Desi Swara: ಜನಪ್ರಿಯ ಪೇಯ “ಕಾಫಿ’ಯ ವೈವಿಧ್ಯತೆ

ವಿಶ್ವದಲ್ಲೇ ಫಿಲ್ಟರ್‌ ಕಾಫಿಗೆ ಎರಡನೇ ಸ್ಥಾನ

Team Udayavani, Jun 8, 2024, 12:30 PM IST

Desi Swara: ಜನಪ್ರಿಯ ಪೇಯ “ಕಾಫಿ’ಯ ವೈವಿಧ್ಯತೆ

ದಕ್ಷಿಣ ಭಾರತದವರಿಗೆ ಕಾಫಿ ಅಂದರೆ ಬಹಳ ಪ್ರಾಣ. ಕೆಲವರ ದಿನ ಶುರುವಾಗುವುದೇ ದಿನದ ಮೊದಲ ಕಾಫಿ ಕುಡಿದ ಬಳಿಕವೇ. ಅದರಲ್ಲೂ ಫಿಲ್ಟರ್‌ ಕಾಫಿಯ ರುಚಿಗೆ ಮಾರು ಹೋಗದವರು ಇಲ್ಲವೇ ಇಲ್ಲ ಎಂದು ಹೇಳಬಹುದು. ಕೆಲವರಿಗೆ “ಕಾಫಿ’ ಎಂಬ ಹೆಸರು ಕೇಳಿದರೆ ಮನಸ್ಸಿಗೆ ತಾಜಾತನ ನೀಡುತ್ತದೆ. ಇತ್ತೀಚಿಗೆ ಬಿಡುಗಡೆಯಾದ ಟೇಸ್ಟ್‌ ಅಟ್ಲಾಸ್‌ ಅವರ ವರದಿಯ ಪ್ರಕಾರ ವಿಶ್ವದಲ್ಲೇ ಭಾರತದ ಫಿಲ್ಟರ್‌ ಕಾಫಿಗೆ 2ನೇ ಸ್ಥಾನ ಇದೆಯಂತೆ. ಈ ಫಿಲ್ಟರ್‌ ಕಾಫಿಯನ್ನು ಕರ್ನಾಟಕದ ಜನರು ಮಾತ್ರವಲ್ಲ, ತಮಿಳುನಾಡು, ಕೇರಳ ಮತ್ತು ದಕ್ಷಿಣ ಆಂಧ್ರದ ಕೆಲವು ಊರುಗಳಲ್ಲಿ ಬಹಳಷ್ಟು ಜನರು ಪ್ರತೀ ಮನೆಯಲ್ಲಿ ತಯಾರಿಸಿ ಕುಡಿಯುತ್ತಾರೆ. ಹೊಟೇಲ್‌ಗ‌ಳಲ್ಲಿಯೂ ಸಹ ಇನಸ್ಟಂಟ್‌ ಕಾಫಿಗಳಾದ ಬ್ರೂ ಮತ್ತು ನೆಸ್‌ ಕೆಫೆಗಿಂತ ಫಿಲ್ಟರ್‌ ಕಾಫಿಯನ್ನು ಜನ ಇಷ್ಟ ಪಟ್ಟು ಕುಡಿಯುತ್ತಾರೆ. ಇತ್ತೀಚೆಗೆ ಕೇವಲ ಕಾಫಿಗಾಗಿಯೇ ಕಾಫಿ ಶಾಪ್‌ಗ್ಳು ಎಗ್ಗಿಲ್ಲದೆ ತಲೆಯೆತ್ತಿವೆ. ವಿಧವಿಧವಾದ ಕಾಫಿಗಳು ಇಲ್ಲಿ ದೊರೆಯುತ್ತವೆ.

ಕಾಫಿ ಪ್ರಿಯರು ವರ್ಣಿಸುವ ಪರಿ ಕೇಳಿದರೆ, ಕಾಫಿ ಕುಡಿಯದವರು ಸಹ ಒಮ್ಮೆ ಕುಡಿಯಬೇಕು ಎಂದೆನೆಸುತ್ತದೆ. ಕಣ್ಣು ಮುಚ್ಚಿ
ಸುದೀರ್ಘ‌ವಾಗಿ ಉಸಿರೆಳೆದುಕೊಂಡು ಬಿಸಿಬಿಸಿ ಕಾಫಿಯನ್ನು ಸ್ವಲ್ಪ ಸ್ವಲ್ಪವೇ ಹೀರುತ್ತ, ಬಾಯಿಯೊಳಗಿನ ಅಂಗಾಗವೆಲ್ಲವಕ್ಕೂ
ಮಜ್ಜನ ಮಾಡಿಸಿ, ಅಂದರೆ, ನಾಲಿಗೆ, ದವಡೆ ಹೀಗೆ ಎಲ್ಲ ಕಡೆಯೂ ಕಾಫಿಯನ್ನು ಒಮ್ಮೆ ಟಚ್‌ ಮಾಡಿ, ಅವಕ್ಕೂ ರುಚಿ ತೋರಿಸಿ,
ಬಿಸಿ ಕಳೆದು ಬೆಚ್ಚಗಾದ ಮೇಲೆ ಗಂಟಲಿನಾಳಕ್ಕೆ ಮೃದುವಾಗಿ ಕಳಿಸಿಕೊಟ್ಟರೆ ಅದು ಕೊಡುವ ಕಿಕ್ಕಿಗೆ ಕಣ್ಣು ಮುಚ್ಚಿದಾಗ, ಆಹಾ!! ಇದೇ ಸ್ವರ್ಗ ಅಂತ ಅನಿಸುತ್ತದೆ.

