ಪತನದ ಸೂತ್ರದಲ್ಲಿ ಸಿದ್ದು ಪಾತ್ರದ ನೆರಳಿದೆಯೇ?


Team Udayavani, Jul 24, 2019, 3:09 AM IST

patanada

ಬೆಂಗಳೂರು: ಅಂತೂ ರಾಜಕೀಯ ಮೇಲಾಟ, ರಾಜೀನಾಮೆ ಪ್ರಹಸನ, ಆರೋಪ, ಪ್ರತ್ಯಾರೋಪ, ರಾದ್ಧಾಂತಗಳಿಗೆ ಸಾಕ್ಷಿಯಾಗಿದ್ದ ಮೈತ್ರಿ ಸರ್ಕಾರ ಪತನವಾಗಿದೆ. ಈ ಪತನಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗಿಂತಲೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಪ್ರಮುಖ ಕಾರಣ. ಆ ಮೂಲಕ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯ ಅಧಿಕಾರದ ಕನಸು ಒಂದರ್ಥದಲ್ಲಿ ಚಿಗುರುವಂತೆ ಮಾಡಿದರು!

ಒಂದು ಅಂದಾಜಿನಂತೆ ಸಿದ್ದರಾಮಯ್ಯ ಅವರಿಗೆ ಎರಡು ಉದ್ದೇಶಗಳಿದ್ದವು. ತಾವು ಮುಖ್ಯಮಂತ್ರಿ ಆಗುವುದು ಇಲ್ಲವೇ ತಾವು ವಿರೋಧ ಪಕ್ಷದಲ್ಲಿ ಕೂರುವುದು! ಆ ಮೂಲಕ ಜೆಡಿಎಸ್‌ ಗಟ್ಟಿಯಾಗುವುದನ್ನು ತಪ್ಪಿಸುವುದು, ಮೈತ್ರಿ ಕಾರಣದಿಂದ ತಮ್ಮ ಪಕ್ಷದ ಬುಟ್ಟಿಯಿಂದ ಬಿಜೆಪಿ ಬುಟ್ಟಿಗೆ ಹೋದ ಮತಗಳನ್ನು ಮತ್ತೆ ಸೆಳೆಯಲು ಪ್ರಯತ್ನಿಸುವುದು ಸಿದ್ದರಾಮಯ್ಯ ಅವರ ರಹಸ್ಯ ಕಾರ್ಯಸೂಚಿಯಾಗಿತ್ತೆ ಎನ್ನುವುದು ಯಕ್ಷ ಪ್ರಶ್ನೆ. ರಾಜಕೀಯ ತಂತ್ರಗಾರಿಕೆಯಲ್ಲಿ ಸಿದ್ಧಹಸ್ತರು ಎನಿಸಿಕೊಂಡಿರುವ ಸಿದ್ದರಾಮಯ್ಯ, ಬಿಜೆಪಿ ಆಸೆಯನ್ನು ಪರೋಕ್ಷವಾಗಿ ಪೂರೈಸುವ ಮೂಲಕ ತಮ್ಮ ಅಭಿಲಾಶೆಯನ್ನು ತೀರಿಸಿಕೊಂಡರು ಎಂಬ ವಿಷಯ ವಿಶ್ಲೇಷಣೆಗೆ ಅರ್ಹ. ಇನ್ನೊಂದು ರೀತಿಯಲ್ಲಿ ತಮ್ಮ ರಾಜಕೀಯ ಜೀವನ ಮುಗಿಸಲು ಸದಾ ಯತ್ನಿಸುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ “ಪಾಠ ಕಲಿಸುವ’ ಉದ್ದೇಶವೂ ಅವರ ನಡೆಗಳಲ್ಲಿ ಇತ್ತೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರದ ಆರಂಭದಿಂದ ಪತನ ದವರೆಗೆ ಕೇಂದ್ರ ಬಿಂದುವಾಗಿ ಮೆರೆದಿದ್ದ ಸಿದ್ದರಾಮಯ್ಯ ಅವರು ಮೈತ್ರಿ ಪತನಾನಂತರದ ರಾಜಕೀಯದಲ್ಲೂ ಕೇಂದ್ರ ಬಿಂದುವಾಗಿ ಪರಿಗಣಿಸಲ್ಪಡಲಿದ್ದಾರೆ. ಅವರ ಆಪ್ತರೆನಿಸಿಕೊಂಡ ಅತೃಪ್ತರ ಮುಂದಿನ ನಡೆ ಬಿಜೆಪಿಗೆ ಎಷ್ಟು ವರದಾನವಾಗಬಹುದು ಮತ್ತು ಒಂದು ವೇಳೆ ಅತೃಪ್ತರ ರಾಜೀನಾಮೆ ಬಳಿಕ ನಡೆಯಲಿರುವ ಉಪ ಚುನಾವಣೆಯಲ್ಲಿ ಗೆಲ್ಲುವ ಕಾಂಗ್ರೆಸ್‌-ಬಿಜೆಪಿ ಅಂಕೆಗಳು ಮುಂದಿನ ರಾಜಕೀಯದಲ್ಲಿ ಮತ್ತೆ ಸಿದ್ದರಾಮಯ್ಯ ನೆರಳನ್ನು ಕಾಣುವಂತೆ ಮಾಡಲಿವೆ ಎಂಬುವುದನ್ನು ಮುಂದಿನ ಅವರ ರಾಜಕೀಯ ನಡೆಗಳು ತಿಳಿಸಲಿವೆ.

