Udayavni Special

ಕೈಬೀಸಿ ಕರೆಯೋ ಮಂಜಿನ ಶೃಂಗಾರ ಸೌಂದರ್ಯದ ಮುಳ್ಳಯ್ಯನಗಿರಿ ಬೆಟ್ಟ!


ಸುಧೀರ್, Oct 31, 2020, 5:25 PM IST

mullayanagiri-main

ಎತ್ತ ನೋಡಿದರೂ  ಹಾಲ್ನೊರೆಯಂತೆ  ಮುತ್ತಿಡುವ  ಮಂಜಿನ  ಮುಸುಕು  ಜೊತೆಗೆ  ಬೀಸುವ ತಣ್ಣನೆಯ  ಗಾಳಿ  ವಾಹ್, ಇನ್ನೇನು  ಎರಡು  ಹೆಜ್ಜೆ  ಮುಂದಿಟ್ಟರೆ  ಆಗಸವೇ  ಕೈಯಿಂದ ಮುಟ್ಟುತ್ತೇವೇನೋ  ಎಂತಹ  ಅನುಭವ,  ಹೌದು  ನಾನೀಗ  ಹೇಳಲು  ಹೊರಟಿರುವುದು  ಕಾಫಿ ನಾಡು ಎಂದು  ಪ್ರಸಿದ್ದಿ  ಪಡೆದಿರುವ  ಚಿಕ್ಕಮಗಳೂರು  ಜಿಲ್ಲೆಯಲ್ಲಿರುವ  ಮುಳ್ಳಯ್ಯನಗಿರಿ  ಬೆಟ್ಟದ  ಬಗ್ಗೆ.

ಚಿಕ್ಕಮಗಳೂರಿನಿಂದ ಸುಮಾರು 20 ಕಿಲೋಮೀಟರ್ ದೂರದ ಕಾಫಿ ತೋಟಗಳ ನಡುವೆ ಕಾಫಿ ಹೂಗಳ ಸುವಾಸನೆಯನ್ನು ಸವಿಯುತ್ತಾ ಸಂಚರಿಸಿದರೆ ಮುಳ್ಳಯ್ಯನಗಿರಿ ಬೆಟ್ಟ ತಣ್ಣನೆಯ ಗಾಳಿ ಜೊತೆಗೆ ಮೋಡಗಳ ಮರೆಯಿಂದ ಪ್ರವಾಸಿಗರನ್ನು  ಆಕರ್ಷಿಸುತ್ತದೆ.

ಹೆಸರೇ  ಹೇಳುವಂತೆ  ಮುಳ್ಳಯ್ಯನಗಿರಿ ಬೆಟ್ಟ  ರಾಜ್ಯದಲ್ಲೇ  ಅತೀ  ಎತ್ತರ  ಗಿರಿಶಿಖರ  ಎಂಬ ಖ್ಯಾತಿಯನ್ನು  ಪಡೆದಿದೆ .  ಇದು  ಸಮುದ್ರ ಮಟ್ಟದಿಂದ  ಸುಮಾರು  6330  ಅಡಿಗಳಷ್ಟು ಎತ್ತರದಲ್ಲಿದೆ  ಆದುದರಿಂದ  ಚಾರಣಿಗರಿಗೆ  ಹೇಳಿಮಾಡಿಸಿದ  ಸ್ಥಳವಾಗಿದೆ . ಬೆಟ್ಟದ  ಬುಡದಲ್ಲಿ ನಿಂತು  ಮೇಲೆ  ನೋಡಿದರೆ  ಮೋಡಗಳು  ಗಿರಿಶಿಖರವನ್ನು  ಆವರಿಸಿಕೊಂಡಂತೆ  ಅನುಭವವಾಗುತ್ತದೆ. ಒಂದೊಮ್ಮೆ  ಬೆಟ್ಟದ  ತುದಿ  ಕಂಡರೆ  ತಕ್ಷಣ  ಮಾಯವಾಗುತ್ತದೆ.

