Udayavni Special

ಬಂಡಾಯಕ್ಕೆ ಸುಸ್ತು: ರಾಣೆಬೆನ್ನೂರಿನಲ್ಲಿ ತೀವ್ರವಾದ ಭಿನ್ನಮತ

ವಿಜಯನಗರದಲ್ಲೂ ಬಂಡಾಯದ ತಲೆನೋವು

Team Udayavani, Nov 17, 2019, 6:10 AM IST

nn-37

ರಮೇಶ ಜಾರಕಿಹೊಳಿ ಹಾಗೂ ಕೇಂದ್ರ ಸಚಿವ ಸುರೇಶ್‌ ಅಂಗಡಿ ಅವರು ಬಿಜೆಪಿ ಟಿಕೆಟ್‌ ಆಕಾಂಕ್ಷಿ ಅಶೋಕ್‌ ಪೂಜಾರಿ ಅವರ ಮನೆಗೆ ತೆರಳಿ ಮನವೊಲಿಸಲು ಮಾತುಕತೆ ನಡೆಸಿದರು.

ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಶಮನಗೊಳಿಸಿ ನಿಟ್ಟುಸಿರು ಬಿಟ್ಟಿದ್ದ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರಿಗೆ ಈಗ ವಿಜಯನಗರ, ರಾಣೆಬೆನ್ನೂರು, ಗೋಕಾಕ್‌ನಲ್ಲಿ ಮೂಡಿಸುವ ಭಿನ್ನಮತ ತಲೆನೋವು ತಂದಿದೆ.

ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಸೋಮವಾರ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಕಣಕ್ಕಿಳಿಯದಂತೆ ತಡೆಯಲು ಬಿಜೆಪಿ ನಾಯಕರು, ಚುನಾವಣ ಉಸ್ತುವಾರಿಗಳು ಇನ್ನಿಲ್ಲದ ಕಸರತ್ತು ಮುಂದು ವರಿಸಿದ್ದಾರೆ. ಟಿಕೆಟ್‌ ಸಿಗದ ಕಾರಣ ಅಸಮಾಧಾನಗೊಂಡ ಕೆಲವರೊಂದಿಗೆ ಯಡಿ ಯೂರಪ್ಪ ಖುದ್ದಾಗಿ ಮಾತುಕತೆ ನಡೆಸಿ ಮನವೊಲಿಸುತ್ತಿದ್ದು, ಕೆಲವೆಡೆ ಫ‌ಲ ನೀಡಿದೆ. ಆದರೆ ಮೂರ್‍ನಾಲ್ಕು ಕ್ಷೇತ್ರಗಳಲ್ಲಿ ಸಮಸ್ಯೆ ನಿವಾರಣೆಯಾಗಿಲ್ಲ. ಬಂಡಾಯ ಉಪಶಮನದ ಜತೆಗೆ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರಕ್ಕೂ ಬಿಜೆಪಿ ಸಿದ್ಧತೆ ನಡೆಸಿದ್ದು, ಸೋಮವಾರದಿಂದ ಯಡಿ ಯೂರಪ್ಪ ಆದಿಯಾಗಿ ಹಿರಿಯ ನಾಯಕರು ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ.

ಟಿಕೆಟ್‌ ಸಿಗದ ಕಾರಣ ಅಸಮಾಧಾನಗೊಂಡಿದ್ದ ಡಿಸಿಎಂ ಲಕ್ಷ್ಮಣ ಸವದಿ, ಅನರ್ಹ ಶಾಸಕ ಆರ್‌. ಶಂಕರ್‌ ಅವರೊಂದಿಗೆ ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರು ಶುಕ್ರವಾರ ನಡೆಸಿದ ಸಂಧಾನ ಯಶಸ್ವಿಯಾಗಿದ್ದರಿಂದ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಆದರೆ ರಾಣೆಬೆನ್ನೂರು ಕ್ಷೇತ್ರದಲ್ಲಿ ಅರುಣ್‌ಕುಮಾರ್‌ ಪೂಜಾರ್‌ಗೆ ಟಿಕೆಟ್‌ ನೀಡಿ ರುವುದಕ್ಕೆ ಸಿಟ್ಟುಗೊಂಡಿರುವ ಕಾರ್ಯ ಕರ್ತರು ಕಳೆದ ಚುನಾವಣೆಯಲ್ಲಿ ಸೋತಿದ್ದ ಬಸವರಾಜ್‌ ಕೇಲ್ಗಾರ್‌ಗೆ ಟಿಕೆಟ್‌ ನೀಡು ವಂತೆ ಒತ್ತಾಯಿಸ ಲಾರಂಭಿಸಿದ್ದಾರೆ.

ಬಂಡಾಯವಾಗಿ ಸ್ಪರ್ಧಿಸುವೆ
ವಿಜಯಪುರದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಸಹಿತ ಹಿರಿಯ ನಾಯಕರು ಮನವೊಲಿಕೆ ನಡೆಸಿದರೂ ಕವಿರಾಜ್‌ ಮುನಿಸು ಶಮನವಾಗಿಲ್ಲ. ರವಿವಾರ ನಾಮಪತ್ರ ಸಲ್ಲಿಕೆಗೆ ಅವಕಾಶವಿಲ್ಲದ ಕಾರಣ ಮತ್ತೂಂದು ಸುತ್ತಿನ ಮಾತುಕತೆ ಮೂಲಕ ಮನವೊಲಿಕೆಗೆ ಪ್ರಯತ್ನ ಮುಂದುವರಿಸಿದ್ದಾರೆ.

