ಊಟದ ತಟ್ಟೆ ವಿಚಾರ: ಮದುವೆ ಸಮಾರಂಭದಲ್ಲೇ ವ್ಯಕ್ತಿಯ ಕೊಲೆಗೈದ ಮ್ಯೂಸಿಕ್ ಬ್ಯಾಂಡ್ ಸಿಬ್ಬಂದಿ
Team Udayavani, Feb 9, 2023, 4:12 PM IST
ನವದೆಹಲಿ: ಮದುವೆ ಸಮಾರಂಭದಲ್ಲಿ ಕಳೆ ಹೆಚ್ಚಿಸುವುದೇ ಮ್ಯೂಸಿಕ್ ಬ್ಯಾಂಡ್ ಅದು ಇರದೇ ಇದ್ದರೆ ಮದುವೆ ಸಮಾರಂಭಕ್ಕೆ ಕಳೆಯೇ ಇಲ್ಲದಂತೆ ಆದರೆ ಇದೆ ಮ್ಯೂಸಿಕ್ ಬ್ಯಾಂಡ್ ಸದಸ್ಯರಿಂದ ಮದುವೆ ಸಮಾರಂಭವೊಂದರಲ್ಲಿ ಊಟದ ತಟ್ಟೆ ವಿಚಾರವಾಗಿ ವ್ಯಕ್ತಿಯನ್ನು ಕೊಲೆಗೈದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಹೌದು ದೆಹಲಿಯ ಪ್ರಶಾಂತ್ ವಿಹಾರ್ ನಲ್ಲಿ ನಡೆದ ಮದುವೆ ಸಮಾರಂಭಕ್ಕೆ ಬಂದಿದ್ದ ಮ್ಯೂಸಿಕ್ ಬ್ಯಾಂಡ್ ಸದಸ್ಯರು ಅಲ್ಲಿರುವ ಸಿಬ್ಬಂದಿಯ ಬಳಿ ಊಟಕ್ಕೆ ತಟ್ಟೆ ಕೊಡುವಂತೆ ಕೇಳಿದ್ದಾರೆ ಆದರೆ ಸಿಬ್ಬಂದಿ ತಟ್ಟೆ ಕೊಡಲು ತಡಮಾಡಿದ ಎಂದು ಕೋಪಗೊಂಡ ಮ್ಯೂಸಿಕ್ ಬ್ಯಾಂಡ್ ಸಿಬ್ಬಂದಿ ತಟ್ಟೆ ಕೊಡಲು ತಡಮಾಡಿದ ವಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಅಲ್ಲದೆ ಮ್ಯೂಸಿಕ್ ಬ್ಯಾಂಡ್ ಸದಸ್ಯರು ತಮ್ಮ ಕೈಗೆ ಸಿಕ್ಕ ಸಿಕ್ಕ ವಸ್ತುಗಳಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಘಟನೆ ಕುರಿತು ದೆಹಲಿ ಠಾಣೆಯಲ್ಲಿ ಮ್ಯೂಸಿಕ್ ಬ್ಯಾಂಡ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಅಲ್ಲದೆ ದೆಹಲಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ, ಅವರ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ: ಒಂದು ವೇಳೆ ಕಾಂಗ್ರೆಸ್, ಸಿಪಿಐಎಂ ಅಧಿಕಾರದಲ್ಲಿದ್ದಿದ್ದರೆ…ತ್ರಿಪುರಾದಲ್ಲಿ ಸಿಎಂ ಯೋಗಿ …
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬ್ಯಾಂಕ್ ಖಾತೆ ಆಧಾರಿತ UPI ಪಾವತಿಗಳಿಗೆ ಯಾವುದೇ ಶುಲ್ಕವಿಲ್ಲ: NPCI ಸ್ಪಷ್ಟನೆ
ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ
ಗೋವಾ ವಿಧಾನಸಭೆಯಲ್ಲಿ ಮಹಾದಾಯಿ ವಿಷಯದ ಕುರಿತು ಭಾರಿ ಚರ್ಚೆ
29 ವರ್ಷಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಆಂಜನೇಯ ವಿಗ್ರಹ ಬಿಡುಗಡೆ: ಅದ್ಧೂರಿ ಮೆರವಣಿಗೆ
ಹೈಕೋರ್ಟ್ ತಡೆ; NCP ಸಂಸದ ಫೈಜಲ್ ಅನರ್ಹತೆ ರದ್ದುಪಡಿಸಿದ ಲೋಕಸಭೆ ಸೆಕ್ರೆಟರಿಯೇಟ್