ದಾಳ ಉರುಳಿತೇ?: ಕಳೆದ 14 ತಿಂಗಳಲ್ಲಿ ನಡೆದ ರಾಜಕೀಯದ ಆಟದಲ್ಲಿ ನಿಜವಾದ ದಾಳ ಉರುಳಿಸಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಮತ್ತೆ ಮುಖ್ಯಮಂತ್ರಿ ಆಗುವ ಕನಸಿನೊಂದಿಗೆ 2018ರ ವಿಧಾನಸಭಾ ಚುನಾವಣೆ ಎದುರಿಸಿದ್ದ ಸಿದ್ದರಾಮಯ್ಯ, “ಅವರಪ್ಪನಾಣೆ ಸಿಎಂ ಆಗೋಲ್ಲ’ ಎಂದು ಯಾರ ವಿರುದ್ಧ ಗುಟುರು ಹಾಕಿದರೋ, ಅವರ ಬಳಿ ಸುಖಾಸುಮ್ಮನೆ ನಿಂತು “ಕುಮಾರಸ್ವಾಮಿ ಮುಂದಿನ ಸಿಎಂ, ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮೈತ್ರಿ ಸರ್ಕಾರ’ ಎಂದು ತೀರಾ ಕಡಿಮೆ ಶಾಸಕರನ್ನು ಹೊಂದಿದ್ದ ಪಕ್ಷಕ್ಕೆ ಬೆಂಬಲ ಘೋಷಿಸಿದರು!

ಮೋದಿ ವಿರುದ್ಧ ಟೀಕಾಸ್ತ್ರ ಎಸೆಯುತ್ತಲೇ ದೇಶದ ಕಣ್ಣಿಗೆ ಕುತೂಹಲ ಮೂಡಿಸುತ್ತಲೇ ಅಬ್ಬರಿಸಿದ್ದ ಸಿದ್ದರಾಮಯ್ಯ, ರಾಜಕೀಯ ಅವನತಿಯತ್ತ ಸಾಗುವ ರೀತಿಯಲ್ಲಿ ಕಂಡು ಬರುತ್ತಿರುವ ಕಾಂಗ್ರೆಸ್‌ನ “ಮಾಸ್‌ ಲೀಡರ್‌’ ಎಂಬಂತೆ ಕಂಗೊಳಿಸಿದ್ದರು. ಲಿಂಗಾಯತ ಧರ್ಮ ಎಂಬ ಜೇನುಗೂಡಿಗೆ ಕೈಹಾಕುವಂತಹ ಮತ್ತು ದೇವೇಗೌಡರನ್ನು ಟೀಕಿಸುವ ಭರದಲ್ಲಿ ಒಕ್ಕಲಿಗ ಸಮುದಾಯದ ವೈರತ್ವ ಕಟ್ಟಿಕೊಂಡ ತಮ್ಮ ಕೆಲವು ಸ್ವಯಂಕೃತ ಅಪರಾಧಗಳು ಮತ್ತು ತಮ್ಮನ್ನು ಸುತ್ತುವರಿದ ಹೊಗಳುಭಟ್ಟರ ಮತ್ತು ತೀರಾ ನಂಬಿಕೊಂಡಿದ್ದ ಸಮಾಜವಾದದ ಸೋಗಿನಲ್ಲಿರುವವರು ತಪ್ಪಿಸಿದ ದಾರಿಯಲ್ಲಿ ಸಾಗಿದ ಸಿದ್ದರಾಮಯ್ಯ ತಮ್ಮ ಸಿಎಂ ಕನಸಿಗೆ ಧಕ್ಕೆ ತಂದುಕೊಂಡರು.