ಕೇಂದ್ರ ಸಚಿವರ ಮಾತುಕತೆ
ಗೋಕಾಕ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅಶೋಕ್‌ ಪೂಜಾರಿ ಟಿಕೆಟ್‌ ಪಡೆಯಲು ಕೊನೆಯ ಹಂತದ ಪ್ರಯತ್ನ ನಡೆಸಿದಂತಿದೆ. ಅವರನ್ನೂ ಮನವೊಲಿಸಿ ವಿಶ್ವಾಸದಲ್ಲಿರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಮನವೊಲಿಕೆಗೆ ಮುಂದುವರಿದ ಯತ್ನ ಹೊಸಕೋಟೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿ ಯಾಗಿ ಶರತ್‌ ಬಚ್ಚೇಗೌಡ ನಾಮಪತ್ರ ಸಲ್ಲಿಸಿರು ವುದು ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್‌ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ಹೊಸಕೋಟೆ ಚುನಾವಣ ಉಸ್ತುವಾರಿ ಡಿಸಿಎಂ ಡಾ| ಅಶ್ವತ್ಥ ನಾರಾಯಣ ಮಾತುಕತೆ ನಡೆಸಿದ್ದಾರೆ.

2 ಕ್ಷೇತ್ರಗಳಲ್ಲಿ ಬಂಡಾಯ ಉಪಶಮನ
ಯಶವಂತಪುರ ಕ್ಷೇತ್ರದಿಂದ ಎಸ್‌.ಟಿ. ಸೋಮಶೇಖರ್‌ ಅವರಿಗೆ ಟಿಕೆಟ್‌ ನೀಡಿರುವುದರಿಂದ ಬೇಸರಗೊಂಡಿದ್ದ ಜಗ್ಗೇಶ್‌ ಮತ್ತು ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಟಿಕೆಟ್‌ ಅನ್ನು ಕೆ.ಗೋಪಾಲಯ್ಯ ಅವರಿಗೆ ನೀಡಿರುವುದರಿಂದ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಅವರೊಂದಿಗೆ ಯಡಿಯೂರಪ್ಪ ಅವರೇ ಖುದ್ದಾಗಿ ಮಾತುಕತೆ ನಡೆಸಿದ್ದು, ಬಂಡಾಯ ಉಪಶಮನಗೊಂಡಂತಾಗಿದೆ.

ಕ್ರಮಕ್ಕೆ ಹಿಂದೇಟು
ಹಲವೆಡೆ ಪಕ್ಷದ ಮುಖಂಡರು, ಪರಾಜಿತ ಅಭ್ಯರ್ಥಿಗಳು, ಮಾಜಿ ಶಾಸಕರು ಬಂಡಾಯವೆದ್ದಿದ್ದರೂ ಬಿಜೆಪಿ ಶಿಸ್ತು ಕ್ರಮ ಜರುಗಿಸಲು ಸದ್ಯಕ್ಕೆ ಮುಂದಾಗಿಲ್ಲ. ಪ್ರತಿ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿ ಗೆಲ್ಲುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕಿಂತ ಮನವೊಲಿಕೆಗೆ ರಾಜ್ಯ ನಾಯಕರು ಒತ್ತು ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಅನಂತರ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಜೆಪಿ ಸಮನ್ವಯ ಸಭೆ
ಒಂದೆಡೆ ಯಡಿಯೂರಪ್ಪ ಬಂಡಾಯ ವೆದ್ದಿರುವ ನಾಯಕರು, ಮುಖಂಡರ ಮನ ವೊಲಿಸುತ್ತಿದ್ದರೆ, ಮತ್ತೂಂದೆಡೆ ಸಂಘಟನ ಪ್ರಮುಖರು, ಹಿರಿಯ ನಾಯಕರು ಅನರ್ಹ ಶಾಸಕರ ಬೆಂಬಲಿಗರು ಮತ್ತು ಪಕ್ಷದ ಕಾರ್ಯ ಕರ್ತರ ನಡುವೆ ಸಮನ್ವಯ ಸಾಧಿಸುವ ಪ್ರಯತ್ನ ನಡೆಸಿದ್ದಾರೆ. ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಶುಕ್ರವಾರ, ಶನಿವಾರ ಪಕ್ಷದ ಕಾರ್ಯಕರ್ತರು, ಅನರ್ಹ ಶಾಸಕರ ಬೆಂಬಲಿಗರ ಸಭೆ ನಡೆಸಿ ಒಟ್ಟುಗೂಡಿಸುವ ಕಾರ್ಯ ನಡೆದಿದೆ. ರವಿವಾರವೂ ಕೆಲವು ಕ್ಷೇತ್ರಗಳಲ್ಲಿ ಸಭೆ ನಡೆಸಿ ಸಂಘಟಿಸಲಾಗುವುದು. ಆ ಮೂಲಕ ಸೋಮವಾರದಿಂದ ಉಪ ಚುನಾ ವಣೆ ನಡೆಯಲಿರುವ ಎಲ್ಲ 15 ಕ್ಷೇತ್ರ ಗಳಲ್ಲೂ ಪಕ್ಷದ ಕಾರ್ಯಕರ್ತರು, ಅನರ್ಹ ಶಾಸಕರ ಬೆಂಬಲಿಗರು ಒಟ್ಟಾಗಿ ಪ್ರಚಾರಕ್ಕಿಳಿಯಲು ವೇದಿಕೆ ಸಜ್ಜುಗೊಳಿಸಿ ದಂತಾಗುತ್ತದೆ. ಸರಕಾರ ವನ್ನು ಸುಭದ್ರ ವಾಗಿಸುವ ನಿಟ್ಟಿನಲ್ಲಿ ಸಂಘ ಟನೆಯು ಸಂಪೂರ್ಣ ತೊಡಗಿಸಿ ಕೊಂಡಿದ್ದು, ಬಂಡಾಯವನ್ನು ಬಹುತೇಕ ಉಪ ಶಮನ ಗೊಳಿಸುವ ವಿಶ್ವಾಸವಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರು ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಲುಧಿಯಾನಾ ನಗರಕ್ಕೆ ಕಾಡಿದ ಆತ್ಮಹತ್ಯೆ ಭೂತ