ಮೈಯಲ್ಲಿ ಹೊಸ ಚೈತನ್ಯ ಹುಟ್ಟಿ, ಕೆಲಸಕ್ಕೆ ತೊಡಗುತ್ತಾರಲ್ಲ, ಅವರ ಹುರುಪು ನೋಡಬೇಕು ಕಣ್ರೀ. ಕೆಲಸ ಮಾಡಿ ಸುಸ್ತಾದಾಗ, ಆಗೊಮ್ಮೆ ಈಗೊಮ್ಮೆ ಕಾಫಿ ಗಂಟಲಿಗೆ ಬಿಳದೇ ಇದ್ದರೆ, ಏನೋ ಕಳೆದು ಕೊಂಡತಂಹ ಭಾವ ಈ ಕಾಫಿ ಪ್ರಿಯರಿಗೆ ಆಗುತ್ತದೆ.

ಭಾರತಕ್ಕೆ ಕಾಫಿಯ ರುಚಿ ನೀಡಿದ್ದು ಸೂಫಿ ಸಂತ:
ಭಾರತ ದೇಶಕ್ಕೆ ಕಾಫಿಯನ್ನು ಪರಿಚಯಿಸಿದ್ದು ಬಾಬಾ ಬುಡನ್‌ ಎನ್ನುವ ಸೂಫಿ ಸಂತ ಎಂದು ಹೇಳಲಾಗುತ್ತಿದೆ. ಬಾಬಾ ಬುಡನ್‌ ಎಂದೇ ಪ್ರಖ್ಯಾತರಾಗಿದ್ದ ಸೂಫಿ ಸಂತ ಹಜ್ರತ್‌ ಶಾ ಜನಾಬ್‌ ಅಲ್ಲಾಹ್‌ ಮಹಗತಾಬಿ, ಚಿಕ್ಕಮಗಳೂರಿನ ಚಂದ್ರಗಿರಿ ಬೆಟ್ಟದಲ್ಲಿರುವ ಕೆಲವು ಗುಹೆಗಳಲ್ಲಿ ವಾಸವಾಗಿದ್ದರಂತೆ, ಅವರು ಮೆಕ್ಕಾ ಯಾತ್ರೆಗೆ ತೆರಳಿ ಹಿಂದಿರುಗಿದ್ದರು, ಅಲ್ಲಿರುವ ಸಮಯದಲ್ಲಿ, ಕಾಫಿಯ ರುಚಿಗೆ ಮಾರು ಹೋಗಿದ್ದರು. ಚಿಕ್ಕಮಗಳೂರಿನ ಹಸುರು ಹೊದ್ದ ಗಿರಿ ಶ್ರೇಣೀಯ ಪರ್ವತದ ತಪ್ಪಲಿನಲ್ಲಿ ಈ ಗಿಡಗಳನ್ನು ಯಾಕೆ ಬೆಳೆಸಬಾರದು ಎನ್ನುವ ಆಲೋಚನೆ ಅವರಿಗೆ ಬಂತು. ಮಲೆನಾಡಿನ ಉತ್ತಮ ಹವಾಗುಣದಲ್ಲಿ ಈ ಬೀಜಗಳು ಇನ್ನಷ್ಟು ಚೆನ್ನಾಗಿ ಫಲಕೊಡಬಲ್ಲವು ಎಂದು ಆಲೋಚಿಸಿದರು.

