ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯ ನಿರೀಕ್ಷೆ


Team Udayavani, Jan 1, 2021, 7:13 AM IST

ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯ ನಿರೀಕ್ಷೆ

ತಾಂತ್ರಿಕ ಉದ್ಯಮವು ಕ್ಷಿಪ್ರ ಬೆಳವಣಿಗೆಗಳ ಸರಪಳಿಯಲ್ಲಿ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಮುಂದಿನ 12 ತಿಂಗಳುಗಳಲ್ಲಿ ನಿಮ್ಮ ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ತಂತ್ರಜ್ಞಾನ ಯಾವ ಬದಲಾವಣೆಗಳನ್ನು ತರಲಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಎಡ್ಜ್ ಕಂಪ್ಯೂಟಿಂಗ್‌
ತಮಗೆ ಬೇಕಾದ ಮಾಹಿತಿಗಳನ್ನು ಕಂಪ್ಯೂಟರ್‌ನಲ್ಲೇ ತುಂಬಿಡಲಾಗುತ್ತದೆ. ಈ ಹಿಂದೆ ಇದೇ ವ್ಯವಸ್ಥೆ ಹೆಚ್ಚು ಪ್ರಚಲಿತದಲ್ಲಿತ್ತು. ಅದರ ಬಳಿಕ ಬಂದ ಕ್ಲೌಡ್‌ ಕಂಪ್ಯೂಟಿಂಗ್‌ ವ್ಯವಸ್ಥೆ ಇದನ್ನು ಮತ್ತಷ್ಟು ಸುಲಭವನ್ನಾಗಿಸಿತು. ಈ ತಂತ್ರಜ್ಞಾನವನ್ನು ಬಳಸಿ ನಮಗೆ ಬೇಕಾದ ತಂತ್ರಾಂಶ ಹಾಗೂ ಮಾಹಿತಿಗಳನ್ನೆಲ್ಲ ನಮ್ಮದೇ ಕಂಪ್ಯೂಟರಿನಲ್ಲಿ ಸಂಗ್ರಹಿಸಿಡುವ ಬದಲು, ಹೆಚ್ಚು ಸಕ್ಷಮವಾದ ಬೇರೊಂದು ಸ್ಥಳದಲ್ಲಿ ಅದನ್ನೆಲ್ಲ ಉಳಿಸಿ ನಮಗೆ ಬೇಕಾದಾಗ ಅಂತರ್ಜಾಲದ ಮೂಲಕ ಪಡೆದು ಬಳಸಿ ಕೊಳ್ಳುವುದು ಈ ಪರಿಕಲ್ಪನೆಯ ಹೂರಣ. ಉದಾ: ಗೂಗಲ್‌ ಡ್ರೈವ್‌. ಇಂತಹ ಹಲವು ಕ್ಲೌಡ್‌ ವ್ಯವಸ್ಥೆಗಳಿವೆ.

ಇದರಲ್ಲಿನ ಕೆಲವು ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲು ಹೊರಟ ತಜ್ಞರು ಹೊಸದೇ ಆದ ಇನ್ನೊಂದು ಪರಿಕಲ್ಪನೆಯನ್ನು ರೂಪಿಸಿದ್ದಾರೆ. ಆ ಪರಿಕಲ್ಪನೆಯ ಹೆಸರೇ ಎಡ್ಜ್ ಕಂಪ್ಯೂಟಿಂಗ್‌. ಮಾಹಿತಿ ಸಂಸ್ಕರಣೆಯನ್ನು ಹಿಂದಿನ ಕಾಲದಂತೆ ಆಯಾ ಸಾಧನದಲ್ಲೇ ಮಾಡದೆ, ಕ್ಲೌಡ್‌ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ನೆಚ್ಚಿಕೊಳ್ಳದೆ ಮಧ್ಯಮ ಮಾರ್ಗ ಕಂಡುಕೊಳ್ಳುವ ಪ್ರಯತ್ನ ಇದು. ಒಂದು ಜಾಲಕ್ಕೆ ಸಂಬಂಧಿಸಿದ ಮಾಹಿತಿಯನ್ನೆಲ್ಲ ಆ ಜಾಲದ ಅಂಚಿನಲ್ಲೇ (ಎಡ್ಜ್) ಸಂಸ್ಕರಿಸುವುದರಿಂದ ಇದಕ್ಕೆ ಎಡ್ಜ್ ಕಂಪ್ಯೂಟಿಂಗ್‌ ಎಂದು ಹೆಸರು. ಒಟ್ಟಿನಲ್ಲಿ ಎಡ್ಜ್ ಕಂಪ್ಯೂಟಿಂಗ್‌ ಪರಿಕಲ್ಪನೆ ಐಟಿ ಲೋಕಕ್ಕೆ ಹೊಸತಾಗಿದೆ. 2021ರಲ್ಲಿ ಅದು ಹೊಸ ಎತ್ತರ ಪಡೆಯಲಿದೆ.

