ನವರಾತ್ರಿ; ಮನೆಯಲ್ಲೇ ಕೇವಲ 5 ನಿಮಿಷದಲ್ಲಿ ಟ್ರೆಂಡಿ ಹೇರ್​ ಸ್ಟೈಲ್ ಮಾಡಿಕೊಳ್ಳಿ …

ಇಲ್ಲಿದೆ ಸುಲಭ ವಿಧಾನಗಳು

ಶ್ವೇತಾ.ಎಂ, Sep 27, 2022, 5:40 PM IST

thumb hair style web exclusive

ನಿಮ್ಮ ಕೇಶ ವಿನ್ಯಾಸವು  ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಮುಖ  ಮತ್ತು ಕೂದಲಿನ ವಿನ್ಯಾಸದ ಪ್ರಕಾರ, ಯಾವ ಕೇಶ ವಿನ್ಯಾಸವು ನಮಗೆ ಸರಿ ಹೊಂದುತ್ತದೆ ಎಂಬುದನ್ನು ನೋಡಿ ನಾವು ಹೇರ್​ ಸ್ಟೈಲ್ ಮಾಡಿಕೊಳ್ಳುತ್ತೇವೆ. ಈಗಾಗಲೇ ನವರಾತ್ರಿ ಸಂಭ್ರಮ ಆರಂಭವಾಗಿದೆ. ಪ್ರತಿದಿನ ಒಂದಲ್ಲಾ ಒಂದು ಕಾರ್ಯಕ್ರಮಗಳಿರುತ್ತದೆ. ಅದರಲ್ಲೂ 9 ದಿನವೂ ವಿವಿಧ ಬಣ್ಣದ ಉಡುಗೆ ಧರಿಸಿ ಹಬ್ಬ ಮಾಡುವವರಾಗಿದ್ದರೆ, ದಿನವೂ  ಸುಂದರವಾಗಿ ರೆಡಿಯಾಗಬೇಕಾಗುತ್ತದೆ. ಚೆಂದದ ಸೀರೆ  ಅಥವಾ ಬಟ್ಟೆ ಹಾಕಿ, ಮೇಕಪ್ ಮಾಡಿಕೊಂಡ ಮೇಲೆ , ಹೇರ್​ ಸ್ಟೈಲ್  ಕೂಡ ಚೆನ್ನಾಗಿರಬೇಕು ಅಲ್ವಾ? ನಮಗೆ ಸೂಕ್ತವಾಗುವ ಹೇರ್ ಸ್ಟೈಲ್ ಮಾಡಿಕೊಂಡಿಲ್ಲ ಎಂದರೆ ನಾವು ಎಷ್ಟು ರೆಡಿಯಾದರೂ ಪ್ರಯೋಜನ ಇಲ್ಲದಂತೆ.

ಹಬ್ಬದ ದಿನದಂದು ವಿಶೇಷ ಪೂಜೆ ಪುನಸ್ಕಾರಗಳು ಇರುವುದರಿಂದ ಹೆಚ್ಚು ಹೊತ್ತು ಕುಳಿತು ಹೇರ್​ಸ್ಟೈಲ್ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಹಾಗಾಗಿ ಕೇವಲ 5 ನಿಮಿಷದಲ್ಲಿ ಸೂಪರ್ ಟ್ರೆಂಡಿ ಹೇರ್​ ಸ್ಟೈಲ್ ಮಾಡಿಕೊಳ್ಳೋದು ಹೇಗೆ ಎಂಬುದನ್ನು ತಿಳಿಕೋಳ್ಳೋಣ…

5 ನಿಮಿಷದಲ್ಲಿ ಚೆಂದದ ಹೇರ್​ ಸ್ಟೈಲ್ ಮಾಡಿ;

ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಸಿಂಪಲ್ ಆಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿ ಮೊದಲು 2 ರಿಂದ ಮೂರು 3 ಹೇರ್ ಪಿನ್ ತೆಗೆದುಕೊಂಡು, ಬಫ್​​ ಅನ್ನು ಕೂದಲಿಗೆ ಹಾಕಿ. ನಂತರ ಲೆಫ್ಟ್​ ಹಾಗೂ ರೈಟ್ ಸೈಡ್​ನಲ್ಲಿ ಬಾಚಿಕೊಂಡು ಅದನ್ನು ನೀಟಾಗಿ ಕೂರಿಸಿ ಹೇರ್​ ಪಿನ್ ಹಾಕಿ.

