ಜನರನ್ನು ಕಾಡುತ್ತಿದೆ ಕೋ ವಿಡೋ ಸೋಮ್ನಿಯಾ!


Team Udayavani, Mar 31, 2021, 7:00 AM IST

ಜನರನ್ನು ಕಾಡುತ್ತಿದೆ ಕೋವಿಡೋಸೋಮ್ನಿಯಾ!

ಕೊರೊನಾ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಜಗತ್ತಿನಾದ್ಯಂತ ಒಂದಲ್ಲ ಒಂದು ರೀತಿಯಲ್ಲಿ ಅದರ ಪರಿಣಾಮಗಳು ಗೋಚರಿಸುತ್ತಿವೆ. ಅದು ಜನರ ಆರೋಗ್ಯದ ಮೇಲೆ ಅಥವಾ ಆರ್ಥಿಕವಾಗಿಯೂ ಆಗಿರಬಹುದು. ಕೋವಿಡ್‌ 19 ವಕ್ಕರಿಸಿದ ಬಳಿಕ ಜನರಿಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಯಲ್‌ ಫಿಲಿಪ್‌ ಎಂಬ ಸಂಸ್ಥೆ 13 ದೇಶಗಳಲ್ಲಿ ನಿದ್ರೆಯ ಕುರಿತಂತೆ ಸಮೀಕ್ಷೆಯನ್ನು ನಡೆಸಿದೆ. ಸಾಂಕ್ರಾಮಿಕ ರೋಗವು ಜನರ ನಿದ್ರೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂಬುದು ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಸಮಸ್ಯೆಯನ್ನು ಹೇಗೆ ಎದುರಿಸುವುದು?
– ತಜ್ಞರ ಪ್ರಕಾರ ಮಧ್ಯಾಹ್ನ 2ರ ಅಅನಂತರ ಕಡಿಮೆ ಚಹಾ, ಕಾಫಿ ಕುಡಿಯಬೇಕು. ಗಾಢ ನಿದ್ರೆಯ ಸ್ಥಿತಿಗೆ ಕೆಫೀನ್‌ ಪರಿಣಾಮ ಬೀರುತ್ತದೆ.
– ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಹೆಲ್ತ್‌ ಪ್ರಕಾರ, ಮೊಬೈಲ್, ಟಿವಿ ಮತ್ತು ಕಂಪ್ಯೂಟರ್‌ ಸ್ಕ್ರೀನ್‌ನ ನಿರಂತರ ವೀಕ್ಷಣೆ ಮೆಲಟೋನಿನ್‌ ಎಂಬ ಹಾರ್ಮೋನ್‌ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ರೆಪ್ಪೆಗಳ ಚಲನೆಯನ್ನೂ ಕೂಡ ಕಡಿಮೆ ಮಾಡುತ್ತದೆ.
– ನ್ಯಾಶನಲ್‌ ಸ್ಲೀಪ್‌ ಫೌಂಡೇಶನ್‌ ಪ್ರಕಾರ, ಮಲಗುವ ಕೋಣೆಯ ಉಷ್ಣತೆಯು 16-19 ಡಿಗ್ರಿ ಸೆ. ನಡುವೆ ಇರಬೇಕು. ಇದು ನಿದ್ರೆ ಮಾಡಲು ಸೂಕ್ತವಾದ ತಾಪಮಾನ ಪ್ರಮಾಣವಾಗಿದೆ.

ಯುವಜನರೇ ಹೆಚ್ಚು
ಹೆಚ್ಚು ನಿದ್ರಾಹೀನತೆಯನ್ನು ಅನುಭವಿ ಸುತ್ತಿರುವವರಲ್ಲಿ ಯುವಜನರೇ ಹೆಚ್ಚು ಇದ್ದು, ಶೇ. 70ರಷ್ಟು ಯುವಕರು ನಿದ್ದೆ ಬರುತ್ತಿಲ್ಲ ಎಂದು ಹೇಳಿದ್ದಾರೆ.