ವರ್ಚುವಲ್‌ ರಿಯಾಲಿಟಿ
ಈ ವರ್ಷ ನಾವು ಗಮನಿಸಬೇಕಾದ ಮತ್ತೂಂದು ಕ್ಷೇತ್ರ ಎಂದರೆ ವರ್ಚುವಲ್‌ ರಿಯಾಲಿಟಿ ಅಥವಾ ಎಆರ್‌. ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಇದರ ಪಾತ್ರ ಮತ್ತಷ್ಟು ವಿಸ್ತರಿಸಲಿದೆ. ಎಆರ್‌ ಅನ್ನು ವಿಶೇಷವಾಗಿ ಮನೋರಂಜನೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಈಗಾಗಲೇ ಬಳಸಲಾಗುತ್ತದೆ. ಸಿನೆಮಾ ಶೂಟಿಂಗ್‌ಗಳ ಸಂದರ್ಭ ತಂತ್ರಜ್ಞಾನಗಳು ಹೆಚ್ಚು ನೆರವಿಗೆ ಬರುತ್ತವೆ.

ಸೈಬರ್‌ ಸುರಕ್ಷೆ
ಸೈಬರ್‌ ಸುರಕ್ಷೆಯು 2021ರಲ್ಲಿ ಸುಧಾರಣೆ ಕಾಣಲಿದೆ. ಮುಖ್ಯವಾಗಿ ಕೋವಿಡ್‌ 19 ಬಳಿಕ ಕಾಣಿಸಿ ಕೊಂಡ ಕೆಲವು ಧನಾತ್ಮಕ ಬೆಳವಣಿಗೆಗಳಲ್ಲಿ ತಂತ್ರಜ್ಞಾನ ಕ್ಷೇತ್ರ ಹೆಚ್ಚು ಬೇಡಿಕೆಗಳನ್ನು ಸಂಪಾದಿಸಿಕೊಂಡಿವೆ. ಈ ನಿಟ್ಟಿನಲ್ಲಿ ಸುರಕ್ಷೆ ಪ್ರತಿಯೊಬ್ಬರ ಆದ್ಯತೆಯಾಗಿರುವ ಕಾರಣ ಈ ಕ್ಷೇತ್ರದಲ್ಲಿ ಒಂದಷ್ಟು ಪೂರಕ ಕ್ರಮಗಳು ನಡೆಯಲಿವೆ. ಈಗ ಆನ್‌ಲೈನ್‌ ಬ್ಯಾಕಿಂಗ್‌ ಕ್ಷೇತ್ರದಲ್ಲಿನ ವಂಚನೆಯನ್ನು ತಡೆಯಲು ಇದು ಅವಶ್ಯವಾಗಿದ್ದು, ಈ ವರ್ಷದಲ್ಲಿ ಇನ್ನಷ್ಟು ಸುಧಾರಣೆಯಾಗಲಿದೆ.

5ಜಿ ತಂತ್ರಜ್ಞಾನ
ಇದು 2019ರಲ್ಲಿ ಭಾರೀ ಸದ್ದು ಮಾಡಿದ ಕ್ಷೇತ್ರ. ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಈಗಾಗಲೇ 5ಜಿ ತಂತ್ರ ಜ್ಞಾನದ ಬಳಕೆ ಲಭ್ಯವಿದ್ದರೂ ಭಾರತಕ್ಕೆ ಮಾತ್ರ ಅದು ಇನ್ನೂ ಬಂದಿಲ್ಲ. ಸದ್ಯದ ಮಾಹಿತಿಗಳ ಪ್ರಕಾರ 2021ರಲ್ಲಿ 5ಜಿ ಸೇವೆ ಭಾರತೀಯರಿಗೆ ಲಭ್ಯವಾಗಲಿದೆ. ಜಿಯೋ 5ಜಿ ಸೇವೆಯನ್ನು ಲಾಂಚ್‌ ಮಾಡಲಿದೆ. 5ಜಿ ಸೇವೆ ಕಾರ್ಯರೂಪಕ್ಕೆ ಬಂದ ಬಳಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುವ ನಿರೀಕ್ಷೆ ಇದೆ. 5ಜಿ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆಗಳ ಸಾಧ್ಯತೆಗಳಿವೆ.

