ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನಕಲಿ ಪೇಸ್ ಬುಕ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ
Team Udayavani, Sep 16, 2020, 7:54 PM IST
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಪ್ರಸನ್ನ ಅವರ ಹೆಸರಿನಲ್ಲಿ ನಕಲಿ ಪೇಸ್ ಬುಕ್ ಖಾತೆ ತೆರೆದು, ಅದರ ಮೂಲಕ ಚಾಟ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಸ್ವತಃ ಪಿಎಸ್ಐ ಪ್ರಸನ್ನ ಅವರೇ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದು, ಸ್ನೆಹಿತರೇ ನನ್ನ ಹೆಸರಿನಲ್ಲಿ ಯಾರೋ ಫೇಕ್ ಅಕೌಂಟ್ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ದಯವಿಟ್ಟು ಅದನ್ನ ಅಕ್ಸೆಪ್ಟ್ ಮಾಡಬೇಡಿ ಮತ್ತು ಅವರಿಂದ ಮೊಸಕ್ಕೆ ಒಳಗಾಗಬೇಡಿ ನಿಮಗೆ ಯಾವುದಾದರು ಮೆಸೇಜ್ ಕಳುಹಿಸಿದರೆ ನನ್ನ ಗಮನಕ್ಕೆ ತನ್ನಿ ಎಂದವರು ಹೇಳಿದ್ದಾರೆ.
ನಕಲಿ ಪೇಸ್ ಬುಕ್ ಖಾತೆಯ ಮೂಲಕ ಮೆಸೆಂಜರ್ ನಲ್ಲಿ ಸ್ನೇಹಿತರಿಗೆ ಮೆಸೇಜ್ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಅನುಮಾನಗೊಂಡ ಸ್ನೇಹಿತರು ಪ್ರಸನ್ನ ಅವರಿಗೆ ವಿಷಯ ತಿಳಿಸಿದ್ದು, ಕೂಡಲೇ ಅವರು ಫೇಸ್ ಬುಕ್ ನ ನಕಲಿ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ. ಈಗಾಗಲೇ ಅವರು ನಕಲಿ ಫೇಸ್ ಬುಕ್ ಖಾತೆ ಕುರಿತು ಪ್ರಕರಣವನ್ನು ದಾಖಲಿಸಿದ್ದಾರೆ.