ಕೋವಿಡ್‌ 19 ಮಾನಸಿಕ ಸಮಸ್ಯೆ ಹೆಚ್ಚುವ ಆತಂಕ

Team Udayavani, Apr 23, 2020, 12:15 PM IST

ಕೋವಿಡ್‌ 19 ಮಾನಸಿಕ ಸಮಸ್ಯೆ ಹೆಚ್ಚುವ ಆತಂಕ

ಮಣಿಪಾಲ: ಕೋವಿಡ್‌-19 ಬಂದ ಬಳಿಕ ಎಲ್ಲರೂ ಮನೆಗೇ ಸೀಮಿತವಾಗಿದ್ದಾರೆ. ಏಕಾಏಕಿ ಜನರಲ್ಲಿ ಆತಂಕಕಾರಿಯಾಗಿ ಕಾಡುತ್ತಿರುವ ಸಾಂಕ್ರಾಮಿಕ ರೋಗ ವಿಶ್ವದ ಯಾವುದೇ ಭಾಗವೂ ಸುರಕ್ಷಿತ ವಲ್ಲ ಎನ್ನುವ ಅಭಿಪ್ರಾಯ ಸೃಷ್ಟಿಸಿದೆ.

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ಇದು ಕೇವಲ ದೈಹಿಕ ಸಮಸ್ಯೆಯಾಗಿ ಕಾಡುತ್ತಿಲ್ಲ. ಕೋವಿಡ್ ಭೀತಿ, ಕೆಲಸದ ಒತ್ತಡ, ಉದ್ಯೋಗ ಕಳೆದುಕೊಳ್ಳುವ ಭೀತಿಯ ನಡುವೆ ಜನರು ಬದುಕುತ್ತಿದ್ದಾರೆ. ನಾಳೆ ಏನಾಗಲಿದೆ ಎಂಬುದು ಯಾರೂ ಊಹಿಸಲಾದ ಪರಿಸ್ಥಿತಿ.

ಲಾಕ್‌ ಡೌನ್‌ ಆಗಿರುವುದರಿಂದ ಸಾಮಾಜಿಕ ಅಂತರದ ಜತೆಗೆ ಮನೆಯÇÉೇ ಇರುವಂತೆ ಸರಕಾರಗಳು ಸೂಚಿಸಿವೆ. ಸದಾ ಓಡಾಡುತ್ತ ಇದ್ದವರಿಗೆ ಕೈ ಕಟ್ಟಿ ಹಾಕಿದ ಅನುಭವ. ಜಗತ್ತಿನ ಬಹುತೇಕ ಮಂದಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಭಾರತೀಯ ಸೈಕಿಯಾಟ್ರಿ ಸೊಸೈಟಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಿದೆ. ಜಗತ್ತಿನಲ್ಲೂ ಇದೇ ಸ್ಥಿತಿ.

ನಮ್ಮ ದಿನಚರಿ ಸಂಪುರ್ಣ ಬದಲಾಗಿದೆ. ಬಹುತೇಕ ಜನರಿಗೆ ದಿನಚರಿಯೇ ಇಲ್ಲ. ಕೋವಿಡ್‌-19 ವಿರುದ್ಧ ಸಮರ ಸಾರಲು ಲಾಕ್‌ಡೌನ್‌ ಒಳ್ಳೆಯ ಕ್ರಮವಾದರೂ ದುಷ್ಪರಿಣಾಮವೂ ಇದೆ. ಸಾಂಕ್ರಾಮಿಕ ರೋಗವು ಕೆಲವು ವಾರಗಳಲ್ಲಿ ಜೀವನಶೈಲಿ, ವೃತ್ತಿ ಮತ್ತು ಆರ್ಥಿಕತೆಯ ಮೇಲೆ ಆಗಾಧ ಪರಿಣಾಮ ಬೀರಿದೆ.

ಭಾರತದಲ್ಲಿಯೂ ಸಹ, ವಿವಿಧ ವಯೋಮಾನದ ಜನರು ಅತಿಯಾದ ಒತ್ತಡ, ಆತಂಕ, ಭೀತಿ ಮತ್ತು ಖನ್ನತೆಯನ್ನು ಎದುರಿಸುತ್ತಿದ್ದಾರೆ. ಅದರ ಜತೆಗೆ ಈ ಕೋವಿಡ್ ವೈರಸ್‌ ಸೋಂಕು ಹರಡುವಿಕೆಯ ಭಯವು ಸಾಮೂಹಿಕ ಉನ್ಮಾದ, ಎನ್ಸೋಫೋಬಿಯಾ ಮತ್ತು ರೋಗ ಹರಡುವ ಭೀತಿಯನ್ನು ಹೆಚ್ಚಿಸಿವೆ.

ಪ್ರತಿ ದಿನ ಅಥವ ವಾರಕ್ಕೆ ಒಮ್ಮೆ ಮದ್ಯಪಾನ, ತಂಬಾಕು ಮತ್ತಿತರ ವಸ್ತುಗಳನ್ನು ಸೇವಿಸುತ್ತಿದ್ದವರೂ ಅವುಗಳ ಅಲಭ್ಯತೆಯಿಂದ ಖನ್ನತೆಗೆ ಒಳಗಾಗು ತ್ತಿದ್ದಾರೆ. ಇತ್ತೀಚೆಗೆ ಆಲ್ಕೋಹಾಲ್‌ ಅಂಶ ಇರುವ ಸ್ಯಾನಿಟೈಸರ್‌ ಅನ್ನು ವ್ಯಕ್ತಿಯೊಬ್ಬರು ಸೇವಿಸಿ ಮೃತ ಪಟ್ಟದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶೇಷವಾಗಿ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಬೆರೆತಿದ್ದವರು ಇಂದು ಮನೆಗೆ ಸೀಮಿತರಾಗಿದ್ದಾರೆ. ಆಟವಾಡಲೂ ಹೊರಗೆ ಹೋಗುವಂತಿಲ್ಲ. ಪಾರ್ಕ್‌, ಆಟಿಕೆ ಮತ್ತು ದೈಹಿಕ ವ್ಯಾಯಾಮಗಳನ್ನು ಒದಗಿಸುವಂಥ ಕ್ರೀಡೆ ಗಳತ್ತ ಅವರು ಹೆಚ್ಚು ಆಕರ್ಷಿತರಾಗಿರುತ್ತಾರೆ. ಲಾಕ್‌ಡೌನ್‌ ಪರಿಸ್ಥಿತಿ ಆ ಅವಕಾಶವನ್ನು ತಪ್ಪಿಸಿದೆ. ಇದರಿಂದ ಮಕ್ಕಳು ಶುದ್ಧ ಗಾಳಿಯಿಂದ ವಂಚಿತರಾಗುತ್ತಿದ್ದಾರೆ ಎಂಬುದು ಲಂಡನ್ನಿನ ವೈದ್ಯರ ಅಭಿಪ್ರಾಯ.

ಮಕ್ಕಳಿಗಾಗಿ ಲಾಕ್‌ಡೌನ್‌ ಸಡಿಲಿಕೆ
ಕೋವಿಡ್‌ -19 ಹರಡುವುದನ್ನು ತಡೆಯುವ ಕಠಿಣ ಕ್ರಮಗಳಡಿ ಮಾರ್ಚ್‌ 14 ರಿಂದ ಸ್ಪೇನ್‌ನಲ್ಲಿ ಮಕ್ಕಳನ್ನು ಮನೆಯಲ್ಲಿ ಇರಬೇಕು ಎಂದು ಸರಕಾರ ವಿಶೇಷ ಆದೇಶ ಪ್ರಕಟಿಸಿತ್ತು. ಈಗ ಸರಕಾರ ಏಪ್ರಿಲ್‌ 27 ರ ಬಳಿಕ ನಿಯಮವನ್ನು ಸಡಿಲಿಸುವ ಸೂಚನೆ ನೀಡಿದೆ‌. ಇಂತಹ ಕ್ರಮಗಳಿಂದ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಸ್ಪ್ಯಾನಿಷ್‌ ಮಕ್ಕಳ ಹಕ್ಕುಗಳ ಒಕ್ಕೂಟವು ಎಚ್ಚರಿಸಿತ್ತು. ಡೆನ್ಮಾರ್ಕ್‌ನಂತಹ ಇತರ ದೇಶಗಳು 11 ವರ್ಷದೊಳಗಿನವರಿಗೆ ಶಾಲೆಗಳನ್ನು ತೆರೆಯಲು ಪ್ರಾರಂಭಿಸಿದರೆ, ನಾರ್ವೆ ಶಿಶುವಿಹಾರಗಳನ್ನು ಮತ್ತೆ ತೆರೆಯಲು ಸಜ್ಜಾಗಿದೆ. ಮೇ 4ರಂದು ಜರ್ಮನಿ ಕೆಲವು ಶಾಲೆಗಳನ್ನು ಮತ್ತೆ ತೆರೆಯಲಿದೆ.

ಟಾಪ್ ನ್ಯೂಸ್

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

ರಸ್ತೆಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ: ಸಚಿವ ಅಂಗಾರ

ರಸ್ತೆಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ: ಸಚಿವ ಅಂಗಾರ

ಸಂಶಯ ಹುಟ್ಟು ಹಾಕಿರುವ ಯುವಜೋಡಿ ಸಾವು;  ಕಾರಿನ ಹಿಂಬದಿ ಸೀಟ್‌ನಲ್ಲಿತ್ತು ಮೃತದೇಹಸಂಶಯ ಹುಟ್ಟು ಹಾಕಿರುವ ಯುವಜೋಡಿ ಸಾವು;  ಕಾರಿನ ಹಿಂಬದಿ ಸೀಟ್‌ನಲ್ಲಿತ್ತು ಮೃತದೇಹ

ಸಂಶಯ ಹುಟ್ಟು ಹಾಕಿರುವ ಯುವಜೋಡಿ ಸಾವು;  ಕಾರಿನ ಹಿಂಬದಿ ಸೀಟ್‌ನಲ್ಲಿತ್ತು ಮೃತದೇಹಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-fdsfsfdsf

ಬುದ್ಧನ ಮಾರ್ಗ ಅನುಸರಿಸುವ ಅವಶ್ಯಕತೆಯಿದೆ : ಜಪಾನ್ ನಲ್ಲಿ ಪ್ರಧಾನಿ ಮೋದಿ

ಆರ್ಥಿಕ ಸುಧಾರಣೆ ಅಬಾಧಿತ;ದಾವೋಸ್‌ ವಿಶ್ವ ಆರ್ಥಿಕ ಶೃಂಗದಲ್ಲಿ ನೀತಿ ಆಯೋಗದ ಸಿಇಒ ಪ್ರತಿಪಾದನೆ

ಆರ್ಥಿಕ ಸುಧಾರಣೆ ಅಬಾಧಿತ;ದಾವೋಸ್‌ ವಿಶ್ವ ಆರ್ಥಿಕ ಶೃಂಗದಲ್ಲಿ ನೀತಿ ಆಯೋಗದ ಸಿಇಒ ಪ್ರತಿಪಾದನೆ

ಪಾಕಿಸ್ತಾನ: ಇಂಧನ ಉಳಿಸಲು ಕೆಲಸದ ದಿನಕ್ಕೆ ಕತ್ತರಿ!

ಪಾಕಿಸ್ತಾನ: ಇಂಧನ ಉಳಿಸಲು ಕೆಲಸದ ದಿನಕ್ಕೆ ಕತ್ತರಿ!

1-dfdfdsf

ಉಕ್ರೇನ್ ನಲ್ಲಿ ರಷ್ಯಾದ ಟ್ಯಾಂಕ್ ಕಮಾಂಡರ್‌ಗೆ ಜೀವಾವಧಿ ಶಿಕ್ಷೆ

ಕೋವಿಡ್ 19: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ

ಕೋವಿಡ್ 19: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.