ಬೆಂಗಳೂರಿನ ಇಬ್ಬರಿಗೆ ಕೊರೊನಾ ಶಂಕೆ: ರಕ್ತದ ಮಾದರಿ ನೆಗೆಟಿವ್; ದೂರವಾದ ಆತಂಕ

Team Udayavani, Jan 29, 2020, 1:20 PM IST

ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಚೀನಾ ಪ್ರವಾಸ ಹೋಗಿ ಬಂದು ಭಾನುವಾರ ಆಸ್ಪತ್ರೆ ಸೇರಿದ್ದ ಇಬ್ಬರ ರಕ್ತ ಮಾದರಿ ವರದಿ ನೆಗೆಟಿವ್ ಬಂದಿದ್ದು, ಆತಂಕ ದೂರಾಗಿದೆ.

ಜ.18 ರಂದು ಚೀನಾದಿಂದ ಬಂದಿದ್ದ ಬೆಂಗಳೂರು ಮೂಲದ ಇಬ್ಬರು ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ರಾಜೀವ್ ಗಾಂಧಿ ಆಸ್ಪತ್ರೆಗೆ ಭಾನುವಾರ ಸಂಜೆ ದಾಖಲಾಗಿದ್ದರು. ಆ ದಿನವೇ ಇಲ್ಲಿನ ವೈದ್ಯರು ಇವರ ರಕ್ತ ಮಾದರಿ ಪರೀಕ್ಷೆಗೆ ಎನ್ ಐವಿ ಪುಣೆಗೆ ಕಳಿಸಿದ್ದರು. ಬುಧವಾರ ರಕ್ತ ಮಾದರಿಯ ವರದಿ ಬಂದಿದ್ದು, ಕರೋನಾ ಸೋಂಕು ಇಲ್ಲ ಎಂದು ದೃಢಪಟ್ಟಿದೆ.

ಇನ್ನು ಮಂಗಳವಾರ ಆಸ್ಪತ್ರೆಗೆ ಆಗಮಿಸಿದ್ದ ಐದು ಮಂದಿಯ ರಕ್ತ ಮಾದರಿ ವರದಿ ಬರಬೇಕಿದೆ. ಅಲ್ಲಿಯವರೆಗೂ ಐದು ಮಂದಿ ಆಸ್ಪೆತ್ರೆಯಲ್ಲಿಯೇ ಇರಲಿದ್ದಾರೆ.

ಇವರಲ್ಲದೇ ವುಹಾನ್ ಸಿಟಿಯಿಂದ ಬಂದಿದ್ದ ಆರು ಮಂದಿಯನ್ನು ಮನೆಯಲ್ಲಿಯೇ ನಿಗಾ ವಹಿಸಲಾಗಿದೆ. ಇವರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ನಿತ್ಯ ಕರೆ ಮಾಡಿ ಆರೋಗ್ಯ ವಿಚಾರಣೆ ಮಾಡಲಾಗುತ್ತದೆ. ಅಗತ್ಯವಿದ್ದರೆ ವೈದ್ಯರೇ ಅವರ ಬಳಿ ತೆರಳಿ ಪರೀಕ್ಷೆ ಮಾಡಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