ಯಡಿಯೂರಪ್ಪ ಯಾವಾಗಲೂ ಮುಖ್ಯಮಂತ್ರಿಯೇ : ನಟ ಮೋಹನ್‌ ಬಾಬು

Team Udayavani, May 15, 2019, 2:29 PM IST

ಚಿಂಚೋಳಿ : ನಾನು ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂದ್ರಿಯೆಂದು ಕರೆಯುವುದಿಲ್ಲ. ಮುಖ್ಯಮಂತ್ರಿ ಎಂದು ಕರೆಯುತ್ತೇನೆ ಎಂದು ಖ್ಯಾತ ತೆಲುಗು ಹಾಸ್ಯ ನಟ ಮೋಹನ್‌ ಬಾಬು ಹೇಳಿದ್ದಾರೆ.

ಚಿಂಚೋಳಿಯ ಕುಂಚಾವರಂನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್‌ ಜಾಧವ್‌ ಅವರ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಯಡಿಯೂರಪ್ಪ ಅವರು ಯಾವಾಗಲೂ ಮುಖ್ಯಮಂತ್ರಿ ಎಂದರು.

ದೇಶಕ್ಕೆ ಮೋದಿ ಅವರು ಬೇಕು. ರಾಜ್ಯಕ್ಕೆ ಯಡಿಯೂರಪ್ಪ ಬೇಕು. ಚಿಂಚೋಳಿಯಲ್ಲಿ ಅವಿನಾಶ್‌ ಜಾಧವ್‌ ಗೆಲುವು ಸಾಧಿಸಲಿದ್ದಾರೆ ಎಂದರು.

ತೆಲುಗು ಭಾಷಿಕ ಮತದಾರರನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿ ನಟ ಮೋಹನ್‌ ಬಾಬು ಅವರನ್ನು ಪ್ರಚಾರಕ್ಕೆ ಕರೆಸಿಕೊಂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