ಪ್ರವಾಸಿಗರ  ಸ್ವರ್ಗ  ಚಿಕ್ಕಮಗಳೂರಿನ  ಪ್ರೇಕ್ಷಣೀಯ  ಸ್ಥಳಗಳಲ್ಲಿ  ಜನಜಾತ್ರೆಯಿಂದ ತುಂಬಿರುತ್ತದೆ.  ಮಂಜಿನ  ಹನಿಗಳ  ನಡುವಿನ  ಚಿತ್ತಾರ,  ಚುಮುಚುಮು  ಚಳಿಯಲ್ಲಿ  ಮಳೆಯ  ಸಿಂಚನ.  ಇವೆಲ್ಲವೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಗೆ ಭೇಟಿ ನೀಡಿದರೆ ಮನಸ್ಸು ಶಾಂತವಾಗುವುದರಲ್ಲಿ ಎರಡು ಮಾತಿಲ್ಲ.

ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಇಲ್ಲಿಯ ಅನುಭವವೇ ಬೇರೆ ಹಾಗಾಗಿ ಸಾಕಷ್ಟು ಪ್ರವಾಸಿಗರು, ಚಾರಣಿಗರು ಈ ಸಮಯದಲ್ಲಿ ಭೇಟಿ ನೀಡುವುದರಿಂದ ಚಿಕ್ಕಮಗಳೂರು ರಸ್ತೆ ಸದಾ ವಾಹನಗಳಿಂದ ತುಂಬಿರುತ್ತದೆ.

ಇಲ್ಲಿನ ಗಿರಿಶಿಖರವನ್ನು ಹತ್ತುವಾಗ ಸಿಗುವ ಸಂತೋಷ ಬೇರೆಲ್ಲೂ ಸಿಗಲಾರದು ಮುಳ್ಳಯ್ಯನಗಿರಿ ಅನ್ನೋ ಹೆಸರೇ ನಿಮ್ಮನ್ನು ಆಕರ್ಷಿಸುತ್ತದೆ. ಒಂದು ಸಲ ಆ ನೆಲಕ್ಕೆ ಕಾಲಿಟ್ಟರೆ ಆ ಊರು ಬಹುಬೇಗ ನಿಮ್ಮನ್ನು ಬಿಟ್ಟು ಹೋಗದು.

ಕಾರು ಬೈಕ್ ಮಾತ್ರ ಚಲಿಸಬಹುದಾದ ಕಿರಿದಾದ ಮಾರ್ಗ ಇದರಲ್ಲಿ ಸಂಚರಿಸುವಾಗ ನಾವೆಲ್ಲಿ ಹಿಮಾಲಯದ ಪರ್ವತದ ತಪ್ಪಲಿನಲ್ಲಿ ಇದ್ದೇವೇನೋ ಅನ್ನುವ ಅನುಭವದ  ಜೊತೆಗೆ ಜೀವಭಯ, ಒಂದು ಬದಿಯಲ್ಲಿ ಬೆಟ್ಟದ ಧರೆ ಇನ್ನೊಂದು ಬದಿಯಲ್ಲಿ ನೂರಾರು ಅಡಿಗಳಷ್ಟು ಆಳವಿರುವ ಕಂದಕ ಇವುಗಳ ನಡುವೆ ಅಪಾಯಕಾರಿ ತಿರುವಿನಿಂದ ಕೂಡಿದ ರಸ್ತೆಗಳು  ಇದರಲ್ಲಿ ಸಂಚರಿಸಲು ತಾಳ್ಮೆ ಜೊತೆಗೆ ಸಹನೆ ಅತ್ಯಗತ್ಯ.

ಚಾರಣಿಗರಿಗೆ ಸಾಮಾನ್ಯವಾಗಿ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಸೂಕ್ತವಾದ ಸಮಯವಾಗಿದೆ. ಮಳೆ ಇರದ ಕಾರಣ ಚಾರಣ ಮಾಡಲು ಉತ್ತಮ ವಾತಾವರಣ ಈ ಸಮಯದಲ್ಲಿ ಸಿಗುತ್ತದೆ.