ನಿಮಗೆ  ಫ್ರೆಂಟ್​ ಹೇರ್ ಬೇಕು ಅಂದರೆ ಬಿಡಬಹುದು. ಇಲ್ಲದಿದ್ದಲ್ಲಿ ಹಾಗೆಯೇ ಹಾಕಬಹುದು. ಇದು ನಿಮಗೆ ಫ್ರೊಫೆಷನಲ್ ಲುಕ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೊಂದು ಬಹಳ ಸಿಂಪಲ್ ಹೇರ್​ ಸ್ಟೈಲ್ ಆಗಿದ್ದು, ಸಮಯ ಕೂಡ ಹೆಚ್ಚು ಬೇಕಿಲ್ಲ. ಮುಖ್ಯವಾಗಿ ಈ ಹೇರ್​ ಸ್ಟೈಲ್​ ನಿಮಗೆ ಗೌನ್ ಧರಿಸಿದಾಗ ಸೂಟ್​ ಆಗುತ್ತೆ, ಆದರೆ ಸೀರೆಯ ಮೇಲೆ ಸೂಪರ್ ಲುಕ್ ನೀಡುತ್ತದೆ.

ಜಿಗ್ ಜ್ಯಾಗ್​ ಹೇರ್​ ಸ್ಟೈಲ್ ಹಬ್ಬಕ್ಕೆ ಸೂಟ್​ ಆಗುತ್ತೆ:

ಮತ್ತೊಂದು ಸುಲಭವಾದ ಮತ್ತು ಟ್ರೆಂಡಿ ಹೇರ್​ ಸ್ಟೈಲ್ ಎಂದರೆ ಜಿಗ್ ಜ್ಯಾಗ್​ ಹೇರ್​ ಸ್ಟೈಲ್​. ಇದು ನೋಡಿದಾಗ ಸ್ವಲ್ಪ ಕಷ್ಟ ಎನಿಸಬಹುದು, ಆದರೆ ಇದನ್ನು ಮಾಡಿಕೊಳ್ಳುವುದು ಬಹಳ ಸುಲಭ, ಕೇವಲ 3 ನಿಮಿಷದಲ್ಲಿ ಇದನ್ನು ಮಾಡಬಹುದು. ಆದರೆ ನಿಮಗೆ ಹೇರ್​ ಸ್ಟೈಲ್ ಮಾಡಿಕೊಂಡು ಅಭ್ಯಾಸವಿಲ್ಲದಿದ್ದರೆ, ಸ್ವಲ್ಪ ಕಷ್ಟವಾಗಬಹುದು.  ಮೊದಲು ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ. ಸಿಕ್ಕು ಇಲ್ಲದಂತೆ ನೋಡಿಕೊಳ್ಳಿ.

ನಂತರ ಮುಂದಿನ ಸ್ವಲ್ಪ ಕೂದಲನ್ನು ತೆಗೆದುಕೊಂಡು ಹಿಂದೆ ಹಾಕಿ ಹೇರ್ ಪಿನ್ ಹಾಕಿ. ನಂತರ ಹಿಂದಿನ ಸ್ವಲ್ಪ ಕೂದಲನ್ನು ಮುಂದೆ ಹಾಕಿ. ಹೀಗೆ ಒಂದು ಮುಂದೆ, ಇನ್ನೊಂದು ಹಿಂದೆ ಜಿಗ್ ಜ್ಯಾಗ್ ರೀತಿ ಹಾಕಿ. ನಂತರ ಮುಂದೆ ಉಳಿದಿರುವ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ.

