ತಾವೇ ಕ್ಲಿಕ್ಕಿಸಿದ ಕಾಡು ಪ್ರಾಣಿಗಳ ಫೋಟೋ ಶೇರ್ ಮಾಡಿದ ದರ್ಶನ್..!
ವಿಶ್ವ ವನ್ಯಜೀವಿಗಳ ದಿನದ ಬಗ್ಗೆ ದರ್ಶನ್ ಟ್ವೀಟ್
Team Udayavani, Mar 3, 2021, 4:57 PM IST
ಬೆಂಗಳೂರು : ಇಂದು(ಮಾ.3) ವಿಶ್ವ ವನ್ಯಜೀವಿಗಳ ದಿನವಾಗಿದ್ದು, ಎಲ್ಲರೂ ಜೀವ ವೈವಿಧ್ಯತೆ ಮತ್ತು ಕಾಡು ಪ್ರಾಣಿಗಳ ರಕ್ಷಣೆ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಕೂಡ ಪ್ರಾಣಿಗಳನ್ನು ರಕ್ಷಣೆ ಮಾಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ತಾವೇ ಕ್ಲಿಕ್ಕಿಸಿದ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ನಟ, ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ. ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ನಿಮಗೆ ಕಾಳಜಿಯನ್ನು ತೋರಿಸುತ್ತದೆ, ಅಪರಿಚಿತರಾಗಬೇಡಿ! ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗವಾಗಿದೆ! ವನ್ಯಜೀವಿಗಳಿಗಾಗಿ ನಿಲ್ಲುವ ಸಮಯ. ನಿಮ್ಮ ದಾಸ ದರ್ಶನ್ ಎಂದು ಬರೆದುಕೊಂಡಿದ್ದಾರೆ.
ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ.
ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ನಿಮಗೆ ಕಾಳಜಿಯನ್ನು ತೋರಿಸುತ್ತದೆ, ಅಪರಿಚಿತರಾಗಬೇಡಿ!
ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗವಾಗಿದೆ!
ವನ್ಯಜೀವಿಗಳಿಗಾಗಿ ನಿಲ್ಲುವ ಸಮಯ.
ನಿಮ್ಮ ದಾಸ ದರ್ಶನ್@aranya_kfd #WorldWildlifeDay2021 pic.twitter.com/TK0cqRvIuR— Darshan Thoogudeepa (@dasadarshan) March 3, 2021
ಇನ್ನು ನಟ ದರ್ಶನ್ ಪ್ರಾಣಿ ಪ್ರಿಯ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ತಮ್ಮ ಫಾರ್ಮ್ ಹೌಸ್ ನಲ್ಲಿ ಹತ್ತಾರು ಬಗೆಯ ಪ್ರಾಣಿಗಳನ್ನು ಸಾಕಿದ್ದಾರೆ. ಅಲ್ಲದೆ ಅದೆಷ್ಟೋ ಕುದುರೆಗಳನ್ನು ಸಾಕಿದ್ದಾರೆ. ವನ್ಯ ಜೀವಿಗಳ ದಿನವಾದ್ದರಿಂದ ಇಂದು ಎಲ್ಲರಿಗೂ ಪ್ರಾಣಿಗಳನ್ನು ರಕ್ಷಣೆ ಮಾಡಿ ಮತ್ತು ಪ್ರೀತಿಸಿ ಎಂದು ಕೇಳಿ ಕೊಂಡಿದ್ದಾರೆ. ದರ್ಶನ್ ಆಗಾಗ ಕಾಡುಗಳಿಗೆ ಸಫಾರಿ ಹೋಗುತ್ತಿದ್ದು, ಅಲ್ಲಿನ ಸುಂದರ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡು ಬರುತ್ತಾರೆ.