ಆದರೆ ಅಲ್ಲಿಂದ ಕಾಫಿ ಬೀಜ ಅಥವ ಸಸಿಗಳನ್ನು ರಫ್ತು ಮಾಡುವುದು ನಿಷಿದ್ಧವಾಗಿತ್ತು. ಯೆಮನ್‌ನ ಬಂದರಿನಲ್ಲಿ ಅತೀಯಾದ ತಪಾಸಣೆ ಜರುಗುತಿತ್ತಂತೆ, ಮರಳಿ ಬರುವಾಗ ಏಳು ಕಾಫಿ ಬೀಜಗಳನ್ನ ಭಾರತಕ್ಕೆ ತರಲು ಬಹಳ ಶ್ರಮ ಪಡಬೇಕಾಯಿತು. ಕಷ್ಟಪಟ್ಟು ಏಳು ಬೀಜಗಳನ್ನು ತಂದು ಚಂದ್ರಗಿರಿಯಲ್ಲಿನ ತೋಟಗಳಲ್ಲಿ ಬೆಳೆಸಿದರಂತೆ. ಮಲೆನಾಡಿನ ಹವಮಾನಕ್ಕೆ ಉತ್ಕೃಷ್ಟ ಗುಣಮಟ್ಟದ ಅರೇಬಿಕಾ ಕಾಫಿ ಇಲ್ಲಿ ಬೆಳೆಯಲಾರಂಭಿಸಿತು. ಕ್ರಮೇಣ ಜನರಿಗೆ ಕಾಫಿ ಪೇಯ ಇಷ್ಟವಾಗುತ್ತ ಹೋಯಿತು ಸ್ಥಳೀಯವಾಗಿ ಬೇಡಿಕೆ ಹೆಚ್ಚಾಯಿತು, ವರ್ಷದಿಂದ ವರ್ಷಕ್ಕೆ ತೋಟಗಳ ವಿಸ್ತಾರ ಜಾಸ್ತಿಯಾಗುತ್ತ ಹೋಯಿತು. ಇಲ್ಲಿನ ರೈತರು ಕಾಫಿಯನ್ನು ಹೆಚ್ಚುಹೆಚ್ಚು ಬೆಳೆದು, ಭಾರತ ಮಾತ್ರವಲ್ಲದೆ ವಿವಿಧ ದೇಶಗಳಿಗೆ ಮಾರಿ ಅತೀ ಹೆಚ್ಚು ಹಣ ಸಂಪಾದಿಸಲು ಆರಂಭಿಸಿದರು. ಪೋರ್ಚುಗೀಸರು, ಫ್ರೆಂಚರು, ಬ್ರಿಟಿಷರು ಎಲ್ಲರೂ ಭಾರತದಲ್ಲಿ ಕಾಫಿ ಬೆಳೆಯಲು ಹೆಚ್ಚು ಪ್ರೋತ್ಸಾಹ ನೀಡಲಾರಂಭಿಸಿದರು. ಅಂದು ಶುರುವಾದ ಕಾಫಿ ಉದ್ಯಮ ಇಂದು ಕಾಫಿ ಬೆಳೆಯುವ ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮ ದೇಶ ಆರನೇ ಸ್ಥಾನದಲ್ಲಿದೆ. ಭಾರತದ ಒಟ್ಟು ಉತ್ಪಾದನೆಯ ಶೇ.70 -80ರಷ್ಟು ಕಾಫಿಯನ್ನು ಯುರೋಪ್‌ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಇದರ ಬಹುಪಾಲು ಕರ್ನಾಟಕದ್ದೇ ಎನ್ನುವುದೇ ವಿಶೇಷ.

ಕಾಫಿಯು ಮೂಲತಃ ಅರೇಬಿಯಾದ್ದೇ?
ಜಗತ್ತಿಗೆ ಅರಬ್‌ ರಾಷ್ಟ್ರಗಳಿಂದ ಕಾಫಿ ಪರಿಚಯವಾಯಿತು ಎಂದು ಬಹುತೇಕರು ನಂಬಿದ್ದಾರೆ. ಆದರೆ ಅದು ಸತ್ಯವಲ್ಲ. ಸುಮಾರು ಹದಿನೆಂಟು ವರ್ಷಗಳಿಂದ ಗಲ್ಫ್‌  ರಾಷ್ಟ್ರಗಳಲ್ಲಿ ನಾನು ವಾಸಿಸುತ್ತಿದ್ದೇನೆ. ಇಲ್ಲಿನ ಅರಬ್ಬರು ಮತ್ತು ಕೆಲಸಕ್ಕಾಗಿ ವಲಸೆ ಬಂದಿರುವ ಟರ್ಕಿ ದೇಶದ ಪ್ರಜೆಗಳು ಮತ್ತು ಈಜಿಪ್ಟಿನ, ಸಿರಿಯಾ, ಲಿಬಿಯಾ ಮತ್ತಿತರ ದೇಶಗಳ ಪ್ರಜೆಗಳು ಕುಡಿಯುವ ಕಡು ಕಪ್ಪಿನ ಡಿಕಾಶನ್‌ ತರಹದ ಕಾಫಿ ಮತ್ತು ಇನ್ನೂ ಕೆಲವರು ಕುಡಿಯುವ ಕಾವ್ಹ ನೋಡಿ ಬಹಳ ಆಶ್ಚರ್ಯವಾಗುತಿತ್ತು. ಬಹುತೇಕ ಅರಬ್‌ ಜನರಿಗೆ ಟೀ ಪೇಯಗಿಂತ ಕಾಫಿಯೇ ಬಹಳ ಇಷ್ಟ. ಅವರು ಇಷ್ಟಪಟ್ಟು ಕುಡಿಯುವ ಕಡುಕಪ್ಪಿನ ಕಾಫಿ, ನಮ್ಮ ಭಾರತೀಯರಿಗೆ ಖಂಡಿತ ಇಷ್ಟವಾಗುವುದಿಲ್ಲ. ನಮಗೇನಿದ್ದರು, ಹಾಲು ಮತ್ತು ಸಕ್ಕರೆ ಮಿಶ್ರಿತ ಕಾಫಿಯೇ ಇಷ್ಟವಾಗುವುದು.
ದುಬೈ, ಅಬುಧಾಬಿ, ಶಾರ್ಜಾ, ಕುವೈತ್‌, ಒಮಾನ್‌ ಹೀಗೆ ಹಲವಾರು ನಗರಗಳು ಮತ್ತು ಇಲ್ಲಿನ ಒಳನಾಡಿನ ಪರಿಚಯವಿರುವ ನನಗೆ ಇಲ್ಲಿನ ಹವಮಾನ, ಇಲ್ಲಿನ ಭೌಗೋಳಿಕ ಲಕ್ಷಣದ ಬಗ್ಗೆ ಸಂಪೂರ್ಣವಾದ ಅರಿವಿದೆ.

