ಮೈಸೂರು ಹಾಲಿ ಶಾಸಕ ತನ್ವಿರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿಗಳ ಬಂಧನ

Team Udayavani, Nov 18, 2019, 1:58 AM IST

ಮೈಸೂರು : ಅಪರಿಚಿತರ ತಂಡವೊಂದು ಹಾಲಿ ಶಾಸಕ ತನ್ವಿರ್ ಸೇಠ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.

ಘಟನೆಯಲ್ಲಿ ಮಾಜಿ ಸಚಿವ ತನ್ವಿರ್ ಸೇಠ್ ಕುತ್ತಿಗೆಯ ಭಾಗಕ್ಕೆ ಅಪರಿಚಿತರು ಚಾಕುವಿನಿಂದ ಚುಚ್ಚಿದ್ದು ಗಂಭೀರ ಗಾಯಗೊಂಡ ತನ್ವಿರ್ ಸೇಠ್ ಅವರನ್ನು ನಗರದ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮ ಸಂಬಂದಿಕರ ಔತಣ ಕೂಟದಲ್ಲಿ ಭಾಗಿಯಾಗಿದ್ದ ಸಂದರ್ಭ ಹಲ್ಲೆ ನಡೆದಿದೆ , ಈ ವೇಳೆ ಪರಾರಿಯಾಗಲು ಯತ್ನಿಸಿದ ಅಪರಿಚಿತರನ್ನು ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಒಪ್ಪಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