
ಚಿಕ್ಕಬಳ್ಳಾಪುರ: ಒಂದೇ ದಿನ 32 ಹೊಸ ಪ್ರಕರಣ! ಜಿಲ್ಲೆಯಲ್ಲಿ 300ಕ್ಕೆ ಏರಿದ ಸೋಂಕಿತರ ಸಂಖ್ಯೆ
Team Udayavani, Jul 8, 2020, 6:19 PM IST

ಚಿಕ್ಕಬಳ್ಳಾಪುರ: ಜಿಲ್ಲೆಗೆ ಕೋವಿಡ್ ಪ್ರವೇಶ ಆದ ಬಳಿಕ ಇದೇ ಮೊದಲ ಬಾರಿಗೆ ಕೋವಿಡ್-19 ಸೋಂಕಿತ ಪ್ರಕರಣಗಳ ಮಹಾ ಸ್ಪೋಟ ಆಗಿದ್ದು ಜಿಲ್ಲೆಯಾದ್ಯಂತ ಬುಧವಾರ ಒಂದೇ ದಿನ ಬರೋಬ್ಬರಿ 32 ಪಾಸಿಟೀವ್ ಪ್ರಕರಣಗಳು ಕಂಡು ಬರುವ ಮೂಲಕ ಬರಡು ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಮೆರೆದಿದೆ.
ಮುಂಬೈ ವಲಸೆ ಕಾರ್ಮಿಕರ ಆಗಮನದ ಸಂದರ್ಭದಲ್ಲಿಯು ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಒಂದೇ ದಿನ ಕೋವಿಡ್-19 ಸೋಂಕಿತರು ಕಂಡು ಬಂದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅತ್ಯಧಿಕ 32 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಸರಿಯಾಗಿ ತ್ರಿಶತಕ ತಲುಪಿದ್ದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ. ಇದುವರೆಗೂ ಕೋವಿಡ್-19ಗೆ ಜಿಲ್ಲೆಯಲ್ಲಿ 10 ಮಂದಿ ಬಲಿಯಾಗಿದ್ದು ಮಂಗಳವಾರ ರಾತ್ರಿ ಚಿಕ್ಕಬಳ್ಳಾಪುರ ನಗರದ ಚಿನ್ನದಂಗಡಿ ವ್ಯಾಪಾರಿಯೊಬ್ಬರು ಮೃತ ಪಟ್ಟಿದ್ದಾರೆ.
32 ಪ್ರಕರಣದ ವಿವರ :
ಜಿಲ್ಲೆಯಲ್ಲಿ ಒಂದೇ ದಿನ ಪತ್ತೆಯಾಗಿರುವ 32 ಪ್ರಕರಣಗಳ ಪೈಕಿ ಚಿಂತಾಮಣಿ 13, ಗೌರಿಬಿದನೂರು 14, ಚಿಕ್ಕಬಳ್ಳಾಪುರದಲ್ಲಿ 4, ಗುಡಿಬಂಡೆ ತಾಲೂಕಿನಲ್ಲಿ 1 ಪ್ರಕರಣ ಸೇರಿ ಒಟ್ಟು 32 ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 300 ತಲುಪಿದ್ದು ಸದ್ಯದ ಜಿಲ್ಲೆ ಪರಿಸ್ಥಿತಿ ಅವಲೋಕಿಸಿದರೆ ಸೋಂಕಿತರ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳು ಜಿಲ್ಲೆಯಲ್ಲಿ ಕಂಡು ಬಂದಿವೆ. 32 ಪ್ರಕರಣಗಳಲ್ಲಿ ಬರೋಬರಿ 21 ಪುರುಷರು ಹಾಗೂ 11 ಮಂದಿ ಮಹಿಳೆಯರು ಆಗಿದ್ದಾರೆ. ಇರದರಲ್ಲಿ 4, 5, 7. 8. 9. 12 ವರ್ಷದ ಬಾಲಕ ಹಾಗು ಬಾಲಕಿಯರಲ್ಲಿ ಕೂಡ ಕೋವಿಡ್-19 ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪಿಎಸ್‌ಐಗೂ ಕೋವಿಡ್-19 ಸೋಂಕು ದೃಢಪಟ್ಟಿದ್ದು ಅಧಿಕಾರಿಗಳನ್ನು ಠಾಣೆ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಬಹುತಕೇ ಸೋಂಕಿಯರ ಪ್ರವಾಸ ಹಿನ್ನಲೆ ಬೆಂಗಳೂರು ಆಗಿದೆ.
ಗುಡಿಬಂಡೆಗೂ ಕೋವಿಡ್-19 ಪ್ರವೇಶ..
ಇದುವರೆಗೂ ಕೋವಿಡ್-19 ಮುಕ್ತವಾಗಿದ್ದ ಜಿಲ್ಲೆಯ ಗುಡಿಬಂಡೆ ತಾಲೂಕಿಗೂ ಮಹಾಮಾರಿ ಕೋವಿಡ್-19 ಪ್ರವೇಶಿಸುವ ಮೂಲಕ ಜಿಲ್ಲೆಯ ಆರು ತಾಲೂಕಗಳಿಗೂ ಈಗ ಕೋವಿಡ್ ಪ್ರವೇಶ ಮಾಡಿದಂತೆ ಆಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಗೌರಿಬಿದನೂರಿಗೆ ಪ್ರವೇಶಿಸಿದ್ದ ಕೋವಿಡ್ ಆ ನಂತರ ಚಿಕ್ಕಬಳ್ಳಾಪುರ, ಬಳಿಕ ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಕಾಣಿಸಿಕೊಂಡಿತ್ತು. ಗುಡಿಬಂಡೆಯಲ್ಲಿ ಬುಧವಾರ ಮೊದಲ ಪಾಸಿಟೀವ್ ಪ್ರಕರಣ ಕಾಣಿಸಿಕೊಂಡಿರುವುದು ತಾಲೂಕಿನ ಜನರಲ್ಲಿ ಆತಂಕದ ಛಾಯೆ ಮನೆ ಮಾಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ರಾಮನಗರದಲ್ಲಿ ವರುಣನ ಅಬ್ಬರ… ಸಿಡಿಲು ಬಡಿದು 4ಮೇಕೆ ಸಾವು, ಮೂರು ಕುರಿಗಾಹಿಗಳಿಗೆ ಗಾಯ

ಕೆಜಿಎಫ್ ನಲ್ಲಿ ಕೈಗಾರಿಕಾ ಕಾರಿಡಾರ್: ಉನ್ನತ ಪ್ರಾಧಿಕಾರಕ್ಕೆ ಸಚಿವ ಎಂ.ಬಿ ಪಾಟೀಲ್ ಕೋರಿಕೆ

ವಿಜಯಪುರ: ಪೋಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಜೀವಾವಧಿ ಶಿಕ್ಷೆ: 26 ಸಾವಿರ ರೂ. ದಂಡ