ಬಿರುಬಿಸಿಲಿನ ಒಣ ಪ್ರದೇಶ, ಮರುಭೂಮಿ, ಇವೆಲ್ಲವನ್ನು ನೋಡಿ ಬಹುಶಃ ಕಾಫಿ ಇಲ್ಲಿ ಹೇಗೆ ಬೆಳೆಯಲು ಸಾಧ್ಯ ಎನ್ನುವ ಪ್ರಶ್ನೆ ನನ್ನ ಮನದ ಮೂಲೆಯಲ್ಲಿತ್ತು. ಇಲ್ಲಿನ ಅರಬಿ ಜನರು ನೀಡಿದ ಮಾಹಿತಿ ಪ್ರಕಾರ ಯೆಮನ್‌ ದೇಶ ಮತ್ತು ಸೌದಿ ಅರೇಬೀಯಾ ದೇಶದಲ್ಲಿ ಮಲೆನಾಡಿನಂತಹ ಪ್ರದೇಶವಿದೆ ಅಲ್ಲಿ ಸ್ವಲ್ಪ ಮಟ್ಟಿಗೆ ಬೆಳೆಯುತ್ತಾರೆ ಎಂದು ಕೆಲವರು ಮಾಹಿತಿ ನೀಡಿದರು. ಆ ಪ್ರದೇಶಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಿತು ಆದರೂ ಅಲ್ಲಿ ಅಷ್ಟು ದೊಡ್ಡ ಮಟ್ಟಿಗಿನ ಕಾಫಿ ಬೆಳೆಯಲ್ಲ, ಅದೇನಿದ್ದರು ಸ್ಥಳೀಯ ಮಾರುಕಟ್ಟೆಗೆ ಸಾಕಾಗುವಂತಹದ್ದು. ಆದರೆ ಬಹುತೇಕ ಅದರಲ್ಲೂ ಉತ್ತಮ ಗುಣಮಟ್ಟದ ಕಾಫಿ ಆಮದಾಗುತ್ತಿರುವುದು ಆಫ್ರಿಕಾ ಖಂಡದ ಇಥಿಯೋಪಿಯಾ ದೇಶದಿಂದ ಎಂದು ತಿಳಿಯಿತು.

ಅರಬ್‌ ರಾಷ್ಟ್ರಗಳಲ್ಲಿ ಕಾಫಿ:
ಇಲ್ಲಿ ಕಾಫಿ ಹೇಗೆ ಪ್ರಖ್ಯಾತಿ ಪಡೆಯಿತು ಎಂದು ತಿಳಿದುಕೊಳ್ಳೋಣ. ಸೌದಿ ಅರೇಬಿಯಾದ ಮೆಕ್ಕಾ ನಗರವು ಮುಸ್ಲಿಮರ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಶತಶತಮಾನಗಳಿಂದ ಲಕ್ಷಾಂತರ ಜನರು ಧಾರ್ಮಿಕ ಯಾತ್ರೆಗೆ ಇತರೆ ರಾಷ್ಟ್ರಗಳಿಂದ ಧಾವಿಸುತ್ತಾರೆ. ಜನರು ದೂರದ ದೇಶಗಳಿಂದ ಸಹಸ್ರಾರು ಮೈಲುಗಳಿಂದ ಅರೇಬಿಯಾದ ಬಂದರು ಪ್ರದೇಶಗಳಿಗೆ ಧಾವಿಸಿ ಅಲ್ಲಿಂದ ಒಳನಾಡಿನಲ್ಲಿರುವ ಮೆಕ್ಕಾ ನಗರಕ್ಕೆ ಹೋಗುತ್ತಿದ್ದರು. ಹೀಗೆ ಹೋಗುವಾಗ ಸುಸ್ತು ದಣಿವು ಆವರಿಸುತ್ತಿದ್ದರಿಂದ, ದೇಹಕ್ಕೆ ಚೈತನ್ಯ ಪಡೆಯಲು ಕಾಫಿ ಪಾನೀಯವನ್ನು ಸೇವಿಸುತಿದ್ದರಂತೆ. ಇದು ಉತ್ತೇಜನಕಾರಿಯಾದ್ದರಿಂದ, ಇಲ್ಲಿ ದಿನದಿಂದ ದಿನ ಕಾಫಿ ಬೇಡಿಕೆ ಹೆಚ್ಚಾಗುತ್ತ ಹೋಯಿತು. ಮರುಭೂಮಿಯಲ್ಲಿ ಬೆಳೆಯಲು ಸಾಧ್ಯವಿಲ್ಲದ್ದರಿಂದ, ಕಾಫಿ ಗಿಡ ಬೆಳೆಯಲು