ಸಮಾಜವಾದದ ಪೋಷಾಕಿಗೆ ಕೆಸರು: ಅಪ್ಪ-ಮಕ್ಕಳು ಎಂಬ ಶಬ್ದಕ್ಕೆ ದೇವೇಗೌಡರ ಮಕ್ಕಳ ಪ್ರೇಮವನ್ನು ತಾಳೆ ಹಾಕಿದ್ದ ಸಿದ್ದರಾಮಯ್ಯ, ಸ್ವತ: ತಮ್ಮ ಮಗನನ್ನು ವರುಣಾ ಕ್ಷೇತ್ರದಿಂದ ನಿಲ್ಲಿಸಿ, ತಾವು ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿ ಸಿದಾಗಲೇ ತಮ್ಮ ತತ್ವ-ಸಿದ್ಧಾಂತಗಳಿಗೆ ರಾಜಿಯಾದರು ಎಂಬುದು ಜನಜನಿತವಾಯಿತು. ಅವರ ಸಮಾಜವಾದದ ಪೋಷಾಕಿನಲ್ಲಿ ಕೆಸರು ಮೆತ್ತಿಕೊಂಡಿತು.

ಸಿದ್ದರಾಮಯ್ಯ ರಾಜಕೀಯ ಅಷ್ಟಕ್ಕೇ ಅಂತ್ಯವಾಯಿತು ಎನ್ನುವಾಗಲೇ ಹೇಗೆ ಸಮ್ಮಿಶ್ರ ಸರ್ಕಾರವನ್ನು ನಿಧಾನವಾಗಿ ಆಟವಾಡಿಸತೊಡಗಿದರು ಎಂಬುದು ಇತ್ತೀಚಿನ ರಾಜಕೀಯ ಮೇಲಾಟಗಳಲ್ಲಿ ಗೊತ್ತಾಗುತ್ತದೆ. ಸಮ್ಮಿಶ್ರ ಸರ್ಕಾರದ ಹತೋಟಿಯನ್ನು ದೇವೇಗೌಡರ ಕುಟುಂಬ ಪಡೆಯಲು ಯತ್ನಿಸುತ್ತಿದ್ದಾಗಲೆ ಸಿದ್ದರಾಮಯ್ಯ ಕೂಡಾ ಇನ್ನೇನು ಕೈತಪ್ಪಲಿದ್ದ ಕಾಂಗ್ರೆಸ್‌ ಪಕ್ಷದ ಮೇಲಿನ ಹಿಡಿತವನ್ನು ಸಮನ್ವಯ ಸಮಿತಿ ಅಧ್ಯಕ್ಷರಾಗಿ, ನಿಧಾನವಾಗಿ ಬಿಗಿ ಮಾಡಿಕೊಂಡರು. ಅದಕ್ಕಾಗಿ ಜೆಡಿಎಸ್‌ ಪಕ್ಷವನ್ನೇ ಬಳಸಿಕೊಂಡಂತೆ ಕಾಣುತ್ತದೆ.

ಸಿದ್ದರಾಮಯ್ಯ ಅವರನ್ನು ಬದಿಗೆ ಸರಿಸಲು ಉಪಮುಖ್ಯ ಮಂತ್ರಿ ಜಿ.ಪರಮೇಶ್ವರ್‌, ಡಿ.ಕೆ.ಶಿವ ಕುಮಾರ್‌ ಮತ್ತಿತರರು ರಾಜ ಕೀಯ ಆಟಗಳನ್ನು ಆಡುತ್ತಿರು ವಾಗಲೇ ಅದರ ಸದ್ಬಳಕೆಗೆ ಕುಮಾ ರಸ್ವಾಮಿ ಟೀಮ್‌ ಕೂಡಾ ಸಿದ್ಧತೆ ನಡೆಸಿತ್ತು. ಮತ್ತೆ ಸಿದ್ದರಾಮಯ್ಯ ಸಿಎಂ ಎಂಬ ಸ್ಲೋಗನ್‌ಗಳನ್ನು ತಮ್ಮ ಆಪ್ತರಿಂದ ಘೋಷಿಸಿಕೊಂಡು, ಅದಕ್ಕೆ ಜೆಡಿಎಸ್‌ ಮುಖಂ ಡರಿಂದ ಪ್ರತಿಕ್ರಿಯೆ “ಹೇಳಿಸಿ’ಕೊಂಡು ತಮ್ಮ ಇರುವಿಕೆ ಯನ್ನು ಸಿದ್ದರಾಮಯ್ಯ ಗಟ್ಟಿಮಾಡತೊಡಗಿದರು. ಕನಿಷ್ಠ ಆರೇಳು ಬಾರಿ ನಡೆದ “ಆಪರೇಷನ್‌ ಕಮಲ’ ಸುದ್ದಿಗಳಿಗೆ ಸಿದ್ದರಾಮಯ್ಯ ಪರೋಕ್ಷ ಬೆಂಬಲವಿತ್ತೇ ಎಂಬುದು ಚರ್ಚಿಸಬೇಕಾದ ವಿಷಯ.

