ಒಲಿಂಪಿಕ್ಸ್: ಭಾರತ ಸೇರಿ ಇತರ 5 ದೇಶಗಳ ಕ್ರೀಡಾಳುಗಳಿಗೆ ಹೆಚ್ಚಿನ ಕೋವಿಡ್ ಟೆಸ್ಟ್
Team Udayavani, Jun 27, 2021, 8:00 PM IST
ಟೋಕಿಯೊ : ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತ ಮತ್ತು ಇತರ 5 ದೇಶಗಳ ಅತ್ಲೀಟ್‌ಗಳು ಹೆಚ್ಚಿನ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಜಪಾನ್ ಸೂಚಿಸುವ ಸಾಧ್ಯತೆ ಎಂದು ವರದಿಯೊಂದು ತಿಳಿಸಿದೆ.
ಡೆಲ್ಟಾ ವೈರಸ್ ಆಘಾತಕ್ಕೆ ಒಳಗಾಗಿರುವ ದೇಶಗಳ ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಒಂದು ವಾರ ಕಾಲ ದಿನವೂ ಪರೀಕ್ಷೆಗೆ ಒಳಪಡುವಂತೆ ನಿಯಮ ರೂಪಿಸಲು ಜಪಾನ್ ಮುಂದಾಗಿದೆ ಎಂದು ವರದಿ ತಿಳಿಸಿದೆ.
ಏಶ್ಯದ ಕ್ರೀಡಾಳುಗಳಿಗೆ ಅನ್ವಯ
ಸದ್ಯದ ನಿಯಮದ ಪ್ರಕಾರ, ಜಪಾನ್‌ಗೆ ತೆರಳುವ ಮುನ್ನ ಎಲ್ಲ ಕ್ರೀಡಾಪಟುಗಳು ನಾಲ್ಕು ದಿನಗಳ ಅವಧಿಯಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಿದೆ. ಆದರೆ ಇದೀಗ ಕೆಲವು ರಾಷ್ಟ್ರಗಳಲ್ಲಿ ಡೆಲ್ಟಾ ರೂಪಾಂತರಿ ಸೋಂಕಿನ ಪ್ರಕರಣಗಳು ಕಂಡುಬಂದಿದೆ. ಜತೆಗೆ ಜಪಾನ್‌ಗೆ ಬಂದ ಉಗಾಂಡ ಕೋಚ್ ಒಬ್ಬರಲ್ಲಿ ಈ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಪಾನ್ ಸರಕಾರ ಹೊಸ ನಿಯಮ ರೂಪಿಸಲು ಮುಂದಾಗಿದೆ.
ಇದನ್ನೂ ಓದಿ :ಮನುಷ್ಯನ ಮಲದಲ್ಲಿದೆ 50 ಸಾವಿರಕ್ಕೂ ಹೆಚ್ಚು ವೈರಸ್! ಹೊಸ ಸಂಶೋಧನೆಯಿಂದ ಬಹಿರಂಗ
ಇದು ಭಾರತ, ಮಾಲ್ಡೀವ್ಸ್, ನೇಪಾಲ, ಪಾಕಿಸ್ಥಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ಥಾನದ ಕ್ರೀಡಾಪಟುಗಳಿಗೆ ಅನ್ವಯವಾಗಲಿದೆ ಎಂದು ವರದಿ ಉಲ್ಲೇಖಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಬೆಳ್ತಂಗಡಿ ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ: ಚಾರ್ಮಾಡಿ ಘಾಟಿ, ಭೂಕುಸಿತ ಪ್ರದೇಶ ಪರಿಶೀಲನೆ
ಈಡನ್ನಲ್ಲಿ ಆರ್ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ ಸೂಪರ್ ಜೈಂಟ್ಸ್
ಸಿಎಂ ದಾವೋಸ್ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ
ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ
ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