ಅನುಕೂಲವಾಗುವಂತಹ ವಾತಾವರಣವಿರುವ ಪ್ರದೇಶಗಳಲ್ಲಿ ಕೃಷಿ ಮಾಡಲೆತ್ನಿಸಿದರು. ಮೆಕ್ಕಾಗೆ ಆಗಮಿಸಿದ ಪ್ರವಾಸಿಗರು ಕಾಫಿಯನ್ನು ಇಷ್ಟ ಪಟ್ಟು ತಮ್ಮ ತಮ್ಮ ದೇಶಗಳಿಗೆ ಕೊಂಡೊಯ್ದು ಅಲ್ಲಿ ಮಾರುಕಟ್ಟೆಯನ್ನ ಸೃಷ್ಟಿಸಿದರು. ಅದೇ ರೀತಿ ಬಾಬಾ ಬುಡನ್‌ ಅವರು ಸಹ ಇದರಿಂದ ಪ್ರೇರಿತರಾಗಿ ಕರ್ನಾಟಕಕ್ಕೆ ಕಾಫಿ ಬೀಜಗಳನ್ನು ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಇಥಿಯೋಪಿಯಾದಲ್ಲಿ ಮೊದಲ ಬಳಕೆ:
ಸೌದಿ ಅರೇಬಿಯಾ, ಯೆಮನ್‌ನಂತಹ ಅರಬ್‌ ರಾಷ್ಟ್ರಗಳಿಗೆ ಕಾಫಿ ಪರಿಚಯಿಸಿದ್ದು ಸಹ ಇಥಿಯೋಪೀಯಾ ದೇಶದಿಂದಲೇ. ಅಲ್ಲಿ 9ನೇ ಶತಮಾನದಲ್ಲಿಯೇ ಕಾಫಿ ಬಳಕೆಗೆ ಬಂತು. ಒಮ್ಮೆ ಕುರಿಗಾಹಿಗಳು, ಮೇಯಲು ಬಿಟ್ಟಿದ್ದ ತಮ್ಮ ಮೇಕೆಗಳು ಅತೀ ಉತ್ಸಾಹದಿಂದ ಕುಣಿದಾಡುತ್ತಿರುವುದನ್ನು ಕಂಡು, ಇವ್ಯಾಕೆ ಹಿಂಗೆ ಕುಣಿಯುತ್ತಿವೆ ಎಂದು ಯೋಚಿಸಿದನಂತೆ. ಆ ಮೇಕೆಗಳು ಅಲ್ಲಿದ್ದ ಕೆಲವು ಗಿಡಗಳ ಹಣ್ಣನ್ನು ತಿನ್ನುವುದನ್ನ ಗಮನಿಸಿತ್ತಾರೆ, ಬಹುಶಃ ಈ ಹಣ್ಣುಗಳ ಸೇವನೆಯಿಂದ ಮೇಕೆಗಳು ಕುಣಿದಾಡುತ್ತಿವೆ ಎಂದು ಅರಿಯುತ್ತಾರೆ. ಅದರಲ್ಲೊಬ್ಬ ತಾನು ಸಹ ಆ ಹಣ್ಣುಗಳನ್ನ ತಿಂದನಂತೆ. ಅದರ ಫಲಿತಾಂಶಗಳಿಂದ ಆಕರ್ಷಿತನಾದ ಮೇಕೆ ಮೇಯಿಸುವವನು ಊರಿಗೆಲ್ಲ ಸುದ್ದಿ ಹಬ್ಬಿಸಿದನಂತೆ. ಕ್ರಮೇಣ ವಿವಿಧ ಪ್ರಯೋಗಳು ನಡೆದು ಇಂದು ನಾವೆಲ್ಲರೂ ಸೇವಿಸುವ ಕಾಫಿಯು ತನ್ನ ಹೊಸ ರೂಪದಲ್ಲಿ ನಮಗೆ ಇಂದು ಲಭ್ಯವಾಗುತ್ತಿದೆ. “ಕಾಫಿ’ ಎಂಬ ಪದ ಇಥಿಯೋಪಿಯದ “ಕಾಫ’ ಎಂಬ ಪ್ರದೇಶದ ಹೆಸರಿನಿಂದ ಉತ್ಪನ್ನವಾದದ್ದು ಎಂದು ಹೇಳಲಾಗುತ್ತಿದೆ.

