ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

Team Udayavani, May 27, 2020, 11:00 AM IST

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

ಉಕ್ರೇನ್‌ನ ಆಸ್ಪತ್ರೆಗಳಲ್ಲಿ ಬಾಡಿಗೆ ತಾಯಂದಿರಿಂದ ಜನಿಸಿದ ಶಿಶುಗಳು ತಮ್ಮ ತಂದೆ – ತಾಯಿಯನ್ನು ಸೇರಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಜರ್ಮನಿಯ ದಂಪತಿ ಜೂಲಿಯಾ ಹಾಗೂ ಪೀಟರ್‌ ಬಾಡಿಗೆ ತಾಯಿಯ ಮೂಲಕ ಪಡೆದ ಶಿಶುವನ್ನು ಪಡೆಯುವ ಪ್ರಯತ್ನದಲ್ಲಿ ಯಶ ಕಂಡಿದ್ದರು. ಮೇ ಮೊದಲ ವಾರದಲ್ಲಿ ಉಕ್ರೇನ್‌ನ ಬಾಡಿಗೆ ತಾಯಿಯಿಂದ ಅವರಿಗೆ ಮಗು ಜನಿಸಿತ್ತು. ಕೊನೆಗೂ ನಮ್ಮದೇ ಮಗುವನ್ನು ಹೊಂದುವ ಪ್ರಯತ್ನ ಕೈಗೂಡಿದೆ ಎಂದು ಜೂಲಿಯಾ ಖುಷಿಯಿಂದಲೇ ಹೇಳಿದರು.

ಉಕ್ರೇನ್‌ ರಾಜಧಾನಿ ಕೈವ್‌ನ ಹೊರ ವಲಯದಲ್ಲಿರುವ ವಸತಿ ಸಮುಚ್ಚಯದ ಮನೆಯೊಂದರಲ್ಲಿ ಈ ದಂಪತಿ ಈಗ ವಾಸವಿದ್ದಾರೆ. ಅವರಿಗೆ ಸಂತಾನ ಸಾಫ‌ಲ್ಯ ಕರುಣಿಸಿರುವ ಕ್ಲಿನಿಕ್‌ ಈ ವಸತಿ ಸಮುಚ್ಚಯವನ್ನು ಹೊಟೇಲ್‌ ಎಂದು ಕರೆಯುತ್ತದೆ.

ಕ್ಲಿನಿಕ್‌ಗೆ ಬರುವವರಿಗೆ ಅತಿಥಿ ಗೃಹವಾಗಿ ಈ ಮನೆಗಳು ಬಳಕೆಯಾಗುತ್ತವೆ. ಪಶ್ಚಿಮದ ದಂಪತಿಗಳೊಂದಿಗೆ 46 ಶಿಶುಗಳು ಉಕ್ರೇನ್‌ನಿಂದ ಹೊರಹೋಗಲು ಕಾಯುತ್ತಿರುವ ದೃಶ್ಯವಿದ್ದ ವೀಡಿಯೊ ಒಂದು ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ಕೋವಿಡ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್‌ ದೇಶದ ಗಡಿಗಳು ಮುಚ್ಚಿದ್ದರಿಂದಾಗಿ ಈ ನವಜಾತ ಶಿಶುಗಳು ತಮ್ಮ ಪಾಲಕರನ್ನು ಕೂಡಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡುವ ರೂಪದಲ್ಲಿತ್ತು ಈ ವೀಡಿಯೋ. ಈ ವಸತಿ ಸಮುಚ್ಚಯದಲ್ಲಿ ಚೀನ, ಸ್ಪೇನ್‌, ಸ್ವೀಡನ್‌, ಇಟಲಿ, ಜರ್ಮನಿ ಮುಂತಾದ ದೇಶಗಳ ದಂಪತಿ ಇದ್ದರು. ಜರ್ಮನಿಯಲ್ಲಿ ಬಾಡಿಗೆ ತಾಯ್ತನಕ್ಕೆ ನಿಷೇಧವಿರುವುದರಿಂದ ಈ ದಂಪತಿ ಅಸಲಿ ಹೆಸರುಗಳನ್ನು ಮರೆಮಾಚಿದ್ದಾರೆ. ಕೋವಿಡ್‌ ಹರಡುವುದಕ್ಕಿಂತ ಮುನ್ನ ಅವರು ಉಕ್ರೇನ್‌ಗೆ ಬಂದಿದ್ದರು. ಮರು ಪ್ರಯಾಣದ ವಿಮಾನದ ಟಿಕೆಟ್‌ಗಳನ್ನೂ ಖರೀದಿಸಿದ್ದರು. ಆದರೆ, ಪುತ್ರಿಗಾಗಿ ಈಗ ಎರಡು ತಿಂಗಳಿಗೂ ಹೆಚ್ಚು ಕಾಲ ಇಲ್ಲೇ ಉಳಿಯಬೇಕಾಯಿತು. ಕ್ಲಿನಿಕ್‌ನಲ್ಲಿರುವ ಸಿಬಂದಿ ಕಳುಹಿಸುವ ಫೋಟೋ ಹಾಗೂ ವೀಡಿಯೋ ಮೂಲಕವೇ ನಾವು ಮಕ್ಕಳನ್ನು ನೋಡಬೇಕಾಗಿದೆ ಎಂದಿದ್ದಾರೆ.

