Byndooru; ಮಳೆ ಬಿರುಸು: ಸೋಮೇಶ್ವರ ಗುಡ್ಡ ಮತ್ತಷ್ಟು ಕುಸಿತ
Team Udayavani, Aug 4, 2024, 1:45 AM IST
ಬೈಂದೂರು: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೈಂದೂರು ಸೋಮೇಶ್ವರ ಗುಡ್ಡ ಮತ್ತಷ್ಟು ಜರ್ಝರಿತಗೊಂಡಿದೆ. ಅಪಾರ ಪ್ರಮಾಣದಲ್ಲಿ ಜೇಡಿ ಮಿಶ್ರಿತ ಮಣ್ಣು ಕೆಳಭಾಗಕ್ಕೆ ಬಂದಿದ್ದು, ಯಾವುದೇ ಹಂತದಲ್ಲೂ ಕುಸಿಯುವ ಭೀತಿಯಿದೆ.
ಒಂದು ತಿಂಗಳಿನಿಂದ ನಿರಂತರ ಮಳೆ ಆಗುತ್ತಿರುವ ಪರಿಣಾಮ ಗುಡ್ಡದ ಮಣ್ಣಿನ ತೇವಾಂಶ ಹೆಚ್ಚಿದ್ದು, ಒಂದೊಮ್ಮೆ ಗುಡ್ಡ ಕುಸಿದರೆ ಕೆಳಭಾಗದಲ್ಲಿರುವ ಹತ್ತಾರು ಮನೆಗಳು ಮತ್ತು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಪಾಯ ಭೀತಿಯಿದೆ. ಸೋಮೇಶ್ವರ ಗುಡ್ಡದ ಮೇಲ್ಭಾಗ ದಲ್ಲಿ ಅರಣ್ಯ ಇಲಾಖೆಯ ಕ್ಷಿತಿಜ ನೇಸರಧಾಮ ಹಾಗೂ ಕೆಳಭಾಗದಲ್ಲಿ ಐತಿಹಾಸಿಕ ಸೋಮೇಶ್ವರ ದೇವಸ್ಥಾನ ವಿದೆ. ಕರ್ಕಾಟಕ ಅಮಾವಾಸ್ಯೆಯಂದು ಸೋಮೇಶ್ವರ ಜಾತ್ರೆ ನಡೆಯುತ್ತಿದ್ದು, ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಳ್ಳು ಮಾಹಿತಿ: ಇಲ್ಲಿನ ರೆಸಾರ್ಟ್ ಮಾಲಕರು ಕಟ್ಟಡ ಪರವಾನಿಗೆ ಪಡೆಯಲು ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನುವುದು ಪಟ್ಟಣ ಪಂಚಾಯತ್ ಕಡತದಲ್ಲಿ ಅಡಕವಾಗಿದೆ. ಕಟ್ಟಡ ಪರವಾನಿಗೆ ಪಡೆಯಲು ಭೂ ಪರಿವರ್ತನೆ ಮತ್ತು ರಸ್ತೆ ಅಗತ್ಯ. ಗುಡ್ಡದಲ್ಲಿದ್ದ ಕಾಲುದಾರಿಯನ್ನೇ ರಸ್ತೆ ಎಂದು ನಮೂದಿಸಿ ಅನುಮತಿ ಪಡೆಯಲಾಗಿದೆ. ಸದ್ಯ ಕಟ್ಟಡ ಪರವಾನಿಗೆಯನ್ನು ತಡೆಹಿಡಿದಿದ್ದು ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ
Udupi: ಸಹಪಾಠಿ ಶ್ರೀಪಾದರೊಂದಿಗೆ ಜನ್ಮ ನಕ್ಷತ್ರ ಆಚರಿಸಿದ ಪುತ್ತಿಗೆ ಶ್ರೀ
Udupi; ಜಿಲ್ಲೆಯ 170 ಅಂಗನವಾಡಿಗೆ ಸ್ವಂತ ಕಟ್ಟಡವೇ ಇಲ್ಲ
Baikampady: ಮೊಗವೀರ ಮಹಾಸಭಾದಿಂದ ಬೈಕಂಪಾಡಿ ಶಾಲೆಗೆ ಹೊಸ ರೂಪ!
Manipal: ಟೆಲಿಗ್ರಾಂ App-ಹೂಡಿಕೆ ನೆಪದಲ್ಲಿ 8 ಲಕ್ಷಕ್ಕೂ ಅಧಿಕ ಹಣ ವಂಚನೆ; ದೂರು ದಾಖಲು
MUST WATCH
ಹೊಸ ಸೇರ್ಪಡೆ
Hubballi: ಕರ್ತವ್ಯದಲ್ಲಿದ್ದ ಎಎಸ್‌ಐ ತಲೆ ಮೇಲೆ ಬಿದ್ದ ಕಬ್ಬಿಣದ ರಾಡ್; ತೀವ್ರ ಗಾಯ
Kottigehara: ಭಕ್ತಿಗೆ ಬಡತನವಿಲ್ಲವೆಂದು ತೋರಿಸಿಕೊಟ್ಟ ಬಾಲಕ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ
Davanagere; ಎಸ್.ಪಿ ಕಾರಿನ ಮೇಲೆ ಕಲ್ಲೆಸೆದ ಮಾನಸಿಕ ಅಸ್ವಸ್ಥ ಮಹಿಳೆ!
Bhopal: ರಸ್ತೆ ಬದಿ ಕುಳಿತಿದ್ದವರ ಮೇಲೆ ಏಕಾಏಕಿ ನರಿ ದಾಳಿ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.