
Chennai: ಹಾಸ್ಟೆಲ್ ಗೆ ಅತಿಕ್ರಮ ಪ್ರವೇಶ; ಮಹಿಳೆಗೆ ಕಿರುಕುಳ ನೀಡಿದ ಟೆಕ್ಕಿ ಬಂಧನ
Team Udayavani, May 31, 2023, 12:36 PM IST

ಚೆನ್ನೈ: ಮಹಿಳಾ ಹಾಸ್ಟೆಲ್ ಒಳನುಸುಳಿ, ಮಹಿಳೆಗೆ ದೈಹಿಕ ಕಿರುಕುಳ ನೀಡಲು ಯತ್ನಿಸಿದ 25 ವರ್ಷದ ಐಟಿ ಉದ್ಯೋಗಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:Yamuna; ಈಜಿ ದಾಖಲೆ- ಕೇವಲ 11 ನಿಮಿಷದಲ್ಲಿ ಯಮುನಾ ನದಿಯನ್ನು ದಾಟಿದ ಬಾಲಕಿ!
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯನ್ನು ಚೆನ್ನೈಯ ಅಣ್ಣಾನಗರದ ಜಿ. ಡ್ಯಾನಿಲ್ ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವುದಾಗಿ ವರದಿ ತಿಳಿಸಿದೆ.
ಈತ ಮಹಿಳಾ ಹಾಸ್ಟೆಲ್ ಸಮೀಪ ವಾಸವಾಗಿದ್ದು, ಹಾಸ್ಟೆಲ್ ಒಳ ಹೋಗಲು ಸಂಚು ನಡೆಸುತ್ತಿದ್ದ. ಕೊನೆಗೂ ಆತ ಭಾನುವಾರ ನಸುಕಿನ ವೇಳೆ ಹಾಸ್ಟೆಲ್ ಆವರಣದೊಳಕ್ಕೆ ಪ್ರವೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಾಸ್ಟೆಲ್ ಕೋಣೆಯೊಂದರಲ್ಲಿ ಮಲಗಿದ್ದ 28 ವರ್ಷದ ಮಹಿಳೆಗೆ ಕಿಟಕಿ ಮೂಲಕ ಕಿರುಕುಳ ನೀಡಲು ಆರಂಭಿಸಿದ್ದು, ಆಗ ಆಕೆ ಭಯದಿಂದ ಕಿರುಚಿದ್ದಳು. ಬಳಿಕ ಹಾಸ್ಟೆಲ್ ಯುವತಿಯರು ಎದ್ದು, ಆರೋಪಿಯನ್ನು ಹಿಡಿಯಲು ಹೊರಬಂದಾಗ, ಅಲ್ಲಿಂದ ಕಾಲ್ಕಿತ್ತಿದ್ದ ಎಂದು ವರದಿ ತಿಳಿಸಿದೆ.
ಘಟನೆ ಬಗ್ಗೆ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ, ಸಿಸಿ ಟಿವಿಯನ್ನು ಪರಿಶೀಲಿಸಿ ತನಿಖೆ ನಡೆಸಿದ ನಂತರ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

Damadan Purva: ಈ ಗ್ರಾಮದ ಯುವತಿಯರನ್ನು ಮದುವೆಯಾದರೆ ಸಿಗುತ್ತೆ ಮನೆ, ಜಮೀನು, ಆಸ್ತಿ.!

Delhi: ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ್ದ ವಿಕಲಚೇತನ ಮುಸ್ಲಿಂ ವ್ಯಕ್ತಿಗೆ ಥಳಿತ; ಮೃತ್ಯು
MUST WATCH
ಹೊಸ ಸೇರ್ಪಡೆ

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off: ಆತಂಕದಲ್ಲಿ ಬೈಜೂಸ್ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