ಕೋವಿಡ್ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್ಗೂ ಮದುವೆ!
Team Udayavani, May 31, 2020, 6:34 PM IST
ಲಂಡನ್: ಹಲವು ವರ್ಷಗಳಿಂದ ಆ ವೈದ್ಯ ಮತ್ತು ನರ್ಸ್ ಪ್ರೀತಿಸುತ್ತಿದ್ದರು. ಈ ವರ್ಷ ಹಸೆಮಣೆ ಏರುವುದು ಅಂತಲೂ ನಿರ್ಧರಿಸಿದ್ದರು. ಆದರೆ ಅದಕ್ಕೆ ಅಡ್ಡಿಯಾಗಿದ್ದು ಕೋವಿಡ್!
ಆದರೂ ಅವರು ಮದುವೆಯಾಗುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಬಂಧುಮಿತ್ರರಿಗೆ ಹೇಳಿ, ಗೌಜಿಯ ಮದುವೆಯಾಗಬೇಕಾಗಿದ್ದವರು ಸರಳವಾಗಿ ಮದುವೆಯಾದರು.
ಇದು ಶ್ರೀಲಂಕಾ ಮೂಲಕ ವೈದ್ಯ ಅನ್ನಾಲನ್ ನವರತ್ನಂ (30) ಮತ್ತು ಜಾನ್ ಟಿಪ್ಪಿಂಗ್ (34) ಅವರ ಕಥೆ.
ಇಲ್ಲಿನ ಸೈಂಟ್ ಥಾಮಸ್ ಆಸ್ಪತ್ರೆಯ ವೈದ್ಯ-ನರ್ಸ್ ಮದುವೆಗೆ ಶ್ರೀಲಂಕಾ ಮತ್ತು ಉತ್ತರ ಐರೆಲಂಡ್ನಿಂದ ಕುಟುಂಬದವರು ಬರಬೇಕಿತ್ತು. ಆದರೆ ಬರಲಾಗಲಿಲ್ಲ. ಅಷ್ಟೇ ಅಲ್ಲ. ಒಂದು ಹಂತದಲ್ಲಿ ಮದುವೆಯೇ ರದ್ದಾಗುತ್ತದೆ ಎಂಬಲ್ಲಿವರೆಗೆ ಬಂದಿತ್ತಂತೆ. ಕಾರಣ ಇಬ್ಬರೂ ಕೋವಿಡ್ ವಿರುದ್ಧ ಹೋರಾಟದಲ್ಲಿದ್ದರು. ರೋಗಿಗಳ ಆರೈಕೆ-ಚಿಕಿತ್ಸೆಯಲ್ಲೇ ನಿರತರಾಗಿದ್ದರು. ಆದರೂ ಸ್ವಲ್ಪ ಬಿಡುವು ಮಾಡಿಕೊಂಡು ಆಸ್ಪತ್ರೆಯದ್ದೇ ಪುಟ್ಟ ಹಾಲ್ನಲ್ಲಿ ಮದುವೆಯಾಗಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳ ಸೇವೆಯೊಂದಿಗೆ ಇವರು ಮದುವೆಯಾದ ಸುದ್ದಿ ಇದೀಗ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು