ಕೋವಿಡ್ ಸೋಂಕಿಗೆ 513 ಸೇನಾನಿಗಳ ಬಲಿದಾನ! ಇನ್ನೂ ತಲುಪದ 30 ಲಕ್ಷ ರೂ. ಪರಿಹಾರ

Team Udayavani, Oct 18, 2020, 6:40 AM IST

ಕೋವಿಡ್ ಸೋಂಕಿಗೆ 513 ಸೇನಾನಿಗಳ ಬಲಿದಾನ! ಇನ್ನೂ ತಲುಪದ 30 ಲಕ್ಷ ರೂ. ಪರಿಹಾರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕೇಕೆ ನಿಂತಿಲ್ಲ. ಸೋಂಕು 7 ಲಕ್ಷ ಮೀರಿದ್ದರೆ, ಸಾವಿನ ಸಂಖ್ಯೆ 10 ಸಾವಿರ ಮೀರಿದೆ. ಆದರೆ ಸೋಂಕು ಪೀಡಿತರಿಗೆ ಚಿಕಿತ್ಸೆ, ಕೊರೊನಾ ಬಗ್ಗೆ ಅರಿವು, ಸ್ವತ್ಛತೆ, ಪೌರಸೇವೆ ಒದಗಿಸುವಾಗ ಪ್ರಾಣ ಕಳೆದುಕೊಂಡಿರುವ ಕೊರೊನಾ ಸೇನಾನಿಗಳ ಸಂಖ್ಯೆ 500ಕ್ಕೂ ಅಧಿಕ. ವಿಚಿತ್ರವೆಂದರೆ, ಇದುವರೆಗೂ ಇವರಲ್ಲಿ ಒಬ್ಬರಿಗಷ್ಟೇ 30 ಲಕ್ಷ ರೂ. ಪರಿಹಾರ ಸಿಕ್ಕಿದೆ!

ಸೋಂಕಿನಿಂದಲೇ ಹೆಚ್ಚು ಸಾವು
ಕರ್ತವ್ಯದಲ್ಲಿರುವಾಗಲೇ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ.90. ಉಳಿದಂತೆ ಶೇ.10 ಮಂದಿ ಹೃದಯಾಘಾತ, ಅಪಘಾತ ಮತ್ತಿತರ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಸರಕಾರದ ಬಳಿ ಖಚಿತ ಮಾಹಿತಿ ಇಲ್ಲ. ವಿವಿಧ ಇಲಾಖೆಗಳು ಮತ್ತು ಸಂಘ- ಸಂಸ್ಥೆಗಳಿಂದ “ಉದಯವಾಣಿ’ ಈ ಮಾಹಿತಿ ಕಲೆ ಹಾಕಿದೆ.

ಯಾರು ಸೇನಾನಿಗಳು?
ವೈದ್ಯರು, ನರ್ಸ್ಗಳು, ಆಶಾ ಕಾರ್ಯಕರ್ತೆಯರು, ಪೊಲೀಸರು, ಅಗ್ನಿಶಾಮಕ ದಳ ಸಿಬಂದಿ, ಶಿಕ್ಷಣ ಇಲಾಖೆ ಸಿಬಂದಿ, ಪೌರ ಕಾರ್ಮಿಕರು, ಸಾರಿಗೆ ಇಲಾಖೆ ಸಿಬಂದಿ.

ಒಬ್ಬರಿಗೆ ಮಾತ್ರ ಪರಿಹಾರ!
ಸರಕಾರ ಇದುವರೆಗೆ ಒಬ್ಬರಿಗೆ ಮಾತ್ರ 30 ಲಕ್ಷ ರೂ. ಪರಿಹಾರ ನೀಡಿದೆ. ಮೃತ ಉಪವಿಭಾಗಾಧಿಕಾರಿ ಗಂಗಾಧರಯ್ಯ ಅವರ ಕುಟುಂಬಕ್ಕೆ ಕೋವಿಡ್‌ ನಿಧಿಯಿಂದ 30 ಲಕ್ಷ ರೂ. ನೀಡಲಾಗಿದೆ. ಕೊರೊನಾ ಸೇನಾನಿಗಳಾಗಿ ಮೃತಪಟ್ಟ ಇಲಾಖೆಯ ಅಧಿಕಾರಿ-ಸಿಬಂದಿಗೆ 30 ಲಕ್ಷ ರೂ. ಜತೆಗೆ ಪೊಲೀಸ್‌ ಇಲಾಖೆಯಿಂದ ಎಲ್ಲ ಪರಿಹಾರ ಸೌಲಭ್ಯ ದೊರೆಯುತ್ತವೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಆಡಳಿತ) ಡಾ| ಎಂ.ಎ. ಸಲೀಂ ಹೇಳಿದ್ದಾರೆ.

