ಇಸಾಮುದ್ರ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಶೀಘ್ರ ಬೇಧಿಸಲು ಶಾಸಕ ಚಂದ್ರಪ್ಪ ಮನವಿ

Team Udayavani, Jul 25, 2021, 7:29 PM IST

ಇಸಾಮುದ್ರ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಶೀಘ್ರ ಬೇಧಿಸಲು ಶಾಸಕ ಚಂದ್ರಪ್ಪ ಮನವಿ

ಸಿರಿಗೆರೆ ; ಭರಮಸಾಗರ ಹತ್ತಿರದ ಇಸಾಮುದ್ರ ಗ್ರಾಮದಲ್ಲಿ ಶುಕ್ರವಾರ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಅಮಾನುಷವಾಗಿ ಕೊಲೆ ಮಾಡಿದ ನಂತರ ಮಡುಗಟ್ಟಿದ ಊರಿಗೆ ಶಾಸಕ ಎಂ. ಚಂದ್ರಪ್ಪ ಭೇಟಿ ನೀಡಿದ ವೇಳೆ ಕುಟುಂಬ ಸದಸ್ಯರ ದುಃಖ ಕಟ್ಟೆಯೊಡೆದು ಕಣ್ಣೀರಧಾರೆ ಹರಿದ ಪ್ರಸಂಗ ನಡೆಯಿತು.

ದುಃಖತಪ್ತರಿಗೆ ಸಾಂತ್ವನದ ಮಾತು ಹೇಳಲು ಬಂದ ಶಾಸಕರು ಕುಟುಂಬಸ್ಥರ ರೋಧನದಿಂದ ಮರುಗಿ ಅವರೂ ಸಂಕಟದಲ್ಲಿ ಪಾಲುಗೊಳ್ಳುವಂತಾಯಿತು. ಕೊಲೆಯಾದ ಬಾಲಕಿಯ ಸಹೋದರಿಯ ರೋಧನ ಆಕಾಶ ಮುಟ್ಟುವಂತಿತ್ತು. ಶಾಸಕ ಎಂ. ಚಂದ್ರಪ್ಪ ಅವರನ್ನೆಲ್ಲಾ ಸಂತೈಸಿ ಧೈರ್ಯದಿಂದಿರಲು ತಿಳಿಹೇಳಿದರು.

ಇದುವರೆಗೆ ನಗರ ಪ್ರದೇಶಗಳಲ್ಲಿಯಷ್ಟೆ ನಡೆಯುತ್ತಿದ್ದ ಇಂತಹ ಪೈಶಾಚಿಕ ಕೃತ್ಯಗಳು ಗ್ರಾಮಾಂತರ ಪ್ರದೇಶಗಳಿಗೆ ಹಬ್ಬಿರುವುದು ವ್ಯಸನದ ಸಂಗತಿ. ದುಷ್ಟರನ್ನು ಹಿಮ್ಮೆಟ್ಟಿಸಲು ನಮ್ಮ ಪೊಲೀಸ್‌ ಇಲಾಖೆ ಸದೃಢವಾಗಿದ್ದು ಅಂತಹ ಕೆಲಸವನ್ನು ಕೂಡಲೆ ಮಾಡಲಾಗುವುದು. ಇಸಾಮುದ್ರ ಗ್ರಾಮದಲ್ಲಿ ನಡೆದಿರುವ ಈ ಕೃತ್ಯ ಹಳ್ಳಿಗಾಡಿನ ಜನರ ನಿದ್ದೆಗೆಡಿಸಿದೆ. ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಅವಳನ್ನು ನಿರ್ದಯವಾಗಿ ಕೊಲೆ ಮಾಡಿರುವ ದುಷ್ಟರನ್ನು ಪತ್ತೆ ಮಾಡಿ ಕೂಡಲೆ ಬಂಧಿಸಬೇಕು ಎಂದು ಈ ಸಂದರ್ಭದಲ್ಲಿ ಶಾಸಕ ಎಂ. ಚಂದ್ರಪ್ಪ ಹೇಳಿದರು.