ಮೈತ್ರಿ ಸರ್ಕಾರದ ಆರಂಭ ಕಾಲದಲ್ಲೇ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದ ಅವರು ಮತ್ತವರ ಮಾತುಕತೆ ಬೇರೆಯೇ ರಾಜಕೀಯ ಲೆಕ್ಕಾಚಾರವನ್ನು ಹಾಕಿತ್ತಂತೆ. ಅಂತಹ ರಾಜಕೀಯ ಆಟಗಳನ್ನು ಸಿದ್ದರಾಮಯ್ಯ ಆಡುತ್ತಲೇ ಹೋದರು. ಕುಮಾರಸ್ವಾಮಿ ತಮ್ಮ ಪ್ರಭಾವವನ್ನು ಎಲ್ಲಿ ಹೆಚ್ಚಿಸಿಕೊಳ್ಳುತ್ತಿದ್ದರೋ, ಅಲ್ಲೆಲ್ಲಾ ಸಿದ್ದರಾಮಯ್ಯ ಯಾವುದಾದರೂ ರೂಪದಲ್ಲಿ “ರಾಜ ಕೀಯ ಪಗಡೆಯಾಟದ ಚೆಕ್‌’ ಒಡ್ಡುತ್ತಿದ್ದರು. ಅದು ಕುಮಾಸ್ವಾಮಿ- ಸಿದ್ದರಾಮಯ್ಯ, ದೇವೇಗೌಡ-ಸಿದ್ದ ರಾಮಯ್ಯ, ಸಾ.ರಾ.ಮಹೇಶ್‌- ಸಿದ್ದರಾಮಯ್ಯ, ಎಚ್‌. ವಿಶ್ವನಾಥ್‌- ಸಿದ್ದರಾಮಯ್ಯ, ಜಿ.ಟಿ.ದೇವೇಗೌಡ- ಸಿದ್ದರಾಮಯ್ಯ ಹೀಗೆ ಮಾತಿನ ಪೆಟ್ಟು-ಪ್ರತಿ ಪಟ್ಟುಗಳಿಗೆ ಕಾರಣವಾಗುತ್ತಲೇ ಹೋಯಿತು.

ಇತ್ತ ಸಿದ್ದರಾಮಯ್ಯ-ಪರಮೇಶ್ವರ್‌, ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ- ರೋಷನ್‌ಬೇಗ್‌, ಸಿದ್ದರಾಮಯ್ಯ-ಕೋಳಿವಾಡ್‌… ಹೀಗೆ ಕಾಂಗ್ರೆಸ್‌ನಲ್ಲೂ ವ್ಯಂಗ್ಯ-ಪ್ರತಿಧ್ವನಿಗಳು ಕೇಳುತ್ತಲೇ ಇದ್ದವು. ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್‌ ನಾಯಕರನ್ನು ಬಳಸಿಕೊಂಡು ಅವರ ಸ್ವಪಕ್ಷದ ವಿರೋಧಿಗಳೂ ಕೂಡಾ ಹೈಕಮಾಂಡ್‌ಗೆ ದೂರುತ್ತಲೇ ಹೋದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲನನುಭವಿಸಿದಾಗ ಸಿದ್ದರಾಮಯ್ಯ ಕೊಟ್ಟ ಚುನಾವಣಾ ಪೂರ್ವ ವರದಿ ಸತ್ಯವಾಗಿದ್ದು ಹೈಕಮಾಂಡ್‌ಗೆ ಮನವರಿಕೆಯಾಯಿತು ಎಂಬುದು ಅವರ ಜತೆಗಾರರ ಹೇಳಿಕೆ. ಸಿದ್ದರಾಮಯ್ಯ ದೆಹಲಿಗೆ ತೆರಳಿದವರೇ ಮೈತ್ರಿ ಸರ್ಕಾರದ ಪತನದ ಭವಿಷ್ಯ ಬರೆದೇ ಬಂದಿದ್ದರು ಎಂಬಂತಿದೆ ಆ ಬಳಿಕದ ಅವರ ನಡವಳಿಕೆ.