ಬಳಿಕ ಕೂದಲನ್ನು ಒಂದು ಸೈಡ್​ಗೆ ಹಾಕಿ ನೀಟಾಗಿ ಪಿನ್ ಮಾಡಿ ಸಾಕು.  ಈ ಲುಕ್ ನಿಮ್ಮ ಸೀರೆ, ಚೂಡಿದಾರ ಹೀಗೆ ಎಲ್ಲಾ ಬಟ್ಟೆಗೂ ಸೂಪರ್ ಆಗಿ ಸೂಟ್​ ಆಗುತ್ತದೆ. ನಿಮ್ಮ ಕೂದಲು ಸುರುಳಿ ಇದ್ದಲ್ಲಿ ಸ್ವಲ್ಪ ಹೇರ್ ಸ್ಟ್ರೈಟನಿಂಗ್ ಮಾಡಿಕೊಳ್ಳುವುದು ಉತ್ತಮ.

ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್‌ ಹೇರ್‌ ಸ್ಟೈಲ್‌:

ನಿಮ್ಮ ಕೂದಲಿನ ವಿನ್ಯಾಸವು ನೈಸರ್ಗಿಕವಾಗಿದ್ದರೆ ಈ ಕೇಶ ವಿನ್ಯಾಸ ನಿಮಗೆ ಸೂಪರ್‌ ಆಗಿ ಹೊಂದುತ್ತದೆ. ಇದಕ್ಕೆ ಜಾಸ್ತಿ ಕಷ್ಟ ಪಡಬೇಕಿಲ್ಲ. ಜಸ್ಟ್‌ ಕೂದಲನ್ನು ಅರ್ಧ ಗಂಟು ಹಾಕಿ ಅದನ್ನು ಒಂದು ಸುತ್ತು ಹಾಕಿ ಪಿನ್‌ ಹಾಕಿದರೆ ಮುಗೀತು. ಹಾಫ್‌ ಟ್ವಿಸ್ಟೆಡ್‌ ಮೆಸ್ಸಿ ನಾಟ್‌ ಹೇರ್‌ಸ್ಟೈಲ್‌ ಸಿದ್ಧವಾಗುತ್ತದೆ.

ಹೂಪ್ಡ್ ಲೋ ಬನ್ ಹೇರ್‌ ಸ್ಟೈಲ್‌:

ಈ ಹೇರ್‌ಸ್ಟೈಲ್‌ ಸಾಂಪ್ರದಾಯಿಕ ಬಿಗಿಯಾದ ಬನ್‌ಗೆ ಸವಾಲು ನೀಡುವ ಹಾಗೂ ಅತ್ಯಂತ ಸುಲಭವಾಗಿ ಈ ಕೇಶ ವಿನ್ಯಾಸ ಮಾಡಿಕೊಳ್ಳಬಹುದು. ಈ ಹೂಪ್ಡ್‌ ಲೋ ಬನ್‌ ಹೇರ್‌ಸ್ಟೈಲ್‌ ಬಹಳ ಸಮಯದವರೆಗೆ ತುಂಬಾ ನೀಟಾಗಿ ಇರುತ್ತದೆ ಮತ್ತು ಬಿಸಿಲಿನ ಕಾಲದ ಕಾರ್ಯಕ್ರಮಗಳಿಗೆ ಇದು ಹೇಳಿ ಮಾಡಿಸಿದ ಕೇಶ ವಿನ್ಯಾಸವಾಗಿದೆ.