ಇದನ್ನೂ ಓದಿ :ವ್ಯಕ್ತಿ ನಾಪತ್ತೆಯಾಗಿ ಹನ್ನೆರಡು ದಿನವಾದರೂ ಪತ್ತೆಯಾಗದ ದೇಹ : ಕಣ್ಣೀರಿನಲ್ಲಿ ಕುಟುಂಬಸ್ಥರು

ಸಂತ್ರಸ್ತ ಕುಟುಂಬಕ್ಕೆ ಸಾಧ್ಯವಾದ ಎಲ್ಲಾ ನೆರವನ್ನು ಸರ್ಕಾರದಿಂದ ದೊರಕಿಸಿಕೊಡಲು ಯತ್ನಿಸುವುದಾಗಿ ತಿಳಿಸಿದ ಶಾಸಕ ವೈಯುಕ್ತಿಕ ನೆರವಾಗಿ 50 ಸಾವಿರ ರೂಗಳನ್ನು ಕುಟುಂಬಕ್ಕೆ ನೀಡಿದರು.

ದುಷ್ಟರನ್ನು ಬಂಧಿಸಲು ಪೊಲೀಸ್‌ ಇಲಾಖೆ ಈಗಾಗಲೇ ವಿಶೇಷ ತನಿಖಾ ದಳವನ್ನು ನೇಮಿಸಿದ್ದು ಗ್ರಾಮದಲ್ಲಿ ಪೊಲೀಸರ ಗಸ್ತನ್ನು ಸಹ ಹೆಚ್ಚಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಒಂದೆರಡು ದಿನಗಳಲ್ಲಿ ಪತ್ತೆ ಹಚ್ಚುವ ವಿಶ್ವಾಸ ಇಲಾಖೆಗೆ ಇದೆ ಎಂದು ವಿಶೇಷ ತನಿಖಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಡಲ ಅಧ್ಯಕ್ಷ ಶೈಲೇಶ್‌ ಕುಮಾರ್‌, ಜಿಪಂ ಸದಸ್ಯ ಡಿ.ವಿ. ಶರಣಪ್ಪ, ಕೋಗುಂಡೆ ಎಚ್.ಎಂ. ಮಂಜುನಾಥ್‌, ತಾಪಂ ಸದಸ್ಯ ಕಲ್ಲೇಶ್‌, ಬಿಜೆಪಿ ಮುಖಂಡ ಸಾಮಿಲ್‌ ಶಿವಣ್ಣ, ಸಿರಿಗೆರೆ ಗ್ರಾಪಂ ಅಧ್ಯಕ್ಷ ಕೆ.ಬಿ. ಮೋಹನ್‌, ವೃತ್ತ ನಿರೀಕ್ಷಕ ಮಧು, ಹೊಳಲ್ಕೆರೆ ವೃತ್ತ ನಿರೀಕ್ಷಕ ರವೀಶ್‌, ಪೊಲೀಸ್‌ ವಿಶೇಷ ದಳದ ತನಿಖಾಧಿಕಾರಿಗಳು ಮುಂತಾದವರು ಜೊತೆಗಿದ್ದರು.

ಟಾಪ್ ನ್ಯೂಸ್

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಶೀಘ್ರವೇ ರಾಜ್ಯಾದ್ಯಂತ ಹಾಲಿಗೆ ಏಕರೂಪ ದರ

ಶೀಘ್ರವೇ ರಾಜ್ಯಾದ್ಯಂತ ಹಾಲಿಗೆ ಏಕರೂಪ ದರ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

7

100 ಕೋಟಿ ಜನರಿಗೆ ಲಭಿಸಿದೆ ಲಸಿಕೆ ಲಾಭ

ಯುವಕನ ಎದೆಯಲ್ಲಿ 13.85 ಕೆ.ಜಿ. ತೂಕದ ಗಡ್ಡೆ

ಯುವಕನ ಎದೆಯಲ್ಲಿ 13.85 ಕೆ.ಜಿ. ತೂಕದ ಗಡ್ಡೆ

6

ಆಸ್ಪತ್ರೆಗೆ 50ಲಕ್ಷ ಮೌಲ್ಯದ ಉಪಕರಣ ವಿತರಣೆ

Buildings that are potentially life-threatening should be cleared by BBMP itself

ಜೀವಕ್ಕೆ ಹಾನಿ ಆಗುವಂಥ ಕಟ್ಟಡಗಳಿದ್ರೆ ಬಿಬಿಎಂಪಿಯಿಂದಲೇ ತೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.