BJP-JDS: ಭ್ರಷ್ಟಾಚಾರಿಗಳಿಂದಲೇ ಪಾದಯಾತ್ರೆ ಹಾಸ್ಯಾಸ್ಪದ: ರಮಾನಾಥ ರೈ
Team Udayavani, Aug 4, 2024, 12:42 AM IST
ಮಂಗಳೂರು: ಆಡಳಿತದಲ್ಲಿದ್ದಾಗ ತಾವೇ ಭ್ರಷ್ಟಾಚಾರ ಮಾಡಿದ್ದ ಬಿಜೆಪಿಯವರು ಈಗ ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣವೇ ಅಲ್ಲದ ವಿಷಯವನ್ನು ಮುಂದಿಟ್ಟುಕೊಂಡು ಯಾತ್ರೆ ಮಾಡುತ್ತಿದ್ದಾರೆ. ರಾಜಕೀಯ ವಿಷಯವನ್ನು ಮುಂದಿಟ್ಟು ಸರಕಾರ ಮತ್ತು ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರಬೇಕು ಎಂದು ಬಿಜೆಪಿ – ಜೆಡಿಎಸ್ ಪಾದಯಾತ್ರೆ ಆಯೋಜಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್ ಕೊಟ್ಟಿರುವುದರಲ್ಲಿ ಅಧಿಕಾರ ದುರುಪಯೋಗ ಕಾಣಿಸುತ್ತಿದೆ. ಆದ್ದರಿಂದ ಜನರಿಗೆ ಸತ್ಯ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದರು.
ಕಸ್ತೂರಿರಂಗನ್ ವರದಿ ಕೇಂದ್ರ ಅನುಷ್ಠಾನ ಮಾಡಲಿ
ಪಶ್ಚಿಮ ಘಟ್ಟಗಳ ರಕ್ಷಣೆ ಉದ್ದೇಶದಿಂದ ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಕೇಂದ್ರ ಸರಕಾರದ್ದು. ರಾಜ್ಯ ಸರಕಾರಗಳು ವರದಿಯಲ್ಲಿ ಕೆಲವು ಬದಲಾವಣೆ ಮಾಡಲು ಸೂಚಿಸಬಹುದಷ್ಟೇ. ಜನ ವಸತಿಗೆ ತೊಂದರೆಯಾಗದ ರೀತಿಯಲ್ಲಿ ರಾಜ್ಯ ಸರಕಾರಗಳ ಸಲಹೆಯನ್ನು ಪರಿಗಣಿಸಿ ಕೇಂದ್ರ ಸರಕಾರ ತೀರ್ಮಾನ ಕೈಗೊಳ್ಳಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.
ಮುಖಂಡರಾದ ಎಂ.ಶಶಿಧರ ಹೆಗ್ಡೆ, ಕೆ.ಅಶ್ರಫ್, ನವೀನ್ ಡಿ’ಸೋಜಾ, ಹರಿನಾಥ್, ಅಪ್ಪಿ, ಟಿ.ಕೆ.ಸುಧೀರ್, ಎಂ.ಜಿ.ಹೆಗ್ಡೆ, ಗಣೇಶ್ ಪೂಜಾರಿ, ಕಿರಣ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಒಳಗೊಳಗೆ ಸಿಎಂ ಕುರ್ಚಿಗಾಗಿ ನಾಯಕರು ಸಾಲುಗಟ್ಟಿ ನಿಂತಿದ್ದಾರೆ: ಜೋಶಿ
Viral Video: ಮಗಳ ರಕ್ಷಣೆಗಾಗಿ ತಲೆ ಮೇಲೆ ಸಿಸಿಟಿವಿ ಅಳವಡಿಸಿದ ತಂದೆ.! ಎಲ್ಲಿ ಇದು?
KSRTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಮೂರ್ಛೆರೋಗ!
Hubli; ಪ್ರಹ್ಲಾದ ಜೋಶಿ ನಿವಾಸದೆದುರು ರೈತ ಹೋರಾಟಗಾರ ಆಕ್ರೋಶ
Haryana; ಭರ್ಜರಿ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.