ಯಾರಿಗೆ ಪರಿಹಾರ? ಯಾರಿಗಿಲ್ಲ?
– ಕೋವಿಡ್‌ ಕರ್ತವ್ಯ ನಿರ್ವಹಣೆಯಲ್ಲಿ ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ.
– ಸರಕಾರಿ ನೌಕರನಿಗೆ ಆತನ ಮಾಮೂಲಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಕೋವಿಡ್‌ ಕಾಣಿಸಿಕೊಂಡರೆ ಅದರ ಚಿಕಿತ್ಸಾ ವೆಚ್ಚವನ್ನಷ್ಟೇ ಸರಕಾರ ಭರಿಸಲಿದ್ದು, 30 ಲಕ್ಷ ರೂ. ಪರಿಹಾರಕ್ಕೆ ಅರ್ಹತೆ ಇರುವುದಿಲ್ಲ.
– ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡು ಕೋವಿಡ್‌ ಬದಲಿಗೆ ಬೇರೆ ಕಾರಣಕ್ಕೆ ಮೃತಪಟ್ಟರೆ ಅವರಿಗೆ ಪರಿಹಾರ ಸಿಗದು.

ದ.ಕ., ಉಡುಪಿ ಎಷ್ಟು?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಕೊರೊನಾ ಸೇನಾನಿಗಳು ಮೃತಪಟ್ಟಿದ್ದಾರೆ ಎಂಬುದು ಸದ್ಯಕ್ಕಿರುವ ಮಾಹಿತಿ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೇನಾನಿಗಳ ಸಾವು ಸಂಭವಿಸಿಲ್ಲ.

ಸಾವಿಗೀಡಾದವರು: ಯಾರ್ಯಾರು? ಎಷ್ಟು?
ವೈದ್ಯರು
ಕೊರೊನಾ ವಿರುದ್ಧದ ಹೋರಾಟದಲ್ಲಿ ಜನರ ಪಾಲಿಗೆ ಇವರೇ ದೈವೀ ಸ್ವರೂಪರು. ಆದರೆ ಚಿಕಿತ್ಸೆ ನೀಡುತ್ತಲೇ ಸೋಂಕಿನಿಂದ ಪ್ರಾಣ ತೆತ್ತ ವೈದ್ಯರ ಸಂಖ್ಯೆ 60. ಇದು ವೈದ್ಯಕೀಯ ಸಂಘದ ಮಾಹಿತಿ. ಆದರೆ ಆರೋಗ್ಯ ಇಲಾಖೆಯ ಬಳಿ ಕೇವಲ 9 ಮಂದಿ ಸಾವನ್ನಪ್ಪಿರುವ  ಮಾಹಿತಿ ಇದೆ.

ನರ್ಸ್‌ಗಳು
ವೈದ್ಯರ ಜತೆಗೆ ಬೆನ್ನೆಲುಬಾಗಿ ನಿಂತವರು ನರ್ಸ್ ಗಳು ಅಥವಾ ಅರೆ ವೈದ್ಯಕೀಯ ಸಿಬಂದಿ. ಇವರೂ ತಮ್ಮ ಜೀವ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರಲ್ಲಿ 19 ನರ್ಸ್‌ಗಳು, ಒಬ್ಬ ವಾರ್ಡ್‌ ಬಾಯ್‌ ಸಾವನ್ನಪ್ಪಿದ್ದಾರೆ. ಇವರಿಗೂ ಪರಿಹಾರ ಸಿಕ್ಕಿರುವ ಮಾಹಿತಿ ಇಲ್ಲ.