*ಶ್ವೇತಾ.ಮುಂಡ್ರುಪ್ಪಾಡಿ

ಟಾಪ್ ನ್ಯೂಸ್

ಶಿಕ್ಷಕರ ವರ್ಗಾವಣೆ: ಮೂರು ವರ್ಷ ಸೇವೆ ಸಲ್ಲಿಸಿದವರ ಪರಿಗಣನೆಗೆ ನಿರ್ಧಾರ

ಶಿಕ್ಷಕರ ವರ್ಗಾವಣೆ: ಮೂರು ವರ್ಷ ಸೇವೆ ಸಲ್ಲಿಸಿದವರ ಪರಿಗಣನೆಗೆ ನಿರ್ಧಾರ

ನನಗೆ, ನನ್ನ ಮಗಳಿಗೆ ಇಡಿ ನೋಟಿಸ್‌: ಡಿ.ಕೆ.ಶಿವಕುಮಾರ್‌

ನನಗೆ, ನನ್ನ ಮಗಳಿಗೆ ಇಡಿ ನೋಟಿಸ್‌: ಡಿ.ಕೆ.ಶಿವಕುಮಾರ್‌

ಫುಡ್ ಪಾಯ್ಸನ್‌ ಘಟನೆ: ಓರ್ವ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರಿಕೆ

ಫುಡ್ ಪಾಯ್ಸನ್‌ ಘಟನೆ: ಓರ್ವ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರಿಕೆ

ನಿರ್ವಹಣೆಯಿಲ್ಲದೆ ಸೊರಗುತ್ತಿವೆ ಅಭಿವೃದ್ಧಿ ಹೊಂದಿದ ಕೆರೆಗಳು!

ನಿರ್ವಹಣೆಯಿಲ್ಲದೆ ಸೊರಗುತ್ತಿವೆ ಅಭಿವೃದ್ಧಿ ಹೊಂದಿದ ಕೆರೆಗಳು!

ಬೆಂಗಳೂರಿನ ವ್ಯಕ್ತಿ ಟರ್ಕಿಯಲ್ಲಿ  ಕಣ್ಮರೆ? ಭಾರತದ 10 ಮಂದಿ ಸಿಲುಕಿರುವ ಬಗ್ಗೆ ಮಾಹಿತಿ

ಬೆಂಗಳೂರಿನ ವ್ಯಕ್ತಿ ಟರ್ಕಿಯಲ್ಲಿ ಕಣ್ಮರೆ? ಭಾರತದ 10 ಮಂದಿ ಸಿಲುಕಿರುವ ಬಗ್ಗೆ ಮಾಹಿತಿ

ವಿಜಯೇಂದ್ರಗೆ ಹೊಸ ಹೊಣೆ; ನಾನಾ ಮೋರ್ಚಾಗಳ ಜಿಲ್ಲಾ ಸಮಾವೇಶದ ಸಂಚಾಲಕ ಸ್ಥಾನ

ವಿಜಯೇಂದ್ರಗೆ ಹೊಸ ಹೊಣೆ; ನಾನಾ ಮೋರ್ಚಾಗಳ ಜಿಲ್ಲಾ ಸಮಾವೇಶದ ಸಂಚಾಲಕ ಸ್ಥಾನ

ಗೋವಾದಲ್ಲಿ ಅಖೀಲ ವಿಶ್ವ ಕೊಂಕಣಿ ಸಮ್ಮೇಳನ ಆಯೋಜನೆ: ಡಾ| ಪ್ರಮೋದ್‌ ಸಾವಂತ್‌

ಗೋವಾದಲ್ಲಿ ಅಖೀಲ ವಿಶ್ವ ಕೊಂಕಣಿ ಸಮ್ಮೇಳನ ಆಯೋಜನೆ: ಡಾ| ಪ್ರಮೋದ್‌ ಸಾವಂತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dddsd

ಮರೆಯಾದ ಯಕ್ಷಗಾನ ರಂಗದ ಪರಿಪೂರ್ಣ ಪೋಷಕ ಪಾತ್ರಧಾರಿ ಜಂಬೂರು ರಾಮಚಂದ್ರ ಶಾನುಭೋಗ್

ತ್ವಚೆಯ ಸೌಂದರ್ಯಕ್ಕೂ ಉತ್ತಮ…ಒಂದೆಲಗ ಸೊಪ್ಪಿನಲ್ಲಿದೆ ಹಲವು ಔಷಧೀಯ ಗುಣಗಳು..

