ಮಲ ತಂದೆಯಿಂದಲೇ 5 ವರ್ಷದ ಮಗಳ ಮೇಲೆ ಅತ್ಯಾಚಾರ : ಆರೋಪಿಯ ಬಂಧನ
Team Udayavani, Jan 5, 2022, 8:39 PM IST
ಚಾಮರಾಜನಗರ: ಮಲತಂದೆಯೇ 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಆರೋಪಿಯ ವಿರುದ್ಧ ಆತನ ಹೆಂಡತಿ ದೂರು ನೀಡಿದ್ದಾರೆ. ಘಟನೆ ಎಸಗಿರುವ ಆರೋಪಿ ಬಾಲಕಿಯ ತಾಯಿಯ ಎರಡನೇ ಗಂಡನಾಗಿದ್ದಾನೆ. ಮೊದಲ ಗಂಡನ ಕಿರುಕುಳ ತಾಳಲಾರದೇ ಆತನಿಂದ ಎರಡು ವರ್ಷಗಳ ಹಿಂದೆ ಡೈವೋರ್ಸ್ ಪಡೆದಿದ್ದ ಮಹಿಳೆ ಆರೋಪಿಯೊಡನೆ ಮರು ವಿವಾಹವಾಗಿದ್ದರು. ಆಕೆಗೆ ಇಬ್ಬರು ಗಂಡು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ.
ಆರೋಪಿ ಮೂಲತಃ ಮೈಸೂರಿನವನಾಗಿದ್ದು, ಈತ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಈತನ ಕಿರುಕುಳ ತಾಳಲಾರದೇ ಮಹಿಳೆ ನಗರದಲ್ಲಿರುವ ತಂದೆಯ ಮನೆಗೆ ಬಂದಿದ್ದರು. ಗಂಡನ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರನ್ನೂ ನೀಡಿದ್ದರು. ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ನಂತರ ಈರ್ವರೂ ನಗರದಲ್ಲೇ ಮನೆಮಾಡಿಕೊಂಡು ವಾಸಿಸುತ್ತಿದ್ದರು.
ಹೆಂಡತಿ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮುಖ ತೊಳೆಯುತ್ತಿದ್ದ 5 ವರ್ಷದ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ತಾಯಿ ಮನೆಗೆ ಬಂದಾಗ ಮಗು ಅಳುತ್ತಿತ್ತು. ಮಗುವನ್ನು ವಿಚಾರಿಸಿದಾಗ ನಡೆದ ಘಟನೆ ವಿವರಿಸಿದೆ. ನಂತರ ಆಕೆ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣ ಠಾಣೆ ಸಬ್ ಇನ್‌ಸ್ಪೆಕ್ಟರ್ ಮಹದೇವಶೆಟ್ಟಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ : ವಾರಾಂತ್ಯ ಕರ್ಫ್ಯೂ: ಸಿಇಟಿ ದಾಖಲಾತಿ ಪರಿಶೀಲನೆ ವೇಳಾಪಟ್ಟಿ ಬದಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಲ್ಯವಿವಾಹ ತಡೆಗೆ ರಾಜ್ಯಾದ್ಯಂತ ಸ್ಫೂರ್ತಿ: ಹೆಚ್ಚುತ್ತಿರುವ ಪಿಡುಗು ನಿಯಂತ್ರಣಕ್ಕೆ ಈ ಕ್ರಮ
ರಸಪ್ರಶ್ನೆ ಸ್ಪರ್ಧೆ: 10 ಲ.ರೂ. ಬಂಪರ್ ಬಹುಮಾನ!
ಪದವಿ ಕಾಲೇಜು ಶುಲ್ಕ ನಿಗದಿ ಮಾಡಿದ ಕಾಲೇಜು ಶಿಕ್ಷಣ ಇಲಾಖೆ
ಅಗ್ನಿಪಥ ಯೋಜನೆ ಜಾರಿ ವಿರೋಧಿಸಿ ರಾಜಭವನ ಮುತ್ತಿಗೆಗೆ ಯುವ ಕಾಂಗ್ರೆಸ್ ಯತ್ನ
ಪೊಲೀಸ್ ಕಾನ್ಸ್ಟೇಬಲ್ : ಕನಿಷ್ಠ ಸೇವೆ 6ರಿಂದ 5 ವರ್ಷಕ್ಕೆ ಇಳಿಕೆ: ಡಿಸಿಪಿ ನಿಶಾ ಜೇಮ್ಸ್
MUST WATCH
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್
13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್
ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?
ಹೊಸ ಸೇರ್ಪಡೆ
ಕುಡುಪು ದೇಗುಲಕ್ಕೆ ಬಾಳೆಹಣ್ಣು ಪೂರೈಕೆ ವಿಚಾರದಲ್ಲಿ ವಿವಾದ
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಚಂಡೀಗಢದಲ್ಲಿ ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡಿ ಯುವಕರು!
ಪಾಕ್ನ ಎಲ್ಲೆಲ್ಲೂ ಪೇಪರ್ ಬರ! ಕಾಗದ ಕ್ಷೇತ್ರದ ಮೇಲೆ ಆರ್ಥಿಕ ದುಸ್ಥಿತಿ ದುಷ್ಪರಿಣಾಮ
ವಾರಕ್ಕೆ ನಾಲ್ಕು ದಿನ ಕೆಲಸ: ಜು. 1ರಿಂದ ಜಾರಿ! ದಿನದ ಸೇವಾವಧಿ 12 ಗಂಟೆಗೆ ವಿಸ್ತರಣೆ