ಅವರ “ಆಪ್ತರೇ’ ಆಗಿದ್ದ ರಮೇಶ್‌ ಜಾರಕಿಹೊಳಿ, ಎಸ್‌.ಟಿ. ಸೋಮಶೇಖರ್‌, ಮುನಿರತ್ನಾದಿಗಳಾಗಿ ಹೆಚ್ಚಿನ ಅತೃಪ್ತರನ್ನು ಆಗಾಗ ಕುಮಾರಸ್ವಾಮಿ ವಿರುದ್ಧ ಛೂ ಬಿಡುತ್ತಲೇ ಇದ್ದರು. ಆದರೆ, ಕೊನೆಗೆ ಬಿಟ್ಟ ಛೂಬಾಣ ನೇರವಾಗಿ ಕುಮಾರಸ್ವಾಮಿ ಅವರಿಗೆ ತಗುಲಿದ್ದು ಈಗ ವೇದ್ಯವಾಗುತ್ತಿದೆ. ಅನರ್ಹತೆ, ನೋಟಿಸ್‌, ರಾಜಕೀಯ ಒತ್ತಡ… ಹೀಗೆ ಎಲ್ಲವನ್ನೂ ಆ ಅತೃಪ್ತರು ಎದುರಿಸುತ್ತಿರುವುದರ ಹಿಂದೆ ನಿಜವಾಗಿ ಯಾರ ಕೈ ಇದೆ? ಸಿದ್ದರಾಮಯ್ಯ ಬಾಣವನ್ನೇನೋ ಬಿಟ್ಟರು. ಆದರೆ, ಆ ಬಾಣ ಮತ್ತ ಸಿದ್ದರಾಮಯ್ಯರ ಬತ್ತಳಿಕೆಗೆ ಮರಳಿ ಬರದೆ, ಬಿಜೆಪಿ ಬತ್ತಳಿಕೆ ಏರಿದ್ದು ಹೇಗೆ ಎಂಬುದು ರಾಜಕೀಯ ಯಕ್ಷ ಪ್ರಶ್ನೆ. ಸಿದ್ದರಾಮಯ್ಯ ಅವರೇನೋ ಅತೃಪ್ತರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ “ತಮಗಾಗಿ ಎದೆಬಗೆಯಲು ಸಿದ್ಧರಾಗಿದ್ದವರು ತಮ್ಮ ಬೆನ್ನು ಬಗೆದರು’ ಎಂದು ಪಕ್ಷ ಶಾಸಕರ ಮುಂದೆ ಹೇಳಿಕೊಂಡು ಗಾಯಕ್ಕೆ ಮುಲಾಮು ಹಚ್ಚಿಕೊಂಡರು.

ಆದರೆ, ಈಗ.. ಅವರ ನಿಜವಾದ ಗುರಿ ಸಾಧ್ಯವಾಗಿದೆಯೇ? ಒಂದು ಅಂದಾಜಿನ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಉಳಿಸಲು ಪಕ್ಷ ಮತ್ತೆ ಸಂಘಟಿಸಲು ಈ ಮೈತ್ರಿ ಕಳಚಿಕೊಳ್ಳಬೇಕು, ಅಥವಾ ಮೈತ್ರಿ ಸರ್ಕಾರದ ನಾಯಕತ್ವವನ್ನು ಕಾಂಗ್ರೆಸ್‌ ವಹಿಸಿಕೊಳ್ಳಬೇಕು ಎಂಬ ಸಿದ್ದರಾಮಯ್ಯ ತಂತ್ರ ನಿಜವಾದಂತಿದೆ. ಒಂದಂತೂ ಸ್ಪಷ್ಟ, ಕಾಂಗ್ರೆಸ್‌ ಪ್ರಮುಖ ವಿರೋಧಪಕ್ಷವಾಗಿ, ಪಕ್ಷ ಸಂಘಟಿಸಲು ಸಹಾಯವಾಗಬಹುದು. ಸಿದ್ದರಾಮಯ್ಯ ವಿರೋಧಪಕ್ಷದ ನಾಯಕರಾಗುತ್ತಾರೆ ಅಥವಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗುತ್ತಾರೆ ಎನ್ನುವುದಂತೂ ದಿಟ. ಆ ಮೂಲಕ ಅವರು ಬಿಜೆಪಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂಬುದು ಜೆೆಡಿಎಸ್‌ ಮಂದಿಯ ಅನಿಸಿಕೆ.

