ಮುನಿರತ್ನಗೆ ಕಣ್ಣೀರು ಹಾಕುವುದು, ಹಾಕಿಸುವುದು ಚೆನ್ನಾಗಿ ಗೊತ್ತಿದೆ : ಡಿಕೆ ಸುರೇಶ್
Team Udayavani, Oct 28, 2020, 2:34 PM IST
ಬೆಂಗಳೂರು: ರಾಜ ರಾಜೇಶ್ವರೀ ನಗರ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ಮುನಿರತ್ನ ಬಗ್ಗೆ ಮಾತನಾಡಿದ್ದು ಮುನಿರತ್ನ ತಾಯಿ ಬಗ್ಗೆ ಕೈ ನಾಯಕರು ಮಾತನಾಡಿದ್ದಾರೆ ಅಂತ ಕಣ್ಣಿರು ಸುರಿಸಿದ ಮುನಿರತ್ನ ವಿಚಾರವಾಗಿ ಮಾತನಾಡಿದ ಡಿಕೆ ಸುರೇಶ್ ನಿರ್ಮಾಪಕರಿಗೆ ಕಣ್ಣೀರು ಹಾಕುವುದು.. ಹಾಕಿಸುವುದು ಚೆನ್ನಾಗಿ ಗೊತ್ತಿದೆ.. ಯಾರ ಬಳಿ ಬೇಕಿದ್ರು ಕಣ್ಣೀರು ಹಾಕಿಸುತ್ತಾರೆ.. ಅಲ್ಲದೆ ಜೋಡಿಸುವುದರಲ್ಲಿ ಕಟ್ ಮಾಡುವುದರಲ್ಲಿ ಅವರಿಗೆ ಹೇಳಿ ಕೊಡಬೇಕಾಗಿಲ್ಲ.. ಇವತ್ತು ಮತ್ತೆ ಡ್ರಾಮ ಶುರು ಮಾಡಿದ್ದಾರೆ ಎಂದು ಮುನಿರತ್ನಗೆ ಟಾಂಗ್ ನೀಡಿದ್ದಾರೆ.
ಜ್ಞಾನ ಭಾರತಿ ವಾರ್ಡ್ ಲ್ಲಿ ಸಂಸದ ಡಿಕೆ ಸುರೇಶ್ ಪ್ರಚಾರದ ವೇಳೆ ಮಾತನಾಡಿದ ಅವರು ಮುನಿರತ್ನ ಕಣ್ಣೀರು ಹಾಕಿದ ವಿಚಾರವಾಗಿ ಮಾತನಾಡಿದ ಸಂಸದ, ಈ ಹಿಂದೆ ನನ್ನ ತಾಯಿ, ನನ್ನ ಉಸಿರು, ನನ್ನ ರಕ್ತ ಕಾಂಗ್ರೆಸ್ ಅಂತ ಹೇಳಿದವರು ಮುನಿರತ್ನ, ನೀವು ನಿರ್ಮಾಪಕರು ಯಾರನ್ನ ಬೇಕಾದ್ರು ಕಣ್ಣೀರು ಹಾಕಿಸ್ತೀರಾ.ಯಾರನ್ನ ಬೇಕಾದ್ರು ನಗಿಸ್ತೀರಾ.. ಮುನಿರತ್ನ ಪಕ್ಷ ಬಿಟ್ಟು ತಾಯಿಗೆ ದ್ರೋಹ ಮಾಡಿದ್ರು ಅಂತ ನಾನು ಸಹ ಅವರ ಬಗ್ಗೆ ಮಾತನಾಡಿದ್ದೇನೆ..ಅವರೇ ಹೇಳಿದ್ದಾರೆ ನನ್ನ ತಾಯಿ ಕಾಂಗ್ರೆಸ್ ಅಂತ.
ಇದನ್ನೂ ಓದಿ:ಭಾರತೀಯ ವಾಯುಪಡೆಗೆ ಮತ್ತಷ್ಟು ಆನೆಬಲ: ನ.5ರಂದು ಮತ್ತೆ 3 ರಫೇಲ್ ಭಾರತಕ್ಕೆ ಆಗಮನ
ಅವರ ರಕ್ತ ಒಂದು ವರ್ಷದ ಹಿಂದೆ ಕೆಂಪು ಈಗ ಕೇಸರಿ ಆಗಿದೆ..ಇದು ಪಕ್ಷದ ವಿಚಾರ ಮಾತನಾಡಿದ್ದೇವೆ ಅಷ್ಟೇ ವೈಯುಕ್ತಿಕ ವಿಚಾರಗಳು ಯಾರು ಮಾತನಾಡಿಲ್ಲ ನಾವು ಜವಾಬ್ದಾರಿ ಸ್ಥಾನದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.
ಆರ್ ಆರ್ ನಗರದಲ್ಲಿ ಜೆಡಿಎಸ್ ಬಿಜೆಪಿ ನಡುವೆ ಫೈಟ್ ಇದೆ ಅನ್ನೋ ಆಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿದ ಡಿಕೆ ಸುರೇಶ್ ಈಗ ನಾನು ಮಾತನಾಡಲ್ಲ ಈಗ ಬರೀ ಮುನಿರತ್ನ ಕುಸುಮಾ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದ ಅವರು ಮೂರನೇ ತಾರೀಖು ಗೊತ್ತಾಗುತ್ತೆ, ಆಶೋಕ್ ಹಾಗು ಒಕ್ಕಲಿಗ ಸಚಿವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿ.ಟಿ.ರವಿ ನಕಾರ
ಕಳ್ಳತನದ ವೇಳೆ ಎಚ್ಚರಗೊಂಡ ಮಾಲೀಕ : ಓಡುವ ಭರದಲ್ಲಿ ಮನೆಯ ಮೇಲಿಂದ ಬಿದ್ದು ಸಾವನ್ನಪ್ಪಿದ ಕಳ್ಳ
ತಾಂಬೂಲ ಪ್ರಶ್ನೆಗಿಂತ ಹೆಚ್ಚಿನ ತೀರ್ಮಾನ ಕೇಶವ ಕೃಪಾದಲ್ಲಿ: ಹೆಚ್ ಡಿಕೆ
ಚಿಕ್ಕಮಗಳೂರು: ತಂದೆ – ಮಗನ ಪಬ್ ಜಿ ಜಗಳ; ತಾಯಿಯ ಕೊಲೆಯಲ್ಲಿ ಅಂತ್ಯ
ಬೆಂಗಳೂರಿನಲ್ಲಿ ಐಕಿಯ ಸ್ಟೋರ್:ಸಿಇಓ ಜೆಸ್ಪರ್ ಬ್ರಾಡಿನ್ ಜತೆ ಸಿಎಂ ಚರ್ಚೆ