ಮುಳ್ಳಯ್ಯನಗಿರಿ ತಲುಪುವ ಮೊದಲು ಸಿಗುವ ಸ್ಥಳ ಶೀತಾಳಯ್ಯನ ಗಿರಿ. ಈ ಸ್ಥಳದಲ್ಲಿ ಶೀತಾಳಯ್ಯ ತಪಸ್ಸು ಮಾಡಿದ್ದರಿಂದ ಈ ಗಿರಿಗೆ ಶೀತಾಳಯ್ಯನ ಗಿರಿ ಎಂದು ಹೆಸರು ಬಂದಿದೆ.ಇಲ್ಲಿ ಈಶ್ವರನ ದೇವಾಲಯವೂ ಇದೆ. ಇಲ್ಲಿಂದ ಪೂರ್ವಾಂಬುದಿಯ ಕಡೆ ನಡೆಯುತ್ತ ಹೊರಟರೆ ಸುಮಾರು ಎರಡು ಕಿ.ಮೀ ಗಳ ಅಂತರದಲ್ಲಿ ಕರ್ನಾಟಕದಲ್ಲೇ ಅತಿ ಎತ್ತರದ ಶಿಖರವೆಂದು ಹೆಸರು ಪಡೆದಿರುವ ಮುಳ್ಳಯ್ಯನ ಗಿರಿ ಶಿಖರದ ಕಲಶ ಕಾಣಸಿಗುತ್ತದೆ.

ಇಲ್ಲಿ ಬೆಟ್ಟದ ಅರ್ಧ ಭಾಗದವರೆಗೆ ವಾಹನ ಸಂಚಾರಕ್ಕೆ ಮಾರ್ಗವಿದ್ದು ನಂತರದ 300ಕ್ಕೂ ಹೆಚ್ಚಿನ ಮೆಟ್ಟಿಲುಗಳನ್ನು ನಡೆದೇ ಸಾಗಬೇಕು. ಇದರಲ್ಲಿ ಸಿಗುವ ರೋಚಕ ಅನುಭವ ಮಾತಿನಲ್ಲಿ ವರ್ಣಿಸಲು ಅಸಾಧ್ಯ, ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಬಲವಾಗಿ ಬೀಸುವ ಗಾಳಿ ಅವುಗಳನ್ನು ಸೀಳಿಕೊಂಡು ಮುನ್ನುಗುವ ಅನುಭವವೇ ರೋಚಕ, ಭಯದ ಜೊತೆಗೆ ಬೆಟ್ಟದ ತುದಿ ತಲುಪಬೇಕು ಎನ್ನುವ ಛಲ, ಇವೆಲ್ಲವನ್ನು ದಾಟಿ ಬೆಟ್ಟದ ತುದಿಗೆ ತಲುಪಿದಾಗ ಸಿಗುವುದೇ ಶ್ರೀ ಗುರು ಮುಳ್ಳಪ್ಪಸ್ವಾಮಿ ತಪಸ್ಸು ಮಾಡಿರುವ ಗದ್ದುಗೆ ಹಾಗೂ ದೇವಾಲಯ. ದೇವಾಲಯದ ಆವರಣದಲ್ಲಿ ಬಂದು ನಿಂತಾಗಲೂ ಕಿವಿಯಲ್ಲಿ ಗುಯ್ ಎನ್ನುವ ಗಾಳಿಯ ನಿನಾದ ಹೊರಹೊಮ್ಮುತ್ತಿರುತ್ತದೆ. ಅಂದಹಾಗೆ ಈ ನಿಸರ್ಗದ ವಿಸ್ಮಯದ ಅನುಭವ ನಿಮಗೂ ಆಗಿರಬಹುದು ಒಂದು ವೇಳೆ ನೀವು ಈ ಗಿರಿಶಿಖರಕ್ಕೆ ಭೇಟಿ ನೀಡಿಲ್ಲವಾದರೆ ಮಳೆಗಾಲದಲ್ಲಿ ಒಮ್ಮೆ ಬಿಡುವು ಮಾಡಿಕೊಂಡು ಚಿಕ್ಕಮಗಳೂರು ಜಿಲ್ಲೆಯನ್ನು ಸುತ್ತಿ ಮುಳ್ಳಯ್ಯನಗಿರಿಯ ನಿಸರ್ಗದ ಸ್ಪರ್ಶವನ್ನು ಅನುಭವಿಸಿ…

