ಪ್ರೇಮ ವೈಫ‌ಲ್ಯದ ಕತೆ ಬಿಚ್ಚಿಟ್ಟ ರತನ್‌ ಟಾಟಾ

Team Udayavani, Feb 14, 2020, 6:32 AM IST

ಹೊಸದಿಲ್ಲಿ: ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್‌ ಟಾಟಾ, ಪದವಿ ವ್ಯಾಸಂಗ ಮಾಡುವಾಗ ಪ್ರೇಮ ವೈಫ‌ಲ್ಯ ಅನುಭವಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಫೇಸ್‌ಬುಕ್‌ನ ‘ಹ್ಯೂಮನ್ಸ್‌ ಆಫ್ ಬಾಂಬೆ’ ಪುಟಕ್ಕೆ ನೀಡಿದ ವಿಶೇಷ ವೀಡಿಯೋ ಸಂದರ್ಶನದಲ್ಲಿ ಅವರು ಈ ಅಂಶ ಹೇಳಿಕೊಂಡಿದ್ದಾರೆ.

‘1962ರ ಆಸುಪಾಸಿನಲ್ಲಿ ನಾನು ವಿದೇಶದಲ್ಲಿ ಪದವಿ ಓದುತ್ತಿದ್ದಾಗ ಅಲ್ಲಿನ ಸಹಪಾಠಿಯೊಂದಿಗೆ ಪ್ರೇಮಾಂಕುರವಾಗಿತ್ತು. ಇನ್ನೇನು ಮದುವೆ ಆಗಿಬಿಡುತ್ತದೆ ಎನ್ನುವಷ್ಟರಲ್ಲಿ ಅಜ್ಜಿ ಅನಾರೋಗ್ಯಕ್ಕೀಡಾದ ಸುದ್ದಿ ತಿಳಿದು ಭಾರತಕ್ಕೆ ಬಂದೆ.

ಇಲ್ಲಿಗೇ ಪ್ರೇಯಸಿಯನ್ನು ಕರೆಯಿಸಿಕೊಂಡು ಮದುವೆಯಾಗಿ ನೆಲೆಸುವ ಇರಾದೆ ಹೊಂದಿದ್ದೆ. 1962ರಲ್ಲಿ ಭಾರತ-ಚೀನ ಯುದ್ಧ ನಡೆದಿದ್ದರಿಂದ ಆಕೆಯನ್ನು ಭಾರತಕ್ಕೆ ಕರೆತರಲು ಯುವತಿಯ ಹೆತ್ತವರು ಒಪ್ಪಲಿಲ್ಲ. ಹಾಗಾಗಿ, ನನ್ನ ಮದುವೆ ಕನಸು ಈಡೇರಲಿಲ್ಲ’ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