15ನೇ ಶತಮಾನದ ಅನಂತರ, ಅಲ್ಲಿಂದ ಅದು ಈಜಿಪ್ಟ್, ಯೆಮನ್‌, ಯುರೋಪ್‌, ಭಾರತ ಮತ್ತಿತರ ದೇಶಗಳಿಗೆ ಹಬ್ಬುತ್ತ ಹೋಯಿತು. ಹಾಗೆಯೇ ಯುರೋಪಿಯನ್ನರು ಅದರಲ್ಲೂ ಪೋರ್ಚುಗೀಸರು, ಡಚ್‌ ವ್ಯಾಪಾರಿಗಳು ಕಾಫಿಯ ರುಚಿಗೆ ಮಾರು ಹೋದದ್ದರಿಂದ ಅದನ್ನು ತಮ್ಮ ದೇಶಗಳಿಗೆ ತೆಗೆದುಕೊಂಡು ಹೋದರು. ಮೊಟ್ಟ ಮೊದಲ ಕಾಫೀ ಶಾಪ್‌ ಟರ್ಕಿ ದೇಶದ ಇಸ್ತಾನ್‌ಬುಲ್‌ ನಗರದಲ್ಲಿ, ಕ್ರಿ.ಶ. 1475ರಲ್ಲಿ ಪ್ರಾರಂಭವಾಯಿತು. 17ನೇ ಶತಮಾದ ವೇಳೆಗೆ ಯೂರೋಪ್‌ ಖಂಡದಾದ್ಯಂತ ಕಾಫಿಯು ಅತ್ಯಂತ ಜನಪ್ರಿಯ ಪೇಯವಾಗಿತ್ತು. ಇಂಗ್ಲೆಂಡಿನ ನಗರಗಳಲ್ಲಿ ಬಗೆಬಗೆಯ ಕಾಫಿ ಕೇಂದ್ರಗಳನ್ನು ತೆರೆಯಲಾಯಿತು.

ಕಾಫಿಗೂ ನಿಷೇಧ
ಇಷ್ಟು ಪ್ರಖ್ಯಾತಿ ಪಡೆದ ಕಾಫಿಗೂ ಸಹ ಕಂಟಕ ಕಾದಿತ್ತು ಎಂದರೆ ನೀವು ನಂಬುವುದಿಲ್ಲ. ಆಗಿನ ಕಾಲದ ಆಡಳಿತಗಾರರ ಚಿಂತನೆ ಹೇಗಿತ್ತು ಎಂದರೆ, ಕಾಫಿ ಕುಡಿಯುವುದರಿಂದ ದೇಹದಲ್ಲಿ ಚೈತನ್ಯ ಉಂಟಾಗುವುದನ್ನು ಗಮನಿಸಿದ ಕೆಲವರು, ಕಾಫೀ ಪಾನೀಯ ಉತ್ತೇಜನಕಾರಿ ಎಂದು ನಿರ್ಧರಿಸಿ ಕೆಲವು ದೇಶಗಳಲ್ಲಿ ನಿಷೇಧ ಹೇರಲಾಗುತ್ತದೆ. ಸೌದಿ ಅರೇಬಿಯಾದ ಮೆಕ್ಕಾದಲ್ಲಿ 1511ರಲ್ಲಿ ಕಾಫಿಗೆ ನಿಷೇಧವನ್ನು ಹೇರಿದರು. 1532ರಲ್ಲಿ ಈಜಿಪ್ಟಿನ ಕೈರೋ ನಗರದಿಂದಲೂ ಕಾಫಿ ನಿಷೇಧಿತವಾಯಿತು. ಆದರೆ ಕಾಫಿಯ ಜನಪ್ರಿಯತೆಯ ಕಾರಣದಿಂದಾಗಿ ಕೆಲವು ವರ್ಷಗಳ ಅನಂತರ ನಿಷೇಧವನ್ನು ಹಿಂದೆಗೆದುಕೊಳ್ಳಲಾಯಿತು. 17ನೇ ಶತಮಾನದ ಇಂಗ್ಲೆಂಡಿನಲ್ಲಿ ಇದನ್ನು “ರಾಜಕೀಯವಾಗಿ ವಿದ್ರೋಹಕಾರಿ’ ಜನರು ಉಪಯೋಗಿಸುವ ಪೇಯ ಎಂದು ನಿಷೇಧಿಸಲಾಗಿತ್ತಂತೆ.
ಕಾಫಿ ಗಿಡಗಳಲ್ಲಿ ಎರಡು ಮುಖ್ಯ ಪ್ರಭೇದಗಳಿವೆ ಅರೇಬಿಕ ಮತ್ತು ರೋಬಸ್ಟ. ಅರೇಬಿಕ ತಳಿ ಆಫ್ರಿಕಾ ಖಂಡದ ಇಥಿಯೋಪಿಯಾದಲ್ಲಿ ಬೆಳೆದಿದ್ದು, ರೋಬಸ್ಟ ತಳಿ ಇಂದಿನ ಉಗಾಂಡ ದೇಶದಲ್ಲಿ ಉಗಮಗೊಂಡಿದ್ದು. ರೋಬಸ್ಟ ತಳಿಯ ಕಾಫಿ ಬೀಜಗಳು ಹೆಚ್ಚು ಕೆಫೀನ್‌ ಅಂಶವನ್ನು ಹೊಂದಿದ್ದು ಅತೀ ಹೆಚ್ಚು ಕಹಿಯಾಗಿರುತ್ತವೆ ಮತ್ತು ಹೆಚ್ಚು ಆಮ್ಲಿàಯ ಗುಣವನ್ನು ಹೊಂದಿರುತ್ತದೆ. ಅರೇಬಿಕಾ ತಳಿಯ ಕಡಿಮೆ ಆಮ್ಲಿàಯತೆ ಗುಣವನ್ನು ಹೊಂದಿದ್ದು, ಉತ್ತಮ ರುಚಿಯನ್ನು ಹೊಂದಿರುತ್ತದೆ.

