ಡಿಕೆಶಿ ಇಂದಿನ ವಿಚಾರಣೆ ಅಂತ್ಯ: ಸೋಮವಾರಕ್ಕೆ ಮುಂದೂಡಿಕೆ
Team Udayavani, Aug 31, 2019, 8:57 PM IST
ಬೆಂಗಳೂರು : ಡಿಕೆ ಶಿವಕುಮಾರ್ ವಿಚಾರಣೆಯನ್ನು ನಡೆಸುತ್ತಿರುವ ಇಡಿ ಅಧಿಕಾರಿಗಳು ಇಂದು ಬೆಳಿಗ್ಗೆ 11 ರಿಂದ ರಾತ್ರಿ 7 ಗಂಟೆಯ ವರೆಗೆ ವಿಚಾರಣೆ ನಡೆಸಿ ಮತ್ತೆ ಸೋಮವಾರ 11 ಗಂಟೆಗೆ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ.
ಸೋಮವಾರ ಹಬ್ಬವಿದೆ ಎಂದರೂ ಕೇಳದ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.
ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ದಿಲ್ಲಿಯ ಮನೆಯಲ್ಲಿ 8.59 ಕೋಟಿ ರೂ. ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಅವರನ್ನು ಶುಕ್ರವಾರ ಸಂಜೆಯಿಂದ ಇಡಿ ಅಧಿಕಾರಿಗಳು ಬೇರೆ ಬೇರೆ ಆಯಾಮಗಳಲ್ಲಿ ವಿಚಾರಣೆಗಳನ್ನು ನಡೆಸಿದ್ದರು.