ಬಿಜೆಪಿ ಷಡ್ಯಂತ್ರಕ್ಕೆ ವಲಸಿಗರು ಬಲಿ : ದಿನೇಶ್‌ ಗುಂಡೂರಾವ್‌

Team Udayavani, Jan 27, 2020, 9:37 PM IST

ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ವಲಸೆ ಹೋಗಿರುವ 17 ಜನರನ್ನು ಒಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಬಿಜೆಪಿಯ ಷಡ್ಯಂತ್ರಕ್ಕೆ ವಲಸಿಗರು ಬಲಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ವಲಸಿಗರು ಒಗ್ಗಟ್ಟಾಗಿದ್ದರು. ಈಗ ಬಹಿರಂಗವಾಗಿ ಒಬ್ಬರ ವಿರುದ್ಧ ಮತ್ತೂಬ್ಬರು ಹೇಳಿಕೆ ಕೊಡುತ್ತಿದ್ದಾರೆ. 2008 ರಲ್ಲಿ ಬಿಜೆಪಿಗೆ ಹೋದವರ ಪರಿಸ್ಥಿತಿ ಏನಾಗಿತ್ತೂ ಇವರಿಗೂ ಅದೇ ಪರಿಸ್ಥಿತಿ ಬರುತ್ತದೆ. ಬಿಜೆಪಿಯವರು 17 ಜನರನ್ನು ಮೂರು ಗುಂಪುಗಳಾಗಿ ಒಡೆದಿದ್ದು, ಅವರ ಐಕ್ಯತೆಯನ್ನು ಮುರಿದಿದ್ದಾರೆ. ಅವರು ಮಂತ್ರಿಗಳಾದರೂ ಡಮ್ಮಿಗಳಾಗುತ್ತಾರೆ ಎಂದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿದ್ದಾಗ ವಲಸೆ ಹೋಗಿರುವ ಶಾಸಕರಿಗೆ ಒಳ್ಳೆಯ ಸ್ಥಾನ ಮಾನ ನೀಡಲಾಗಿತ್ತು. ಈಗ ಕಾಂಗ್ರೆಸ್‌ಗೆ ವಾಪಸ್‌ ಬಂದರೂ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಎಂಟಿಬಿ ನಾಗರಾಜ್‌ ಹಣ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಚಿವ ಸ್ಥಾನ ಬಿಟ್ಟು ಆಪರೇಷನ್‌ ಕಮಲಕ್ಕೆ ಬಲಿಯಾಗಿದ್ದರು. ಈಗ ಸಚಿವರನ್ನಾಗಿ ಮಾಡುವಂತೆ ದುಂಬಾಲು ಬಿದ್ದಿದ್ದಾರೆ.

ರಾಜಕೀಯದಲ್ಲಿ ಸಿದ್ದಾಂತ ಮುಖ್ಯ. ಸಚಿವ ಸ್ಥಾನ ಶಾಸ್ವತವಲ್ಲ. ರಾಜಕೀಯ ಶಾಸ್ವತ. ವಲಸಿಗರಿಗೆ ಈಗ ತಾವು ತಪ್ಪು ಮಾಡಿದ್ಧೇವೆ ಎಂದು ಅನಿಸುತ್ತಿದೆ. ಬಿಜೆಪಿಯವರು ಇವರ ಬೀದಿ ನಾಟಕ ನೋಡಿ ಮನರಂಜನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