ರಾಜ್ಯದಲ್ಲಿ ಮುಂದುವರಿದ ಪ್ರವಾಹ ಹಾನಿ ಸಮೀಕ್ಷೆ: ಡಿಸಿಎಂ ಕಾರಜೋಳ


Team Udayavani, Aug 16, 2020, 5:08 PM IST

ಜಿಲ್ಲೆಯಲ್ಲಿ ಮುಂದುವರಿದ ಪ್ರವಾಹ ಹಾನಿ ಸಮೀಕ್ಷೆ: ಡಿಸಿಎಂ ಕಾರಜೋಳ

ಕಲಬುರಗಿ: ರಾಜ್ಯದಲ್ಲಿ ಪ್ರಸಕ್ತವಾಗಿ ಎದುರಾಗಿರುವ ಪ್ರವಾಹದಿಂದ ಹಾನಿಯಾಗಿರುವ ರಸ್ತೆ, ಸೇತುವೆ ಹಾಗೂ ಇಲಾಖಾ ಕಟ್ಟಡಗಳ ಸಮೀಕ್ಷೆ ಮುಂದುವರೆದಿದೆ ಎಂದು ಲೋಕೋಪಯೋಗಿ, ಸಮಾಜ ಕಲ್ಯಾಣ ಸಚಿವ, ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಸೇಡಂ ಪಟ್ಟಣದಲ್ಲಿಂದು 150 ಕೋ ರೂ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರು ಮಳೆಯಿಂದ ಲೋಕೋಪಯೋಗಿ ಇಲಾಖೆಯ 2700 ಕೋ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಪ್ರವಾಹದಿಂದ 8000 ಕೋ ರೂ ಹಾನಿಯಾಗಿತ್ತು. ಆದರೆ ಕೊರೊನಾ ಆರ್ಥಿಕ ಸಂಕಷ್ಟ ನಡುವೆ ಮುಖ್ಯ ಮಂತ್ರಿ ಗಳು ಸಮಾಜ ಹಾಗೂ ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಎಂದರು.

ಕೋವಿಡ್ ‌ಮಧ್ಯೆಯೂ ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆ ನಿರ್ಮಾಣ: ಕೋವಿಡ್ ಹಾವಳಿ ಮಧ್ಯೆಯೂ ರಾಜ್ಯದಾದ್ಯಂತ ಸಮಾಜ ಕಲ್ಯಾಣ ‌ಇಲಾಖೆಯಿಂದ ವಸತಿ ಶಾಲೆಗಳ ನಿರ್ಮಾಣ ಹಾಗೂ ವಸತಿನಿಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ‌ ಎಂದರು.

ರಾಜ್ಯದಾದ್ಯಂತ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 47 ವಸತಿ ಶಾಲೆಗಳ ಕಟ್ಟಡ ಪೂರ್ಣಗೊಂಡಿದೆ. 181 ವಸತಿಶಾಲೆಗಳ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಇದರಿಂದಾಗಿ ಬಡವರ ‌ಮಕ್ಕಳಿಗೂ ಶಿಕ್ಷಣ ‌ಸಿಗುತ್ತಿದ್ದು, ಇಲಾಖೆಯ ವಸತಿ ಶಾಲೆಗಳಲ್ಲಿ ಓದಿದ ಮಕ್ಕಳ ‌ಫಲಿತಾಂಶ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ರಾಜ್ಯದ ಸರಾಸರಿಗಿಂತಲೂ ಉತ್ತಮವಾಗಿದೆ ಎಂದರು.

ಮಾಜಿ ಸಂಸದ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಸಂಸದ ಡಾ. ಉಮೇಶ ಜಾಧವ್, ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ಮುಂತಾದವರಿದ್ದರು.

ಟಾಪ್ ನ್ಯೂಸ್

ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ: ಶೋಭಾ ಕರಂದ್ಲಾಜೆ

ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ: ಶೋಭಾ ಕರಂದ್ಲಾಜೆ

ತಿರುಗೇಟು ನೀಡುತ್ತಾ ಟೀಂ ಇಂಡಿಯಾ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ತಿರುಗೇಟು ನೀಡುತ್ತಾ ಟೀಂ ಇಂಡಿಯಾ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

kyasanur forest disease

ಕೋವಿಡ್ ನಡುವೆ ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ವೈರಸ್ ಆತಂಕ!

1-sdds

ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆ:’ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ

ಕಾರಜೋಳ

ತಮಿಳುನಾಡಿಗೆ ಹೊಗೇನಕಲ್‌ ನಲ್ಲಿ ಯೋಜನೆ ಮಾಡಲು ಬಿಡುವುದಿಲ್ಲ: ಕಾರಜೋಳ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

SUNIL-KUMAR

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sdds

ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆ:’ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ

ಕಾರಜೋಳ

ತಮಿಳುನಾಡಿಗೆ ಹೊಗೇನಕಲ್‌ ನಲ್ಲಿ ಯೋಜನೆ ಮಾಡಲು ಬಿಡುವುದಿಲ್ಲ: ಕಾರಜೋಳ

SUNIL-KUMAR

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

ಉಡುಪಿ; OLXನಲ್ಲಿ ಕಿವಿಯೋಲೆ ಮಾರಲು ಹೋಗಿ 93 ಸಾವಿರ ರೂ. ಕಳೆದುಕೊಂಡ ಯುವತಿ

ಉಡುಪಿ; OLXನಲ್ಲಿ ಕಿವಿಯೋಲೆ ಮಾರಲು ಹೋಗಿ 93 ಸಾವಿರ ರೂ. ಕಳೆದುಕೊಂಡ ಯುವತಿ

8CM1

ಸಿದ್ಧಗಂಗಾ ಮಠದಲ್ಲಿ ದಾಸೋಹ ದಿನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

MUST WATCH

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

ಹೊಸ ಸೇರ್ಪಡೆ

ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ: ಶೋಭಾ ಕರಂದ್ಲಾಜೆ

ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ: ಶೋಭಾ ಕರಂದ್ಲಾಜೆ

1-wqqwe

ಬೈಕ್‌ ಟ್ಯಾಕಿಗೆ ಕಡಿವಾಣ ಹಾಕಲು ಆಟೋ ಚಾಲಕರ ಆಗ್ರಹ

arrested

ವಂಚನೆ: ಆಯೇಷಾ ಅಮಿನಾ ಟ್ರಸ್ಟ್‌ನ ಟ್ರಸ್ಟಿ ಸೆರೆ

rape

ಮ್ಯಾಟ್ರಿಮೋನಿಯಲ್‌ ಪರಿಚಯ: ಯುವತಿ ಖಾಸಗಿ ಫೋಟೋ ಸೆರೆಹಿಡಿದು ಬ್ಲ್ಯಾಕ್‌ಮೇಲ್

16chilly-crop

ಮೆಣಸಿನಕಾಯಿ ಬೆಳೆಗೆ ನುಶಿ ರೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.