ಸಿದ್ದರಾಮಯ್ಯ ಅಚ್ಚರಿಯ ನಡೆ: ಸಮ್ಮಿಶ್ರ ಸರ್ಕಾರವನ್ನು ಕಾಪಾಡಲು ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಿದ ರೀತಿ, ಸದನದಲ್ಲಿ ಮೈತ್ರಿ ಪರವಾಗಿ ಅವರು ವಕಾಲತ್ತು ವಹಿಸಿಕೊಂಡು “ಸದನದಲ್ಲಿ ಕ್ರಿಯಾಲೋಪ’ ಎತ್ತಿ ವಿಪ್‌ ವಿಷಯದಲ್ಲಿ ಬಿಗಿಪಟ್ಟು ಪ್ರದರ್ಶಿಸಿರುವುದು ಅವರ ಅಚ್ಚರಿಯ ನಡೆಯೆಂದು ಅವರ ವಿರೋಧಿಗಳೂ ಹೇಳುತ್ತಾರೆ. ಕೆಲವು ಬಿಜಪಿ ಸಂಸದೀಯ ಪಟುಗಳ ಪ್ರಕಾರ, ಮೈತ್ರಿ ಸರ್ಕಾರ ಉಳಿಸಲು ಸದನವನ್ನು ಐದು ದಿನಗಳವರೆಗೆ ಮುಂದುವರಿಕೆ ಆಗುವಂತೆ ಮಾಡಿ, ಅತೃಪ್ತರು ಮನಸ್ಸು ಬದಲಿಸಿ ಸರ್ಕಾರ ಉಳಿಸುತ್ತಾರೋ ಎಂಬ ಭಾವನೆಯನ್ನು ಜೆಡಿಎಸ ಮಟ್ಟಿಗಂತೂ ಬರುವಂತೆ ಮಾಡಿ, ಅವರಿಗಿರುವ ಜೆಡಿಎಸ್‌ “ಪ್ರೀತಿ’ಯನ್ನೂ ತೋರಿಸಿದರು. ಸರ್ಕಾರ ಪತನವಾದ ಬಳಿಕ ಜೆಡಿಎಸ್‌ ತಮ್ಮ ಮೇಲೆ ಗೂಬೆ ಕೂರಿಸದಿರಲು ಅವರು ಮಾಡಿರುವ ತಂತ್ರ ಇದೆಂದು ವಿಶ್ಲೇಷಿಸಬಹುದೇ?

* ನವೀನ್‌ ಅಮ್ಮೆಂಬಳ

ಟಾಪ್ ನ್ಯೂಸ್

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ ಅವಳಿ ಸಹೋದರರು

11ನೇ ವಯಸ್ಸಿಗೆ 50ಕೆ.ಜಿ ಭಾರ ಎತ್ತಿದ ಅವಳಿ ಸಹೋದರರು : ಇಬ್ಬರ ಸಾಹಸಕ್ಕೆ ಭಾರಿ ಮೆಚ್ಚುಗೆ

Covid test

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ 20% ಸಮೀಪಕ್ಕೆ : ಇಂದು 13 ಸಾವು

ಕುಳಗೇರಿ ಕ್ರಾಸ್ : ಹೆಸರಿಗಷ್ಟೇ ವೀಕೆಂಡ್ ಕರ್ಫ್ಯೂ, ಯಾವ ಕಾನೂನಿಗೂ ಇಲ್ಲಿ ಡೋಂಡ್ ಕೇರ್

ಕುಳಗೇರಿ ಕ್ರಾಸ್ : ಹೆಸರಿಗಷ್ಟೇ ವೀಕೆಂಡ್ ಕರ್ಫ್ಯೂ, ಯಾವ ಕಾನೂನಿಗೂ ಇಲ್ಲಿ ಡೋಂಡ್ ಕೇರ್

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.