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಬೊಮ್ಮಾಯಿ

ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಬೊಮ್ಮಾಯಿ

ನಿವಾರ್‌ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ‌’

ನಿವಾರ್‌ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ‌’

Suspended

ಕರ್ತವ್ಯ ಲೋಪ: ಪಿಎಸ್‍ಐ ಸೇರಿ11ಮಂದಿ ಪೊಲೀಸ್ ಸಿಬ್ಬಂದಿ ಅಮಾನತು

vivo

Vivo V20 Pro ಡಿಸೆಂಬರ್ 2ರಂದು ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳೇನು ಗೊತ್ತಾ ?

biddar

ಬಸವಕಲ್ಯಾಣ ಉಪ ಚುನಾವಣೆ: ‘ಕೈ’ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭ

ಸ್ಥಳೀಯ ರೈಲುಗಳಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸುವವರ ಸಂಖ್ಯೆಯಲ್ಲಿ ಹೆಚ್ಚಳ!

ಸ್ಥಳೀಯ ರೈಲುಗಳಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸುವವರ ಸಂಖ್ಯೆಯಲ್ಲಿ ಹೆಚ್ಚಳ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಕೃತಿ ಸೌಂದರ್ಯದ “ಈ ಮೇರುತಿ ಪರ್ವತ” ಚಾರಣಿಗರ ಸ್ವರ್ಗ

ಪ್ರಕೃತಿ ಸೌಂದರ್ಯದ “ಈ ಮೇರುತಿ ಪರ್ವತ” ಚಾರಣಿಗರ ಸ್ವರ್ಗ

ಏಕದಿನದ ಯಶಸ್ವಿ ಚೇಸಿಂಗ್‌ ದಾಖಲೆ: ಅಂತಿಮ ಓವರ್‌ನಲ್ಲಿ ಅತ್ಯಧಿಕ ರನ್‌ ಚೇಸ್

ಏಕದಿನದ ಯಶಸ್ವಿ ಚೇಸಿಂಗ್‌ ದಾಖಲೆ: ಅಂತಿಮ ಓವರ್‌ನಲ್ಲಿ ಅತ್ಯಧಿಕ ರನ್‌ ಚೇಸ್

0000

ಕಣ್ಣಿಲ್ಲದವನಲ್ಲಿ ಸಾಧಿಸುವ ಕನಸಿತ್ತು : ಕೋಟಿ ಕೋಟಿ ಲಾಭ ಗಳಿಸುವ ಸಂಸ್ಥೆಯ ಸಿಇಓ ಶ್ರೀಕಾಂತ್

website

website ಸುರಕ್ಷಿತವಾಗಿರಿಸಿಕೊಳ್ಳುವುದು ಹೇಗೆ ? SSL ಸರ್ಟಿಫಿಕೇಟ್ ಎಂದರೇನು ?

sw-38

ಬಾಯಲ್ಲಿ ನೀರೂರಿಸುವ ಈಶಾನ್ಯ ಭಾರತದ ಖಾದ್ಯಗಳು

MUST WATCH

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ಹೊಸ ಸೇರ್ಪಡೆ

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

ಮತ್ತೆ ಸಿಡ್ನಿ ಸವಾಲು: ಸಿಡಿದೀತೇ ಟೀಮ್‌ ಇಂಡಿಯಾ?

cHIK

ಶಿಡ್ಲಘಟ್ಟ ಎಂಪಿಸಿಎಸ್ ಚುನಾವಣೆ; 15 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಭಾಗ್ಯ!

ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಬೊಮ್ಮಾಯಿ

ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು: ಬೊಮ್ಮಾಯಿ

ನಿವಾರ್‌ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ‌’

ನಿವಾರ್‌ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ‌’

Suspended

ಕರ್ತವ್ಯ ಲೋಪ: ಪಿಎಸ್‍ಐ ಸೇರಿ11ಮಂದಿ ಪೊಲೀಸ್ ಸಿಬ್ಬಂದಿ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.