ರೋಗದ ಹೆಸರು?
ಪ್ರಪಂಚದಾದ್ಯಂತದ ನಿದ್ರಾ ನರಶಾಸ್ತ್ರಜ್ಞರು ಇದಕ್ಕೆ “ಕೋವಿಡೋಸೋಮ್ನಿಯಾ’ ಎಂದು ಹೆಸರಿಸಿ¨ªಾರೆ. ಅಮೆರಿಕನ್‌ ಅಕಾಡೆಮಿ ಆಫ್ ನ್ಯೂರಾಲಜಿ ಪ್ರಕಾರ, ಕೊರೊನಾ ವೈರಸ್‌ ಸೋಂಕಿಗೆ ಒಳಗಾಗುವ ಭಯ, ಕುಟುಂಬ ಸದಸ್ಯರ ಬಗ್ಗೆ ಕಾಳಜಿಯಿಂದ ಇದು ಹೆಚ್ಚಾಗಿದೆ.

ಕಾರಣವೇನು?
ಕೊರೊನಾದಿಂದ ಒತ್ತಡ ಹೆಚ್ಚಾಗಿದೆ. ಈ ಒತ್ತಡದಿಂದಾಗಿ ಜನರು ನಿದ್ರಾಹೀನತೆಗೆ ಬಲಿಯಾಗುತ್ತಿ¨ªಾರೆ. 2020ರ ಆಗಸ್ಟ್‌ನಲ್ಲಿ ಯುಕೆಯ ಸೌತಾಂಪ್ಟನ್‌ ವಿಶ್ವವಿದ್ಯಾನಿಲಯದ ಸಂಶೋಧನೆಯು ಲಾಕ್‌ಡೌನ್‌ ಸಮಯದಲ್ಲಿ ಚೀನದಲ್ಲಿ ನಿದ್ರಾಹೀನತೆಯ ಪ್ರಮಾಣ ಶೇ. 14.6ರಿಂದ ಶೇ. 20ಕ್ಕೆ ಏರಿದೆ ಎಂದು ತಿಳಿಸಿದೆ. ಇಟಲಿ ಮತ್ತು ಗ್ರೀಸ್‌ನಲ್ಲಿ ಈ ದರವು ಶೇ. 40ರ ವರೆಗೆ ಕಂಡುಬಂದಿದೆ.

ಏನಿದರ ಲಕ್ಷಣಗಳು?
ನಿದ್ರೆಯ ಕೊರತೆ ಅಥವಾ ಆಗಾಗ್ಗೆ ಎಚ್ಚರವಾಗುವುದು. ಹಗಲಿನಲ್ಲಿ ದಣಿದ ಅಥವಾ ನಿದ್ರೆಯ ಭಾವನೆ. ನಿ¨ªೆ ಮಾಡುವಾಗ ಮತ್ತೆ ಮತ್ತೆ ಎದ್ದೇಳುವುದು ಅಥವಾ ತಡವಾದ ನಿದ್ರೆಯನ್ನೂ ಕೋವಿಡೋಸೋಮ್ನಿಯಾ ಎಂದು ಕರೆಯಲಾಗುತ್ತದೆ.

ನಿದ್ರಾಹೀನತೆಯ ಅಪಾಯ ಏನು?
ಹೃದಯಾಘಾತ: ನಿದ್ರೆ ಪೂರ್ಣಗೊಳ್ಳದಿದ್ದಾಗ ರಕ್ತದೊತ್ತಡ ದೀರ್ಘ‌ಕಾಲದವರೆಗೆ ಇರುತ್ತದೆ. ರಕ್ತದೊತ್ತಡದ ಈ ಹೆಚ್ಚಳವು ಹೃದ್ರೋಗಗಳಿಗೆ ಪ್ರಮುಖ ಕಾರಣವಾಗಿದೆ.

ಬೊಜ್ಜು: ಲೆಪ್ಟಿನ್‌ ಮತ್ತು ಗ್ರೆಲಿನ್‌ ಎಂಬ ಎರಡು ಹಾರ್ಮೋನುಗಳು ಹಸಿವನ್ನು ನಿಯಂತ್ರಿಸುತ್ತವೆ. ನಿದ್ರೆ ಪೂರ್ಣಗೊಳ್ಳದಿದ್ದಾಗ, ಈ ಹಾರ್ಮೋನುಗಳ ಅಸಮತೋಲನದಿಂದಾಗಿ ಹಸಿವು ಹೆಚ್ಚಾಗಿ ಬೊಜ್ಜು ಬರುವ ಸಾಧ್ಯತೆ ಅಧಿಕವಾಗಿದೆ.

