ಒತ್ತಡದ ಜೀವನ: ಪ್ರತಿದಿನ ವಾಕಿಂಗ್ ನಿಂದ ಆರೋಗ್ಯಕ್ಕೆ ಹಲವಾರು ಉಪಯೋಗ…

ಕಾವ್ಯಶ್ರೀ, Dec 5, 2022, 5:40 PM IST

strress and walking web exclusive

ಇತ್ತೀಚಿನ ದಿನಗಳ ಬದಲಾಗುತ್ತಿರುವ ಜೀವನಶೈಲಿಯಲ್ಲಿ ನಾವು ನಡೆಯುವುದು, ಓಡಾಡುವುದು ಕಡಿಮೆಯಾಗಿದೆ. ಈಗ ಹೆಚ್ಚಾಗಿ ಕೂತು ಕೆಲಸ ಮಾಡುವುದು. ಇದರಿಂದಾಗಿ ಕೆಲ ಆರೋಗ್ಯ ಸಮಸ್ಯೆಗಳು ನಮಗೆ ಕಾಡಬಹುದು.

ಈ ಒತ್ತಡದ ಜೀವನದಲ್ಲಿ ದಿನದಲ್ಲಿ 1 ಗಂಟೆ ಸಮಯವನ್ನು ಹೊಂದಿಸಿಕೊಂಡು ನಡೆಯುವುದರಿಂದ ಪ್ರಯೋಜನ ಇದೆ. ಪ್ರಸ್ತುತ ದಿನಗಳಲ್ಲಿ ಜನರು ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ವಾಕಿಂಗ್ ಮಾಡಲು ವಯಸ್ಸಿನ ಮಿತಿ ಇಲ್ಲ. ಯಾವ ವಯೋಮಾನದವರು ಕೂಡಾ ವಾಕಿಂಗ್ ಮಾಡಬಹುದು.

ನಡಿಗೆ ದೇಹ ಮತ್ತು ಮನಸ್ಸನ್ನು ಉಲ್ಲಾಸಿತವಾಗಲು ಸಹಾಯ ಮಾಡುತ್ತದೆ. ಕೀಲು ನೋವು, ಹೃದಯದ ಸಮಸ್ಯೆಗಳು, ಒತ್ತಡ, ಖಿನ್ನತೆಯಿಂದ ಬಳಲುತ್ತಿದ್ದರೆ ವಾಕಿಂಗ್ ಮಾಡುವುದು ಒಳ್ಳೆಯ ಅಭ್ಯಾಸ.

ವಾಕಿಂಗ್ ಮಾಡುವಾಗ ಈ ಕೆಳಗಿನವುಗಳನ್ನು ನೆನಪಿಡಿ: ಶೂ ಧರಿಸಬೇಕು, ಆರಾಮದಾಯಕ ಬಟ್ಟೆಗಳನ್ನು ಧರಿಸಿ, ಒಂದು ಬಾಟಲಿ ನೀರು, ದೀರ್ಘ ನಡಿಗೆಯಾದರೆ ಎನರ್ಜಿ ಡ್ರಿಂಕ್ ತೆಗೆದುಕೊಂಡು ಹೋಗಿ, ಪ್ರತಿದಿನ ವಿಭಿನ್ನ ಮಾರ್ಗಗಳನ್ನು ಬಳಸುವುದು ಉತ್ತಮ. ಹೊಸದಾಗಿ ವಾಕಿಂಗ್ ಆರಂಭಿಸುವವರು ಪ್ರತಿದಿನ 10 ನಿಮಿಷ ನಡೆಯುವ ಮೂಲಕ ಪ್ರಾರಂಭಿಸಿ, ತಕ್ಷಣ ದೂರ ನಡೆಯಬೇಡಿ. ದಿನದಿಂದ ದಿನಕ್ಕೆ ಈ ಅವಧಿಯನ್ನು 30 ನಿಮಿಷಗಳಿಗೆ ಹೆಚ್ಚಿಸಿ. ಬೆಳಗ್ಗೆ 30 ನಿಮಿಷ ಹಾಗೂ ಸಂಜೆ 30 ನಿಮಿಷ ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ. ವಾಕಿಂಗ್ ವೇಗವನ್ನು ಹೆಚ್ಚಿಸುತ್ತಿರಿ.
ವಾಕಿಂಗ್‌ ಉಪಯೋಗಗಳು:

ರಕ್ತದೊತ್ತಡ ನಿಯಂತ್ರಣ: ನಡಿಗೆಯಿಂದ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮಗೆ ದಿನಕ್ಕೆ 10 ಸಾವಿರ ಹೆಜ್ಜೆ ಹಾಕಲು ಸಾಧ್ಯವಾಗದಿದ್ದರೂ ಪ್ರತಿದಿನ ಕನಿಷ್ಠ 1 ಗಂಟೆಗಳ ಕಾಲ ನಡೆದರೆ ರಕ್ತದೊತ್ತಡದ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