ಟೆಲಿಗ್ರಾಂಗೆ ಇನ್ನು ಹಣ ಪಾವತಿ!
ಟೆಲಿಗ್ರಾಮ್‌ ಆ್ಯಪ್ಲಿಕೇಶನ್‌ ಪಾವತಿ ಸೇವೆಯನ್ನು 2021ರಲ್ಲಿ ಪ್ರಾರಂಭಿಸಲಿದೆ. ಈಗ ಕಂಪೆನಿಯ ಖರ್ಚು ಗಳಿಗಾಗಿ ಅವರು ತಮ್ಮ ವೈಯಕ್ತಿಕ ಉಳಿತಾಯದಿಂದ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ಈಗ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಕಂಪೆನಿಗೆ ಹಣದ ಅಗತ್ಯವಿರುತ್ತದೆ. ವಿಶ್ವಾದ್ಯಂತ 500 ಮಿಲಿಯನ್‌ (50 ಕೋಟಿ) ಸಕ್ರಿಯ ಬಳಕೆದಾರರಿದ್ದಾರೆ.

ಮುಂದಿನ ವರ್ಷಗಳಿಂದ ಕೆಲವು ವಿಶೇಷ ಫೀಚರ್‌ಗಳನ್ನು ತನ್ನ ಬಳಕೆದಾರರಿಗೆ ನೀಡಲಿದೆ. ಈ ಕೆಲವು ವೈಶಿಷ್ಟಗಳು ಯಾವ ಬಳಕೆದಾರರಿಗೆ ಪ್ರೀಮಿಯಂ ಆಗಿರುತ್ತದೆ. ಅದಕ್ಕೆ ಪಾವತಿಸಬೇಕಾಗುತ್ತದೆ. ವೀಡಿ ಯೋಗಳು ಮತ್ತು ವೆಬ್‌ ಸರಣಿಗಳನ್ನು ಡೌನ್‌ಲೋಡ್‌ ಮಾಡಲು ಹೆಚ್ಚಿನ ಬಳಕೆದಾರರು ಟೆಲಿಗ್ರಾಮ್‌ ಆ್ಯಪ್ಲಿಕೇಶನ್‌ ಬಳಸುತ್ತಿದ್ದಾರೆ.

ಕೃತಕ ಬುದ್ಧಿಮತ್ತೆ (ಎಐ)
ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ ಈಗ ಸುದ್ದಿಯಲ್ಲಿರುವ ತಂತ್ರಜ್ಞಾನ ಅನ್ವೇಷಣೆ. ಆದರೆ ನಮ್ಮ ದೈನಂದಿನ ಜೀವನದಲ್ಲಿ ಅದಿನ್ನೂ ಅಷ್ಟೊಂದು ಪ್ರಭಾವ ಬೀರಿಲ್ಲ. 2021ರಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಯಥೇತ್ಛವಾಗಿ ಬೆಳೆಯಲಿವೆ. ಎಲ್ಲ ತಾಂತ್ರಿಕ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಈ ವೈಶಿಷ್ಟ್ಯ ಕಾಣಿಸಿಕೊಳ್ಳಲಿವೆ. ಇದು ಮುಂಬರುವ ದಿನಗಳಲ್ಲಿ ಮನುಷ್ಯನ ಕೆಲಸಗಳನ್ನು ಕಡಿಮೆ ಮಾಡಬಹುದಾಗಿದೆ. ಕೋವಿಡ್‌ ಸಂದರ್ಭ ಕೆಲವು ಆಸ್ಪತ್ರೆಗಳಲ್ಲಿ ಕೃತಕ ಬುದ್ಧಿಮತ್ತೆಯ ನರ್ಸ್‌ಗಳು ಕರ್ತವ್ಯ ನಿರ್ವಹಿಸಿದ್ದರು. ಆದರೆ ಎಐನ ಕೆಲವು ಅಪಾಯಗಳ ಬಗ್ಗೆ ಎಲೋನ್‌ ಮಸ್ಕ್ ಅವರಂಥ ಪ್ರಮುಖ ತಂತ್ರಜ್ಞರು ಕಳವಳ ವ್ಯಕ್ತಪಡಿಸಿದ್ದರು. 2021ರಲ್ಲಿ ಎಐ ತಂತ್ರಜ್ಞಾನ ಸಾರ್ವತ್ರಿಕವಾಗಿ ಬಳಕೆಯಾಗುವ ಎಲ್ಲ ಸಾಧ್ಯತೆಗಳಿವೆ.

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.