ಕಾಫಿ ಉತ್ಪಾದಕರಲ್ಲಿ ಬ್ರೆಜಿಲ್‌ ಮೊದಲ ಸ್ಥಾನ:
ಅತೀ ಹೆಚ್ಚು ಕಾಫಿ ಉತ್ಪಾದಿಸುವ ರಾಷ್ಟ್ರ ಬ್ರೆಜಿಲ್‌ ಆಗಿದ್ದು, ಇದು ಪ್ರಪಂಚದ ಎಲ್ಲ ಕಾಫಿಯ ಮೂರನೇ ಒಂದು ಭಾಗ ಇಲ್ಲಿ ಉತ್ಪಾದಿಸಲಾಗುತ್ತಿದೆ. ವಿಯೆಟ್ನಾಂ ಮತ್ತು ಕೊಲಂಬಿಯಾ ಅನಂತರದ ಸ್ಥಾನದಲ್ಲಿದೆ. ಅತೀ ಹೆಚ್ಚು ಕಾಫಿ ಸೇವಿಸುವ ರಾಷ್ಟ್ರ ಫಿನ್‌ಲಾÂಂಡ್‌ ಆಗಿದೆ. 1929 ರಲ್ಲಿ ಬ್ರೆಜಿಲ್‌ ರಾಷ್ಟ್ರದಲ್ಲಿ ಬಳಕೆ ಮತ್ತು ಮಾರಾಟಕ್ಕಿಂತ ಅತೀ ಹೆಚ್ಚು ಕಾಫಿ ಉತ್ಪನ್ನವಾಗಿತ್ತು, ಇದಕ್ಕೆ ಪರಿಹಾರ ಕಂಡು ಹಿಡಿಯುವ ಸಲುವಾಗಿ ನೆಸ್‌ ಕೆಫೆ ಕಂಪೆನಿಯು ಮೊಟ್ಟ ಮೊದಲ ಬಾರಿಗೆ ಇನ್‌ಸ್ಟಂಟ್‌ ಕಾಫಿ ತಯಾರಿಕೆಯಲ್ಲಿ ತೊಡಗಿತು.

“ಕೋಪಿ ಲುವಾಕ್‌’ ವಿಶ್ವದ ಅತ್ಯಂತ ದುಬಾರಿ ಕಾಫಿ
ಇದನ್ನು ಸಿವೆಟ್‌ ಕಾಫಿ ಎಂದೂ ಕರೆಯುತ್ತಾರೆ. ಬಹಳಷ್ಟು ಜನರು ಒಂದು ಕಪ್‌ ಸಿವೆಟ್‌ ಕಾಫಿಗೆ ಸಾವಿರಾರು ರೂ. ಖರ್ಚು ಮಾಡಿ ಕುಡಿಯುತ್ತಾರೆ. ಈ ಕಾಫಿ ರುಚಿಕರವಾಗಿರುವುದರ ಜತೆಗೆ ತುಂಬಾ ಪೌಷ್ಠಿಕಯುತವಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ಸಿವೆಟ್‌ ಅಥವಾ ಪುನುಗು ಬೆಕ್ಕಿನ ಮಲದಿಂದ ತಯಾರಿಸಲಾಗುತ್ತದೆ. ಸಿವೆಟ್‌ ಬೆಕ್ಕುಗಳು ಕಾಫಿ ಬೀಜಗಳನ್ನು ತಿನ್ನಲು ಇಷ್ಟಪಡುತ್ತವೆ. ಆದರೆ ಈ ಬೆಕ್ಕುಗಳು ಚೆರಿì ಹಣ್ಣಿನ ತಿರುಳನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವುಗಳ ಕರುಳುಗಳು ಇದಕ್ಕೆ ಜೀರ್ಣಕಾರಿ ಕಿಣ್ವಗಳನ್ನು ಹೊಂದಿಲ್ಲ. ಹೀಗಾಗಿ ಕಾಫಿಯ ಆ ಭಾಗವು ಬೆಕ್ಕಿನ ಮಲದೊಂದಿಗೆ ಹೊರಬರುತ್ತದೆ.