ಮಧುಮೇಹ ನಿಯಂತ್ರಣ: ಪ್ರಸ್ತುತ ದಿನಗಳಲ್ಲಿ ಮಧುಮೇಹ ಕಾಯಿಲೆ ಸಾಮಾನ್ಯ. ಟೈಪ್ 2 ಡಯಾಬಿಟಿಸ್ ತಡೆಯಲು ದಿನಕ್ಕೆ 5 ಸಾವಿರ ಹೆಜ್ಜೆ ಹಾಕುವುದು ಒಳ್ಳೆಯದು. ಅದರಲ್ಲೂ 3 ಸಾವಿರ ಹೆಜ್ಜೆ ಬಿರುಸಿನ ನಡಿಗೆಯಾಗಿದ್ದರೆ ಇನ್ನೂ ಒಳ್ಳೆಯದು. ಪ್ರತಿದಿನ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ.

ತೂಕ ನಷ್ಟಕ್ಕೆ ನಡಿಗೆ ಸಹಕರಿ: ತೂಕ ಇಳಿಸಿಕೊಳ್ಳಲು ಬಯಸುವವರಿಗೆ ವಾಕಿಂಗ್ ಉತ್ತಮ ವ್ಯಾಯಾಮ.

ಕ್ಯಾನ್ಸರ್ ವಿರುದ್ಧ ಹೋರಾಟ: ಕ್ಯಾನ್ಸರ್ ಇದುವರೆಗೂ ಒಂದು ದಶಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ನಮ್ಮ ಜೀವನ ಶೈಲಿ ಕೂಡ ಕ್ಯಾನ್ಸರ್ ಗೆ ಕಾರಣ ಎಂದು ಹೇಳಲಾಗುತ್ತದೆ. ಸ್ತನ ಕ್ಯಾನ್ಸರ್‌ನಿಂದ ಆಗುವ ಅಪಾಯ ಕಡಿಮೆ ಮಾಡುತ್ತದೆ.

ದೇಹದ ಮೂಳೆಗಳು ಬಲಗೊಳಿಸಲು ಸಹಕರಿ: ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಆದರೆ ನಿಯಮಿತವಾಗಿ ವಾಕ್ ಮಾಡುವ ಮೂಲಕ ಎಲುಬುಗಳನ್ನು ಬಲಪಡಿಸಬಹುದು. ವಾಕಿಂಗ್ ಮಾಡಿದರೆ ಸ್ನಾಯುಗಳನ್ನು ಬಲಗೊಳ್ಳುತ್ತವೆ. ನಿಯಮಿತವಾಗಿ ನಡೆಯುವುದರಿಂದ ಕಾಲು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸಬಹುದು. ನಿಯಮಿತ ನಡಿಗೆಯಿಂದ ಮೂಳೆ ಮುರಿತದ ಸಾಧ್ಯತೆ 40% ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆ ಸುಲಭ: ಜೀರ್ಣಕ್ರಿಯೆ ಸರಿಯಾಗದಿದ್ದರೆ, ಹೊಟ್ಟೆಉಬ್ಬರ, ಮಲಬದ್ಧತೆ, ಅತಿಸಾರ ಮತ್ತು ಕರುಳಿನ ಕ್ಯಾನ್ಸರ್ ಗೆ ವಾಕಿಂಗ್ ಅತ್ಯುತ್ತಮ ಮಾರ್ಗ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಉತ್ತಮ ಆಹಾರ ಪದ್ಧತಿ, ನೀರನ್ನು ಕುಡಿಯುವುದು ಅಳವಡಿಸಿಕೊಳ್ಳಬೇಕು. ಊಟದ ನಂತರ ನಡೆಯುವುದು ಒಳ್ಳೆಯದು. ಇದರಿಂದ ತೂಕ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ರೋಗನಿರೋಧಕ ಶಕ್ತಿ ಹೆಚ್ಚು: ಸೋಂಕುಗಳು ಅಥವಾ ಯಾವುದೇ ರೋಗಗಳನ್ನು ತಡೆಗಟ್ಟಲು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಎಲ್ಲಾ ಸಮಯದಲ್ಲೂ ಸರಿಯಾಗಿ ಕಾರ್ಯನಿರ್ವಹಿಸಬೇಕು. ರೋಗನಿರೋಧಕ ಶಕ್ತಿ ಹೆಚ್ಚಬೇಕೆಂದರೆ ವಾಕಿಂಗ್ ಮಾಡಲೇಬೇಕು. ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದರಿಂದ ರೋಗನಿರೋಧಕ ಹೆಚ್ಚುತ್ತದೆ.

-ಕಾವ್ಯಶ್ರೀ

ಟಾಪ್ ನ್ಯೂಸ್

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.