ಪೊಲೀಸರು
ಸುಮಾರು 82 ಅಧಿಕಾರಿಗಳು, ಸಿಬಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅಪರಾಧಿಗಳ ಬಂಧನ, ಲಾಕ್‌ಡೌನ್‌ ಸಂದರ್ಭದಲ್ಲಿ ಬಂದೋಬಸ್ತ್, ರಾತ್ರಿ ಪಾಳಿಗೆ ನಿಯೋಜನೆ ವೇಳೆ ಸೋಂಕು ತಗುಲಿ ಮೃತರಾಗಿದ್ದಾರೆ.

ಚಾಲಕ, ನಿರ್ವಾಹಕರು
96 ಚಾಲಕರು ಮತ್ತು ನಿರ್ವಾಹಕರು ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾದಿಂದ ಮೃತಪಟ್ಟ ಸಾರಿಗೆ ನೌಕರರನ್ನು ಕೊರೊನಾ ಸೇನಾನಿಗಳು ಎಂದು ಪರಿಗಣಿಸಿ ಪರಿಹಾರ ನೀಡಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಶಿಕ್ಷಕ , ಉಪನ್ಯಾಸಕರು
ಕೊರೊನಾ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಮತ್ತಿತರ ಸಮೀಕ್ಷೆ ಕಾರ್ಯಗಳಿಗೆ ನಿಯೋಜಿತರಾಗಿದ್ದ ಶಿಕ್ಷಕರು, ವಿದ್ಯಾಗಮ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದವರು, ಮೌಲ್ಯಮಾಪನ ಕಾರ್ಯದ ನಿಯೋ ಜನೆ ವೇಳೆ ಒಟ್ಟು 200 ಶಿಕ್ಷ ಕರು, 35 ಮಂದಿ ಉಪನ್ಯಾಸಕರು ಪ್ರಾಣ ಕಳೆದುಕೊಂಡಿದ್ದಾರೆ.

ಆಶಾ ಕಾರ್ಯಕರ್ತೆಯರು
ಕೊರೊನಾ ತಡೆಯಲ್ಲಿ ಮತ್ತು ಸೋಂಕು ಪರೀಕ್ಷೆ ಪ್ರಕ್ರಿಯೆಯಲ್ಲಿ ಆಶಾ ಕಾರ್ಯಕರ್ತೆಯರ ಕೆಲಸ ಮರೆಯುವಂತಿಲ್ಲ. ಹಳ್ಳಿ ಹಳ್ಳಿಗಳಲ್ಲೂ ಇವರೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಇವರಲ್ಲೂ ಸುಮಾರು 10 ಮಂದಿ ಮೃತರಾಗಿದ್ದಾರೆ. ಸೋಂಕಿನಿಂದ ಒಬ್ಬರು ಮೃತರಾಗಿದ್ದರೆ, ಇತರ ಕಾರಣಗಳಿಂದ 9 ಮಂದಿ ಸಾವನ್ನಪ್ಪಿದ್ದಾರೆ.

ಪೌರ ಕಾರ್ಮಿಕರು
ಕೊರೊನಾ ಕಾಲದಲ್ಲಿ ಅಂಜದೆ ಕೆಲಸ ಮಾಡಿದವರಲ್ಲಿ ಪೌರ ಕಾರ್ಮಿಕರೂ ಮೊದಲಿಗರು. ಇವರನ್ನೂ ಕೊರೊನಾ ಸೋಂಕು ಬಿಡಲಿಲ್ಲ. ಇಲ್ಲೂ 4 ಪೌರ ಕಾರ್ಮಿಕರು, 4 ಗುತ್ತಿಗೆ ಪೌರ ಕಾರ್ಮಿಕರು ಮತ್ತು ಇಬ್ಬರು ನೋಡಲ್‌ ಅಧಿಕಾರಿಗಳು ಸಾವಿಗೀಡಾಗಿದ್ದಾರೆ.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.