Congress Government: ತೈಲ, ಹಾಲಿನ ದರ ಹೆಚ್ಚಿಸಿ ಬಡವರಿಗೆ ಅನ್ಯಾಯ 

ಹೆದ್ದಾರಿ ತಡೆ, ಪ್ರತಿಭಟನೆ ನಡೆಸಿ ತೇರದಾಳ ಕ್ಷೇತ್ರ ಶಾಸಕ ಸಿದ್ದು ಸವದಿ ವಾಗ್ದಾಳಿ

Team Udayavani, Jun 25, 2024, 7:55 PM IST

BJP-protest

ರಬಕವಿ-ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ, ಬಡವರ, ದೀನ ದಲಿತರ ವಿರೋಧಿಯಾಗಿದ್ದು, ಸರ್ವಾಧಿಕಾರಿ ಆಡಳಿತ ನೀಡುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ ತೈಲ, ಹಾಲಿನ ದರ  ಸೇರಿ 40ಕ್ಕೂ ಹೆಚ್ಚು ವಸ್ತುಗಳ ಬೆಲೆ ಹೆಚ್ಚಿಸಿ ಬಡವರಿಗೆ ಅನ್ಯಾಯ ಮಾಡಿದೆ. ಸುಳ್ಳು ಭರವಸೆಗಳ ನೀಡಿ ದೇಶದಲ್ಲಿ ಹೆಚ್ಚಿನ ಸ್ಥಾನಗಳ ಪಡೆದಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತೇರದಾಳ ಕ್ಷೇತ್ರ ಶಾಸಕ ಸಿದ್ದು ಸವದಿ ಹೇಳಿದರು.
ಮಂಗಳವಾರ ಇಲ್ಲಿನ ಭದ್ರನವರ ಕಟ್ಟಡ ಮುಂಭಾಗದಲ್ಲಿ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿ, ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿ ರಾಜ್ಯದ ಜನರು ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಯೋಜನೆಗಳ ನಿಲ್ಲಿಸುವಂತೆ ಹೇಳಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಇರುವುದರಿಂದ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಟೀಕಿಸಿದರು.

ಶಕ್ತಿ ಯೋಜನೆಯಿಂದ ದಿನನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆಯಾಗಿದೆ. ನಗರ ಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡಿಲ್ಲ. ನೋಂದಣಿ ಶುಲ್ಕ ಸೇರಿ ಅನೇಕ ರೀತಿಯ ದರಗಳ ಹೆಚ್ಚಿಸಿ  ಕಾಂಗ್ರೆಸ್ ರೈತರಿಗೆ, ಬಡವರಿಗೆ ಅನ್ಯಾಯ ಮಾಡಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಅರ್ಧ ಗಂಟೆಗಳಿಗಿಂತ ಹೆಚ್ಚು ಕಾಲ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ  ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಶ್ರೀ ಶೈಲ ಬೀಳಗಿ, ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಶ್ರೀಶೈಲ ಯಾದವಾಡ, ಬಸವರಾಜ ತೆಗ್ಗಿ, ಸಿದ್ದನಗೌಡ ಪಾಟೀಲ, ಮಾನಿಂಗ ಕೋಳಿಗುಡ್ಡ, ಮನೋಹರ ಶಿರೋಳ, ಪ್ರಭಾಕರ ಮೊಳೆದ, ಈರಣ್ಣ ಚಿಂಚಖಅಡಿ, ಗುರು ಶೀಲವಂತ, ಸವಿತಾ ಹೊಸೂರ, ಗೌರಿ ಮಿಳ್ಳಿ, ದೀಪಾ ಕೊಣ್ಣೂರ, ಶಶಿಕಲಾ ಸಾರವಾಡ, ಜಯಶ್ರೀ ಬಾಗೇವಾಡಿ, ಪವಿತ್ರಾ ತುಕ್ಕನ್ನವರ, ಸಚಿನ ಕೊಡತೆ, ಸುಬಾಸ ಚೋಳಿ, ರವಿ ಕರಲಟ್ಟಿ, ರಾಮಣ್ಣ ಹಿಡಕಲ, ಪ್ರಕಾಶ ದಾನಿಗೊಂಡ, ಚಿದಾನಂದ ಹೊರಟ್ಟಿ, ಶ್ರೀಶೈಲ ಉಳ್ಳಾಗಡ್ಡಿ, ರಾಜು ಪಾಟೀಲ, ಭೀಮಸಿ ಪಾಟೀಲ ಸೇರಿ ಅನೇಕರು ಇದ್ದರು.

