ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ನ.8 ರಿಂದ ಅಮೆರಿಕಕ್ಕೆ ತೆರಳಲು ಅವಕಾಶ
Team Udayavani, Nov 4, 2021, 8:02 PM IST
ನವದೆಹಲಿ : ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರೂ, ನ.8ರಿಂದ ಅಮೆರಿಕಕ್ಕೆ ತೆರಳಲು ಸಾಧ್ಯವಿದೆ. ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಪಟ್ಟಿಯಲ್ಲಿ ಹೈದರಾಬಾದ್ ಕಂಪನಿ ಸಿದ್ಧಪಡಿಸಿದ ಲಸಿಕೆಗೆ ಮಾನ್ಯತೆ ಸಿಗುತ್ತಲೇ ಈ ನಿರ್ಧಾರ ಪ್ರಕಟವಾಗಿದೆ.
“ಎಎನ್ಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ)ದ ಮಾಧ್ಯಮ ವಕ್ತಾರ ಸ್ಕಾಟ್ ಪೌಲ್, “ಡಬ್ಲ್ಯೂಎಚ್ಒ ನಿರ್ಧರಿಸಿದಂತೆ ಕೊವ್ಯಾಕ್ಸಿನ್ ಲಸಿಕೆಯ 2 ಡೋಸ್ ಹಾಕಿಸಿಕೊಂಡವರೂ ನ.8ರಿಂದ ಅಮೆರಿಕಕ್ಕೆ ಪ್ರವೇಶ ಪಡೆಯಲು ಸಾಧ್ಯವಿದೆ’ ಎಂದು ಹೇಳಿದ್ದಾರೆ.
ಅದಕ್ಕೆ ಪೂರಕವಾಗಿ ಅಮೆರಿಕದ ಪ್ರವೇಶ ನಿಯಮಗಳಲ್ಲಿಯೂ ಬದಲು ಮಾಡಲಾಗಿದೆ.
ಇದನ್ನೂ ಓದಿ : ದಾರಿ ಕೇಳುವ ನೆಪದಲ್ಲಿ ಚಿನ್ನದ ಸರ ಎಗರಿಸಿದ ಕಳ್ಳರಿಗೆ ಜೈಲು ದಾರಿ ತೋರಿಸಿದ ಪೊಲೀಸರು