ತಾಯಿ ಹಾಗೂ ಮಗುವಿನ ನಡುವಿನ ಬಾಂಧವ್ಯ ವೃದ್ಧಿಸಲು ಮೊದಲ ವಾರ ಸಾಕಷ್ಟು ಮಹತ್ವಪೂರ್ಣವಾಗಿದೆ. ಈ ಸನ್ನಿವೇಶದಲ್ಲಿ ಸಾನ್ನಿಧ್ಯ ಸಾಧ್ಯವಾಗದೇ ಇರುವುದು ನೋವು ತರುತ್ತಿದೆ ಎಂದರು.

ಉಕ್ರೇನ್‌ನಲ್ಲಿ ಬಾಡಿಗೆ ತಾಯ್ತನಕ್ಕೆ ಕಾನೂನಾತ್ಮಕ ಅವಕಾಶವಿದೆ. ಅಲ್ಲಿ ಅದೊಂದು ಲಾಭದಾಯಕ ಉದ್ಯಮ. ಹತ್ತಾರು ಏಜೆನ್ಸಿಗಳೂ ಇವೆ. ಉದ್ದೇಶಿತ ತಾಯಿ-ತಂದೆಯರ ಜತೆಗೆ ಪಯಣಿಸಲು ಸಾಧ್ಯವಾಗದೆ ಎಷ್ಟು ಶಿಶುಗಳು ಕ್ಲಿನಿಕ್‌ನಲ್ಲಿ ಉಳಿದಿವೆ ಎನ್ನುವ ನಿಖರ ಅಂಕಿ-ಅಂಶ ಗೊತ್ತಾಗಿಲ್ಲ. ಕೆಲವು ಮೂಲಗಳ ಪ್ರಕಾರ, ನೂರಕ್ಕೂ ಹೆಚ್ಚು ಶಿಶುಗಳಿವೆ. ಕೆಲವು ಶಿಶುಗಳನ್ನು ಬಾಡಿಗೆ ಮನೆಗಳಲ್ಲಿಟ್ಟು. ಸಿಬಂದಿ ನೇಮಿಸಿ ನೋಡಿಕೊಳ್ಳಲಾಗುತ್ತಿದೆ. ಆದರೆ, ಅವರಿಗೆ ವೈದ್ಯಕೀಯ ತರಬೇತಿ ಇಲ್ಲ. ಕೋವಿಡ್‌ ಪರಿಣಾಮ, ಆರೋಗ್ಯ ಸಿಬಂದಿಯನ್ನೇ ನೇಮಿಸುವುದು ಏಜೆನ್ಸಿಗಳಿಗೆ ಕಷ್ಟವಾಗುತ್ತಿದೆ.

ಕೆಲವು ಏಜೆನ್ಸಿಗಳಿಗೆ ಅನುಮತಿಯೂ ಇಲ್ಲ. ಬಹುಶಃ ಅವು ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವು ತೆರಿಗೆಯನ್ನೂ ಪಾವತಿಸುತ್ತಿಲ್ಲ. ಶಿಶುಗಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಏಕರೂಪತೆಯೂ ಇಲ್ಲ. ಹೀಗಾಗಿ, ಏಜೆನ್ಸಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ದಂಪತಿ ಗಮನ ಹರಿಸುವುದು ಸೂಕ್ತ ಎಂದು ಕೈವ್‌ನ ಮೆಡಿಕಲ್‌ ಆ್ಯಂಡ್‌ ರಿಪ್ರೊಡಕ್ಟಿವ್‌ ಲಾ ಸೆಂಟರ್‌ನ ನಿರ್ದೇಶಕ ಸರ್ಗಿ ಅಂಟೋನೋವ್‌ ಎಚ್ಚರಿಸಿದ್ದಾರೆ.