ತ್ವಚೆಯ ಸೌಂದರ್ಯಕ್ಕೂ ಉತ್ತಮ…ಒಂದೆಲಗ ಸೊಪ್ಪಿನಲ್ಲಿದೆ ಹಲವು ಔಷಧೀಯ ಗುಣಗಳು..

ಇಡೀ ಜಗತ್ತನ್ನೇ ಬೆದರಿಸಿದ್ದ  ಹಿಟ್ಲರ್ “ಕೆಲವು ವಿಚಾರಗಳಲ್ಲಿ ಹೆದರು ಪುಕ್ಕಲ”ನಾಗಿದ್ದನಂತೆ!

ಇಡೀ ಜಗತ್ತನ್ನೇ ಬೆದರಿಸಿದ್ದ ಹಿಟ್ಲರ್ “ಕೆಲವು ವಿಚಾರಗಳಲ್ಲಿ ಹೆದರು ಪುಕ್ಕಲ”ನಾಗಿದ್ದನಂತೆ!

irula

ಒಲಿದು ಬಂದ ಪದ್ಮ ಪ್ರಶಸ್ತಿ: ಪ್ರಾಚೀನ ದ್ರಾವಿಡ ಪಂಗಡ…ಇರುಲಾ ಹಾವಾಡಿಗರು…

uv-web

ಎರಡೂ ಕೈಗಳಿಂದ ಬರೆಯಬಲ್ಲ ವಿದ್ಯಾರ್ಥಿಗಳನ್ನು ಹೊಂದಿರುವ ದೇಶದ ಏಕೈಕ ಶಾಲೆ ಇದು!

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಶಿಕ್ಷಕರ ವರ್ಗಾವಣೆ: ಮೂರು ವರ್ಷ ಸೇವೆ ಸಲ್ಲಿಸಿದವರ ಪರಿಗಣನೆಗೆ ನಿರ್ಧಾರ

ಶಿಕ್ಷಕರ ವರ್ಗಾವಣೆ: ಮೂರು ವರ್ಷ ಸೇವೆ ಸಲ್ಲಿಸಿದವರ ಪರಿಗಣನೆಗೆ ನಿರ್ಧಾರ

ನನಗೆ, ನನ್ನ ಮಗಳಿಗೆ ಇಡಿ ನೋಟಿಸ್‌: ಡಿ.ಕೆ.ಶಿವಕುಮಾರ್‌

ನನಗೆ, ನನ್ನ ಮಗಳಿಗೆ ಇಡಿ ನೋಟಿಸ್‌: ಡಿ.ಕೆ.ಶಿವಕುಮಾರ್‌

ಫುಡ್ ಪಾಯ್ಸನ್‌ ಘಟನೆ: ಓರ್ವ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರಿಕೆ

ಫುಡ್ ಪಾಯ್ಸನ್‌ ಘಟನೆ: ಓರ್ವ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರಿಕೆ

ನಿರ್ವಹಣೆಯಿಲ್ಲದೆ ಸೊರಗುತ್ತಿವೆ ಅಭಿವೃದ್ಧಿ ಹೊಂದಿದ ಕೆರೆಗಳು!

ನಿರ್ವಹಣೆಯಿಲ್ಲದೆ ಸೊರಗುತ್ತಿವೆ ಅಭಿವೃದ್ಧಿ ಹೊಂದಿದ ಕೆರೆಗಳು!

ಬೆಂಗಳೂರಿನ ವ್ಯಕ್ತಿ ಟರ್ಕಿಯಲ್ಲಿ  ಕಣ್ಮರೆ? ಭಾರತದ 10 ಮಂದಿ ಸಿಲುಕಿರುವ ಬಗ್ಗೆ ಮಾಹಿತಿ

ಬೆಂಗಳೂರಿನ ವ್ಯಕ್ತಿ ಟರ್ಕಿಯಲ್ಲಿ ಕಣ್ಮರೆ? ಭಾರತದ 10 ಮಂದಿ ಸಿಲುಕಿರುವ ಬಗ್ಗೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.