ಲುಧಿಯಾನಾ ನಗರಕ್ಕೆ ಕಾಡಿದ ಆತ್ಮಹತ್ಯೆ ಭೂತ

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ

ಪುಣೆ: ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ, ದರೋಡೆ

ಪುಣೆ: ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ, ದರೋಡೆ

ಚಾರ್ಮಾಡಿ ಘಾಟಿಯಲ್ಲಿ ಬೃಹದಾಕಾರದ ಬಂಡೆಗಳ ಕುಸಿತ! ತೆರವು ಕಾರ್ಯ ಪ್ರಗತಿಯಲ್ಲಿ

ಚಾರ್ಮಾಡಿ ಘಾಟಿಯಲ್ಲಿ ಬೃಹದಾಕಾರದ ಬಂಡೆಗಳ ಕುಸಿತ! ತೆರವು ಕಾರ್ಯ ಪ್ರಗತಿಯಲ್ಲಿ

ಚಾಮರಾಜನಗರ: ಜಿಲ್ಲೆಯಲ್ಲಿ 49 ಹೊಸ ಪ್ರಕರಣಗಳು ಪತ್ತೆ: 21 ಗುಣಮುಖ

ಚಾಮರಾಜನಗರ: ಜಿಲ್ಲೆಯಲ್ಲಿ 49 ಹೊಸ ಪ್ರಕರಣಗಳು ಪತ್ತೆ: 21 ಗುಣಮುಖ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ

ಕದ್ರಾ ಜಲಾಶಯ ಭರ್ತಿಯಾಗಿ 6 ಗೇಟ್ ನಿಂದ ನೀರು ಹೊರಕ್ಕೆ : ನದಿ ದಂಡೆಯ ಜನರಿಗೆ ಎಚ್ಚರಿಕೆ

ಮಳೆಯಿಂದ ಕದ್ರಾ ಜಲಾಶಯ ಭರ್ತಿಯಾಗಿ 6 ಗೇಟ್ ನಿಂದ ನೀರು ಹೊರಕ್ಕೆ :ತಗ್ಗು ಪ್ರದೇಶಗಳು ಜಲಾವೃತ

ಅಬಕಾರಿ ಸಚಿವರ ಮೂವರು ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ದೃಢ

ಅಬಕಾರಿ ಸಚಿವರ ಮೂವರು ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ದೃಢ

ಗುಲಾಮಗಿರಿ ಸಂಕೇತ ನಶಿಸಿ ಕಾಶಿ, ಮಥುರಾದಲ್ಲೂ ಮಂದಿರ ನಿರ್ಮಾಣವಾಗಲಿ: ಸಚಿವ ಈಶ್ವರಪ್ಪ

ಗುಲಾಮಗಿರಿ ಸಂಕೇತ ನಶಿಸಿ ಕಾಶಿ, ಮಥುರಾದಲ್ಲೂ ಮಂದಿರ ನಿರ್ಮಾಣವಾಗಲಿ: ಸಚಿವ ಈಶ್ವರಪ್ಪ

MUST WATCH

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mysteryಹೊಸ ಸೇರ್ಪಡೆ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಲುಧಿಯಾನಾ ನಗರಕ್ಕೆ ಕಾಡಿದ ಆತ್ಮಹತ್ಯೆ ಭೂತ

ಲುಧಿಯಾನಾ ನಗರಕ್ಕೆ ಕಾಡಿದ ಆತ್ಮಹತ್ಯೆ ಭೂತ

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ

ಪುಣೆ: ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ, ದರೋಡೆ

ಪುಣೆ: ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ, ದರೋಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.