ಶಿಶುಗಳೊಂದಿಗೆ ಈ ದಂಪತಿ ಸ್ವದೇಶಕ್ಕೆ ಮರಳಬೇಕಿದ್ದರೆ ರಾಯಭಾರ ಕಚೇರಿಗೆ ಸೂಕ್ತ ದಾಖಲೆಗಳನ್ನು ಒದಗಿಸಿಯೇ ಅನುಮತಿ ಪಡೆಯಬೇಕಾಗುತ್ತದೆ. ಬಾಧಿತ ಕುಟುಂಬಗಳಿಗೆ ನೆರವಾಗಲು ಕೈವ್‌ ಸಿದ್ಧವಿದೆ. ಆದರೆ, ಸೋಂಕು ಹರಡುವ ಅಪಾಯದ ಹಿನ್ನೆಲೆಯಲ್ಲಿ ಜರ್ಮನಿ ಇನ್ನೂ ಪರಾಮರ್ಶೆ ನಡೆಸುತ್ತಿದೆ ಎಂದು ಉಕ್ರೇನ್‌ ಆಡಳಿತ ತಿಳಿಸಿದೆ.

ಉಕ್ರೇನ್‌ನಲ್ಲಿ ಮಗುವಿನ ಜನನ ಪ್ರಮಾಣಪತ್ರದಲ್ಲಿ ಬಾಡಿಗೆ ತಾಯಿಯ ಹೆಸರನ್ನೂ ನಮೂದಿಸಲಾಗುತ್ತದೆ. ಜರ್ಮನಿ ಇದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಜನ್ಮದಾತೆಯೇ ಮಗುವಿನ ತಾಯಿ ಎನ್ನುತ್ತದೆ ಜರ್ಮನ್‌ ಕಾನೂನು. ಈ ನೆಲೆಯಲ್ಲಿ ಬಾಡಿಗೆ ತಾಯಿಗೇ ಮಗುವಿನೊಂದಿಗೆ ಜರ್ಮನಿಗೆ ಪಯಣಿಸಲು ಅವಕಾಶ ಸಿಗುತ್ತದೆ. ಇದೂ ಶಿಶುಗಳೊಂದಿಗೆ ಅವುಗಳ ಪಾಲಕರ ಪ್ರಯಾಣ ವಿಳಂಬವಾಗುವುದಕ್ಕೆ ಕಾರಣವೆನಿಸಿದೆ.

ತಂದೆಯ ವಿಚಾರದಲ್ಲಿ ಪುರುಷನ ವೀರ್ಯಾಣುಗಳನ್ನು ಕೃತಕವಾಗಿ ಸಂತಾನ ಸಾಫ‌ಲ್ಯಕ್ಕೆ ಬಳಸಿದರೆ ಆಗಲೂ ಆತನೇ ಮಗುವಿನ ತಂದೆ ಎಂದು ಗುರುತಿಸಿಕೊಳ್ಳುತ್ತಾನೆ. ಮಗುವಿಗೆ ಜರ್ಮನ್‌ ಪೌರತ್ವವನ್ನೂ ಕೊಡಲಾಗುತ್ತದೆ. ಆಗ ಉದ್ದೇಶಿತ ತಾಯಿ ಮಗುವನ್ನು ಜರ್ಮನಿಯ ತನ್ನ ಮನೆಯಲ್ಲಿ ದತ್ತು ಪಡೆಯಬೇಕಾಗುತ್ತದೆ.

ಶಿಶುಗಳ ವೀಡಿಯೋ ಒಂದು ರಾಜಕೀಯ ಚರ್ಚೆಗೂ ನಾಂದಿ ಹಾಡಿದೆ. 2019ರಲ್ಲಿ ಉಕ್ರೇನ್‌ನ ಬಾಡಿಗೆ ತಾಯಿಯಿಂದ 1,500 ದಂಪತಿ ಮಕ್ಕಳನ್ನು ಹೊಂದಿದ್ದಾರೆ. ಉಕ್ರೇನ್‌ನಲ್ಲೂ ಬಾಡಿಗೆ ತಾಯ್ತನವನ್ನು ನಿಷೇಧಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಆದರೆ, ಬಾಡಿಗೆ ತಾಯ್ತನಕ್ಕೆ ಹೊರದೇಶಗಳಿಂದ ಭಾರೀ ಬೇಡಿಕೆ ಇರುವುದರಿಂದ ಇಲ್ಲಿ ನಿಷೇಧಿಸಿದರೆ ಅಕ್ರಮಗಳಿಗೆ ಅವಕಾಶ ನೀಡಿದಂತಾಗಬಹುದು. ನಿಷೇಧಿಸಲು ಸಾಧ್ಯವಿಲ್ಲದಿದ್ದರೆ ಸೂಕ್ತ ಕಾನೂನು ರೂಪಿಸುವಂತೆ ಇನ್ನೂ ಕೆಲವರು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.