಿಕೆ ಮೇಲೆ ಸಂಭ್ರಮ ಪಡಲಿದ್ದಾರೆ. ಏಕೆಂದರೆ ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್‌ ಒಂದು ಕಡೆಯಾದರೆ ಮತ್ತೂಂದು ಕಡೆ ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ಅವರು ಕನ್ನಡ ಎಪಿಸೋಡ್‌ನ‌ ಬಿಗ್‌ಬಾಸ್‌ ಸೀಸನ್‌ 7ನಲ್ಲಿ ಭಾಗಿಯಾಗಿದ್ದಾರೆ.

ಹೌದು. ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಇದೇ ಮೊತ್ತ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತಂತೆ ಹೊರಗಡೆ ಹರಿದಾಡುತ್ತಿದ್ದ ಸುದ್ದಿಯನ್ನು ಖಚಿತ ಪಡಿಸಿರುವ ಕಲರ್ಸ್‌ ಕನ್ನಡ ಇದರ ಪ್ರೊಮೋ ವೊಂದನ್ನು ಹರಿಯ ಬಿಟ್ಟಿದೆ. ಸಲ್ಲು ಭಾಯ್‌ ಕನ್ನಡದಲ್ಲೇ ಮಾತನಾಡಿದರ ತುಣುಕೂ ಇದರಲ್ಲಿದ್ದು, ವೀಕ್ಷಕರು ಫಿಧಾ ಆಗಿದ್ದಾರೆ.

ಹಿಂದಿ ಅವತರಣಿಕೆಯ ಹಿಂದಿ ಬಿಗ್‌ಬಾಸ್‌ನಲ್ಲಿ ನಟ ಸಲ್ಮಾನ್‌ ಖಾನ್‌ ನಿರೂಪಣೆ ಮಾಡುತ್ತಿದ್ದ, ಕನ್ನಡದಲ್ಲಿ ನಟ ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಚೆನ್ನಾಗಿ ಮೂಡಿಬರುತ್ತಿದೆ. ಈ ಎರಡು ಮೇರು ನಟರನ್ನು ಇದೀಗ ಒಂದೇ ವೇದಿಕೆಯಲ್ಲಿ ಕಾಣಬಹುದಾಗಿದೆ. ಅಂದಹಾಗೆ ಸಲ್ಮಾನ್‌ ಖಾನ್‌ ಮತ್ತು ಕಿಚ್ಚ ಸುದೀಪ್‌ ನಟನೆಯ ದಬಾಂಗ್‌ 3 ಸಿನಿಮಾ ಈ ತಿಂಗಳಾಂತ್ಯದಲ್ಲಿ ತೆರೆಗೆ ಬರಲಿದೆ.ಅಂತೂ ಬಿಗ್‌ಬಾಸ್‌ ಸ್ಪರ್ಧಿಗಳು ಸೇರಿದಂತೆ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