ಟೈಪ್‌ -2 ಡಯಾಬಿಟಿಸ್‌: ಮಧುಮೇಹ / ಚಯಾಪಚಯ ಕ್ರಿಯೆಯ ಮೇಲೆ ನಡೆದ ಸಂಶೋಧನೆಯ ಪ್ರಕಾರ ನಿದ್ರಾಹೀನತೆಯ ಸಂದರ್ಭದಲ್ಲಿ ಮನುಷ್ಯನು ನಿರಂತರವಾಗಿ ಒತ್ತಡದಲ್ಲಿರುವುದು ಕಂಡುಬಂದಿದೆ. ಒತ್ತಡವು ಮಧುಮೇಹ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳಲ್ಲೊಂದಾಗಿದೆ.

ಟಾಪ್ ನ್ಯೂಸ್

ತಿರುಗೇಟು ನೀಡುತ್ತಾ ಟೀಂ ಇಂಡಿಯಾ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ತಿರುಗೇಟು ನೀಡುತ್ತಾ ಟೀಂ ಇಂಡಿಯಾ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

kyasanur forest disease

ಕೋವಿಡ್ ನಡುವೆ ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ವೈರಸ್ ಆತಂಕ!

1-sdds

ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆ:’ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ

ಕಾರಜೋಳ

ತಮಿಳುನಾಡಿಗೆ ಹೊಗೇನಕಲ್‌ ನಲ್ಲಿ ಯೋಜನೆ ಮಾಡಲು ಬಿಡುವುದಿಲ್ಲ: ಕಾರಜೋಳ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

SUNIL-KUMAR

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ಆಗಿದ್ದೇನು?

ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ವಿಡಿಯೋ ನೋಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

ದಾಸೋಹ ದಿನ; ಪ್ರಪಂಚಕ್ಕೆ ದಾಸೋಹ ತತ್ವ ಸಾರಿದ ಸಿದ್ಧಗಂಗಾ ಶ್ರೀ

ದಾಸೋಹ ದಿನ; ಪ್ರಪಂಚಕ್ಕೆ ದಾಸೋಹ ತತ್ವ ಸಾರಿದ ಸಿದ್ಧಗಂಗಾ ಶ್ರೀ

ಪ್ರಜಾತಂತ್ರದ ಪಂಚಾಂಗದಲ್ಲಡಗಿದೆ ದೇಶದ ಭವಿಷ್ಯ

ಪ್ರಜಾತಂತ್ರದ ಪಂಚಾಂಗದಲ್ಲಡಗಿದೆ ದೇಶದ ಭವಿಷ್ಯ

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?

ವಿಮಾನ ಸೇವೆ ಸ್ಥಗಿತಗೊಳಿಸಿದ “5ಜಿ’

5ಜಿ ತರಂಗಗಳ ಎಫೆಕ್ಟ್: ಅಮೆರಿಕದಲ್ಲಿ ನೂರಾರು ವಿಮಾನಗಳ ಸಂಚಾರ ರದ್ದು

MUST WATCH

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

ಹೊಸ ಸೇರ್ಪಡೆ

1-wqqwe

ಬೈಕ್‌ ಟ್ಯಾಕಿಗೆ ಕಡಿವಾಣ ಹಾಕಲು ಆಟೋ ಚಾಲಕರ ಆಗ್ರಹ

arrested

ವಂಚನೆ: ಆಯೇಷಾ ಅಮಿನಾ ಟ್ರಸ್ಟ್‌ನ ಟ್ರಸ್ಟಿ ಸೆರೆ

rape

ಮ್ಯಾಟ್ರಿಮೋನಿಯಲ್‌ ಪರಿಚಯ: ಯುವತಿ ಖಾಸಗಿ ಫೋಟೋ ಸೆರೆಹಿಡಿದು ಬ್ಲ್ಯಾಕ್‌ಮೇಲ್

16chilly-crop

ಮೆಣಸಿನಕಾಯಿ ಬೆಳೆಗೆ ನುಶಿ ರೋಗ

15paddy

ಭತ್ತದ ನಾಡಿಗೆ ಸಾವಯವ ಭತ್ತವೇ ಚಿನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.