ಅನಂತರ ಅದನ್ನು ಶುದ್ಧೀಕರಿಸಲಾಗುತ್ತದೆ. ಮಲದಲ್ಲಿರುವ ಎಲ್ಲ ರೀತಿಯ ಸೂಕ್ಷ್ಮಜೀವಿಗಳಿಂದ ಮುಕ್ತಗೊಳಿಸಿದ ಅನಂತರ ಮತ್ತಷ್ಟು ಸಂಸ್ಕರಣೆ ನಡೆಯುತ್ತದೆ. ಆ ಬೀಜಗಳನ್ನು ತೊಳೆದು ಹುರಿದ ಅನಂತರ ಕಾಫಿ ಸಿದ್ಧವಾಗುತ್ತದೆ. ಈ ಕಾಫಿಯನ್ನು ಏಷ್ಯಾದ ದೇಶಗಳಲ್ಲಿ, ಇಂಡೋನೇಷ್ಯಾದಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ, ಕರ್ನಾಟಕದಲ್ಲಿ ನಮ್ಮ ಕೊಡಗು ಜಿಲ್ಲೆಯಲ್ಲಿಯೂ ಸಹ ತಯಾರಿಸಲಾಗುತ್ತದೆ. ಈ ಕಾಫಿ ಕೆ.ಜಿ.ಗೆ 20 ರಿಂದ 25 ಸಾವಿರ ರೂ. ಇದೆ. ಅಮೆರಿಕದಲ್ಲಿ ಇದರ ಒಂದು ಕಪ್‌ಗೆ ಸುಮಾರು 6 ಸಾವಿರ ರೂಪಾಯಿ ಇದೆ. ವಿಶೇಷವೆಂದರೆ ಸೌದಿ ಅರೇಬಿಯಾ, ದುಬೈ, ಅಮೆರಿಕ, ಯುರೋಪ್‌ ಮೊದಲಾದ ದೇಶಗಳಲ್ಲಿ ಸಿವೆಟ್‌ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ.

*ಪಿ.ಎಸ್‌.ರಂಗನಾಥ, ಮಸ್ಕತ್‌

ಟಾಪ್ ನ್ಯೂಸ್

belaHeavy Rain; Holiday announced for schools in four taluks of Belagavi district

Heavy Rain; ಬೆಳಗಾವಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

cm-SIDDU

Union Budget; ರಾಜ್ಯದ ಹಿತ ಕಾಪಾಡುವಲ್ಲಿ ಕೇಂದ್ರ ಸಚಿವರು ವಿಫಲ: ಸಿಎಂ ಸಿದ್ದರಾಮಯ್ಯ

Budget 2024; center has given impetus to the Railway Department

Budget 2024; ಹೆಚ್ಚುತ್ತಿರುವ ಅಪಘಾತಗಳು; ರೈಲ್ವೇ ಇಲಾಖೆಗೆ ಉತ್ತೇಜನ ನೀಡಿದ ಕೇಂದ್ರ

NEET

NEET-UG Paper Leak: ನೀಟ್‌ ಮರು ಪರೀಕ್ಷೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

Renukaswamy Case: ಜೈಲಿನಲ್ಲಿರುವ ದರ್ಶನ್‌ಗೆ ಜ್ವರ

Renukaswamy Case: ಜೈಲಿನಲ್ಲಿರುವ ದರ್ಶನ್‌ಗೆ ಜ್ವರ

6–bamboo-shoot

Bamboo shoot: ಬಿದಿರಿನ ಚಿಗುರಿನ ಆರೋಗ್ಯ ಮಹತ್ವ-ಮಲೆನಾಡಿನ ನೆಚ್ಚಿನ ಖಾದ್ಯ!

Muddebihal ಕಾಲುವೆಯಲ್ಲಿ ಬಿದ್ದ ಕುರಿಮರಿ ರಕ್ಷಿಸಲು ಹೋಗಿದ್ದ ಯುವಕ ನೀರುಪಾಲು

Muddebihal ಕಾಲುವೆಯಲ್ಲಿ ಬಿದ್ದ ಕುರಿಮರಿ ರಕ್ಷಿಸಲು ಹೋಗಿದ್ದ ಯುವಕ ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಬಾಲ್ಯದ ನೆನಪು ತಂದ ನೃತ್ಯ

Desi Swara: ಬಾಲ್ಯದ ನೆನಪು ತಂದ ನೃತ್ಯ

Desi Swara: ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…..

Desi Swara: ಇಮೋಜಿ… ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

belaHeavy Rain; Holiday announced for schools in four taluks of Belagavi district

Heavy Rain; ಬೆಳಗಾವಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

cm-SIDDU

Union Budget; ರಾಜ್ಯದ ಹಿತ ಕಾಪಾಡುವಲ್ಲಿ ಕೇಂದ್ರ ಸಚಿವರು ವಿಫಲ: ಸಿಎಂ ಸಿದ್ದರಾಮಯ್ಯ

8-hulikal

Hulikal Ghat ಗುಡ್ಡಕುಸಿತ;ಪಿಡಬ್ಲ್ಯುಡಿ ಸಿಇ ಭೇಟಿ: ಮಳೆ ಬಳಿಕ ಕಾಮಗಾರಿ ನಿರ್ವಹಣೆಗೆ ಸೂಚನೆ

Budget 2024; center has given impetus to the Railway Department

Budget 2024; ಹೆಚ್ಚುತ್ತಿರುವ ಅಪಘಾತಗಳು; ರೈಲ್ವೇ ಇಲಾಖೆಗೆ ಉತ್ತೇಜನ ನೀಡಿದ ಕೇಂದ್ರ

7-sankeshwar

Sankeshwar: ಹಿರಣ್ಯಕೇಶಿ ನದಿಯ ಸೇತುವೆಯಲ್ಲಿ ಸವಾರರ ಹುಚ್ಚಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.