ಟಾಪ್ ನ್ಯೂಸ್

eshwarappa

BJPಯವರು ಕರೆಯುತ್ತಿದ್ದಾರೆ, ಶುದ್ಧೀಕರಣವಾಗದೇ ಸೇರಲ್ಲ: ಈಶ್ವರಪ್ಪ

1-ree

Kerala ಮುಸ್ಲಿಂ ನಡೆಸುತ್ತಿದ್ದ ವೆಜ್ ಹೋಟೆಲ್‌ಗೆ ಹೋಗುತ್ತಿದ್ದೆ: ಸುಪ್ರೀಂ ಜಡ್ಜ್ ಭಟ್ಟಿ

Nitish-modi

Special Status: ಬಿಹಾರದ ವಿಶೇಷ ಸ್ಥಾನಮಾನದ ಬೇಡಿಕೆಗೆ ಕೇಂದ್ರ ಸರ್ಕಾರ ನಕಾರ

Cricket will make you cry..: Basit Ali’s reply to Shami

Mohammed Shami; ಕ್ರಿಕೆಟ್ ನಿಮ್ಮನ್ನು ಅಳಿಸುತ್ತದೆ..: ಶಮಿ ವಿರುದ್ದ ಬಾಸಿತ್ ಅಲಿ ಟೀಕೆ

1-suraj-revann

MLC ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

arrest-25

UAE; ಪ್ರತಿಭಟನೆಗಿಳಿದ ಹಲವು ಬಾಂಗ್ಲಾದೇಶೀಯರಿಗೆ ಕಠಿನ ಶಿಕ್ಷೆ ವಿಧಿಸಿದ ಯುಎಇ

ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding, Birthday ಪಾರ್ಟಿ ಕೂಡ ಇಲ್ಲಿ ನಡೆಯುತ್ತೆ

ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding Shoot, Birthday ಪಾರ್ಟಿ ಕೂಡ ನಡೆಯುತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsad

Escape; ಸೆರೆಸಿಕ್ಕ ಚಿರತೆ ಬೋನಿನಿಂದ ತಪ್ಪಿಸಿಕೊಂಡಿತು!!: ಮತ್ತೆ ಆತಂಕ

ಬಿಜೆಪಿ-ಕಾಂಗ್ರೆಸ್ ಸರ್ಕಾರಗಳ ಹಗರಣ ಸಿಬಿಐಗೆ ಕೊಡಿ: ಕೆ.ಎಸ್.ಈಶ್ವರಪ್ಪ

Bagalkote; ಬಿಜೆಪಿ-ಕಾಂಗ್ರೆಸ್ ಸರ್ಕಾರಗಳ ಹಗರಣ ತನಿಖೆ ಸಿಬಿಐಗೆ ಕೊಡಿ: ಕೆ.ಎಸ್.ಈಶ್ವರಪ್ಪ

1-mmm

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

SIddu-Savadhi

Government Doctor: ಆಸ್ಪತ್ರೆಯಲ್ಲಿ ರಾಜಕೀಯ ಮಾಡುವುದಾದ್ರೆ ಸರ್ಕಾರಿ ನೌಕರಿ ತ್ಯಜಿಸಿ

Rabkavi Banhatti ನವಜಾತ ಶಿಶುವಿಗೆ 12 ಕಾಲ್ಬೆರಳು, 13 ಕೈ ಬೆರಳುಗಳು..!

Rabkavi Banhatti ನವಜಾತ ಶಿಶುವಿಗೆ 12 ಕಾಲ್ಬೆರಳು, 13 ಕೈ ಬೆರಳುಗಳು..!

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-sadsad

Escape; ಸೆರೆಸಿಕ್ಕ ಚಿರತೆ ಬೋನಿನಿಂದ ತಪ್ಪಿಸಿಕೊಂಡಿತು!!: ಮತ್ತೆ ಆತಂಕ

eshwarappa

BJPಯವರು ಕರೆಯುತ್ತಿದ್ದಾರೆ, ಶುದ್ಧೀಕರಣವಾಗದೇ ಸೇರಲ್ಲ: ಈಶ್ವರಪ್ಪ

1-ree

Kerala ಮುಸ್ಲಿಂ ನಡೆಸುತ್ತಿದ್ದ ವೆಜ್ ಹೋಟೆಲ್‌ಗೆ ಹೋಗುತ್ತಿದ್ದೆ: ಸುಪ್ರೀಂ ಜಡ್ಜ್ ಭಟ್ಟಿ

Nitish-modi

Special Status: ಬಿಹಾರದ ವಿಶೇಷ ಸ್ಥಾನಮಾನದ ಬೇಡಿಕೆಗೆ ಕೇಂದ್ರ ಸರ್ಕಾರ ನಕಾರ

Cricket will make you cry..: Basit Ali’s reply to Shami

Mohammed Shami; ಕ್ರಿಕೆಟ್ ನಿಮ್ಮನ್ನು ಅಳಿಸುತ್ತದೆ..: ಶಮಿ ವಿರುದ್ದ ಬಾಸಿತ್ ಅಲಿ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.