
Delhi-Leh ಗೆ ನೇರ ಬಸ್- ಜೂ.15ರಿಂದ ಆರಂಭ
ಜಗತ್ತಿನ ಅತಿ ಎತ್ತರದ ಪ್ರದೇಶದಲ್ಲಿ ಸಂಚಾರ
Team Udayavani, Jun 9, 2023, 8:09 AM IST

ಹಿಮಚ್ಛಾದಿತ ಲೇಹ್ ಸೌಂದರ್ಯವನ್ನು ಸವಿಯುವುದು ಪ್ರವಾಸಿಗರಿಗೆ ಇನ್ನು ಸುಲಭ. ಈ ಹಿಂದೆ ಕಿರಿದಾದ ರಸ್ತೆಗಳಲ್ಲಿ ಸಾಗುತ್ತಿದ್ದ ಪ್ರವಾಸಿಗರು, ಇನ್ನು ಮುಂದೆ ಯಾವುದೇ ಭಯವಿಲ್ಲದೇ ಬಸ್‌ನಲ್ಲಿ ಸುರಕ್ಷಿತವಾಗಿ ಪ್ರಕೃತಿಯ ಸೌಂದರ್ಯ ಸವಿಯುತ್ತಾ ದೆಹಲಿಯಿಂದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಲೇಹ್ ತಲುಪಬಹುದು.
ಜೂ.15ರಂದು ಬಸ್ ಸೇವೆ ಆರಂಭ
ಹಿಮಾಚಲ ರಸ್ತೆ ಸಾರಿಗೆ ನಿಗಮ(ಎಚ್‌ಆರ್‌ಟಿಸಿ)ವು ದೆಹಲಿಯಿಂದ ಲೇಹ್‌ಗೆ ಜೂ.15ರಿಂದ ಬಸ್ ಸೇವೆ ಆರಂಭಿಸಲಿದೆ. ಈ ಹಿಂದೆ ಪ್ರವಾಸಿಗರು ದೆಹಲಿ ತಲುಪಿ, ಅಲ್ಲಿಂದ ವಿಮಾನದ ಮೂಲಕ ಅಥವಾ ಟ್ಯಾಕ್ಸಿ ಅಥವಾ ಕಾರಿನ ಮೂಲಕ ಕಿರಿದಾದ ರಸ್ತೆಯಲ್ಲಿ ಲೇಹ್ ತಲುಪಬೇಕಿತ್ತು. ಕೆಲವರು ಬುಲೆಟ್ ರೀತಿಯ ಬೈಕ್‌ಗಳಲ್ಲೂ ಹೋಗುತ್ತಿದ್ದರು. ಈಗ ಮೊಟ್ಟ ಮೊದಲ ಬಾರಿಗೆ ದೆಹಲಿಯಿಂದ ಲೇಹ್‌ಗೆ ನೇರ ಬಸ್ ಸೇವೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ರಸ್ತೆಯನ್ನು ವಿಸ್ತರಿಸಲಾಗಿದೆ.
ಮನಮೋಹಕ ಪ್ರಕೃತಿ ಸವಿಯುವ ಅವಕಾಶ
ಈ ಬಸ್ ಮಾರ್ಗವು ಮನಾಲಿ-ಲೇಹ್ ಹೆದ್ದಾರಿ ಮೂಲಕ ಸಾಗಲಿದೆ. ಈ ಮಾರ್ಗದಲ್ಲಿ ಪ್ರಕೃತಿ ಮನಮೋಹಕವಾಗಿದ್ದು, ನೋಡುಗರಿಗೆ ರಸಾನುಭವ ಉಣಿಸಲಿದೆ. ಹಿಮಾಲಯ ಪರ್ವತ ಶ್ರೇಣಿಗಳ ಮೂಲಕ ಹಾದುಹಾಗುವ ಈ ಮಾರ್ಗವು, ಬರಲಚಾ ಪಾಸ್, ನಕೀಲ ಪಾಸ್, ತಗ್ಲಾಂಗ್ ಲಾ ಪಾಸ್ ಸೇರಿದಂತೆ ಅನೇಕ ಮಾರ್ಗಗಳ ಮೂಲಕ ಸಾಗಲಿದೆ. ತಗ್ಲಾಂಗ್ ಲಾ ಪಾಸ್ ಸಮುದ್ರ ಮಟ್ಟದಿಂದ 17,582 ಅಡಿ ಎತ್ತರದಲ್ಲಿದೆ.
ಪ್ರಯಾಣದ ಸಮಯ
ಪ್ರತಿ ದಿನ ಮಧ್ಯಾಹ್ನ 3.30ಕ್ಕೆ ದೆಹಲಿ ಅಂತಾರಾಜ್ಯ ಬಸ್ ನಿಲ್ದಾಣದಿಂದ ಹೊರಡುವ ಬಸ್, ಮಾರ್ಗಮಧ್ಯೆ ಕಿಲಾಂಗ್‌ನಲ್ಲಿ ಹಾಲ್ಟ್ ಆಗಲಿದ್ದು, ಮಾರನೇ ದಿನ ಸಂಜೆ 6 ಗಂಟೆಗೆ ಲೇಹ್ ತಲುಪಲಿದೆ. ಸುಖಾಸನಗಳು, ಹವಾನಿಯಂತ್ರಿತ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆಯೂ ಬಸ್‌ನಲ್ಲಿರಲಿವೆ.
……………….
ಬಸ್ ಟಿಕೆಟ್ ದರವೆಷ್ಟು?– 1,500 ರೂ.
ದೆಹಲಿಯಿಂದ ಲೇಹ್‌ಗೆ ಇರುವ ದೂರ– 1,072 ಕಿ.ಮೀ.
ತಗ್ಲಾಂಗ್ ಲಾ ಪಾಸ್ ಎಷ್ಟು ಎತ್ತರದಲ್ಲಿದೆ?- 17,582 ಅಡಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttar Pradesh: ಮಗಳ ಮದುವೆಗೆ ಕೂಡಿಟ್ಟ 18 ಲಕ್ಷ ರೂ. ಗೆದ್ದಲು ಪಾಲು!

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್ ಗಡ್ಕರಿ

Cable TV service ಎಂಎಸ್‌ಒಗಳಿಗೆ 10 ವರ್ಷ ಲೈಸನ್ಸ್: ಕೇಂದ್ರ ಸರಕಾರ

US aims ಭಾರತೀಯರಿಗೆ 10 ಲಕ್ಷಕ್ಕೂ ಅಧಿಕ ಅಮೆರಿಕದ ವಲಸೆರಹಿತ ವೀಸಾ ವಿತರಣೆ
MUST WATCH
ಹೊಸ ಸೇರ್ಪಡೆ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ; ಪ್ರತಿಕೃತಿ ದಹಿಸಿ ಪ್ರತಿಭಟನೆ

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