Udayavni Special

ಫ್ರೆಂಚ್‌ ಓಪನ್‌ ವನಿತಾ ಫೈನಲ್‌ನಲ್ಲಿ “ಕೋವಾ’ ಕದನ

Team Udayavani, Jun 12, 2021, 12:29 AM IST

ಫ್ರೆಂಚ್‌ ಓಪನ್‌ ವನಿತಾ ಫೈನಲ್‌ನಲ್ಲಿ “ಕೋವಾ’ ಕದನ

ಪ್ಯಾರಿಸ್‌: ಜೆಕ್‌ ಆಟಗಾರ್ತಿ ಬಾರ್ಬೊರಾ ಕ್ರೆಜಿಕೋವಾ ಪ್ರಪ್ರಥಮ ಬಾರಿಗೆ ಗ್ರಾನ್‌ಸ್ಲಾಮ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಶನಿವಾರ ನಡೆಯಲಿರುವ ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌ ಪ್ರಶಸ್ತಿ ಸುತ್ತಿನ ಕಾಳಗದಲ್ಲಿ ಅವರು ರಶ್ಯದ ಅನಾಸ್ತಾಸಿಯಾ ಪಾವ್ಲುಚೆಂಕೋವಾ ಸವಾಲನ್ನು ಎದುರಿಸಲಿದ್ದಾರೆ. ಈ “ಕೋವಾ’ಗಳಲ್ಲಿ ಗೆಲುವಿನ ಸಿಹಿ ಯಾರಿಗೆ ಎಂಬುದು ಟೆನಿಸ್‌ ಅಭಿಮಾನಿಗಳ ಕುತೂಹಲ.

ಇಬ್ಬರಿಗೂ ಇದು ಮೊದಲ ಗ್ರಾನ್‌ಸ್ಲಾಮ್‌ ಫೈನಲ್‌ ಆಗಿರುವುದರಿಂದ ಫ್ರೆಂಚ್‌ ಓಪನ್‌ ನೂತನ ಚಾಂಪಿ ಯನ್‌ ಆಟಗಾರ್ತಿಯನ್ನು ಸ್ವಾಗತಿಸಲು ಸಜ್ಜಾಗಿದೆ.

ಸಕ್ಕರಿಗೆ ಸೋಲಿನ ಕಹಿ
ದ್ವಿತೀಯ ಸೆಮಿಫೈನಲ್‌ನಲ್ಲಿ ವಿಶ್ವದ 33ನೇ ರ್‍ಯಾಂಕಿಂಗ್‌ ಆಟಗಾರ್ತಿ ಕ್ರೆಜಿಕೋವಾ ಗ್ರೀಸ್‌ನ ಮರಿಯಾ ಸಕ್ಕರಿ ಅವರ ಆಕ್ರಮಣಕಾರಿ ಆಟವನ್ನು ಮೆಟ್ಟಿನಿಂತು 7-5, 4-6, 9-7 ಅಂತರದ ಗೆಲುವು ಸಾಧಿಸಿದರು. ನಿರ್ಣಾಯಕ ಸೆಟ್‌ನಲ್ಲಿ 5-3, 30-40ರ ಹಿನ್ನಡೆಯಲ್ಲಿದ್ದಾಗ ಕ್ರೆಜಿಕೋವಾ ಬ್ಯಾಕ್‌ಹ್ಯಾಂಡ್‌ ವಿನ್ನರ್‌ ಒಂದರ ಮೂಲಕ ಹೋರಾಟವನ್ನು ಮುಂದುವರಿಸುವಲ್ಲಿ ಯಶಸ್ವಿಯಾದರು. ಸಕ್ಕರಿ ಹಾಲಿ ಚಾಂಪಿಯನ್‌ ಐಗಾ ಸ್ವಿಯಾಟೆಕ್‌ ಅವರನ್ನು ಮಣಿಸುವ ಮೂಲಕ ಭಾರೀ ನಿರೀಕ್ಷೆ ಮೂಡಿಸಿದ್ದರು.

ಕ್ರೆಜಿಕೋವಾ ಕಳೆದ 40 ವರ್ಷಗಳಲ್ಲಿ ಫ್ರೆಂಚ್‌ ಓಪನ್‌ ಫೈನಲ್‌ ತಲುಪಿದ ಮೊದಲ ಜೆಕ್‌ ಆಟಗಾರ್ತಿಯಾಗಿದ್ದಾರೆ. 1981ರಲ್ಲಿ ಹಾನಾ ಮಂಡ್ಲಿಕೋವಾ ಫೈನಲ್‌ ಪ್ರವೇಶಿಸುವ ಜತೆಗೆ ಟ್ರೋಫಿಯನ್ನೂ ಎತ್ತಿದ್ದರು.

50ನೇ ಗ್ರಾನ್‌ಸ್ಲಾಮ್‌ನಲ್ಲಿ ಫೈನಲ್‌
ಪಾವ್ಲುಚೆಂಕೋವಾ ಕುರಿತು ಹೇಳುವುದಾದರೆ, 2015ರ ಆಸ್ಟ್ರೇಲಿಯನ್‌ ಓಪನ್‌ ಬಳಿಕ ರಶ್ಯನ್‌ ಆಟಗಾರ್ತಿಯೊಬ್ಬರು ಕಾಣುತ್ತಿರುವ ಮೊದಲ ಗ್ರಾನ್‌ಸ್ಲಾಮ್‌ ಫೈನಲ್‌ ಇದಾಗಿದೆ. ಅಂದು ಸೆರೆನಾ ವಿಲಿಯಮ್ಸ್‌ ವಿರುದ್ಧ ರಶ್ಯದ ಮರಿಯಾ ಶರಪೋವಾ ಪರಾಭವಗೊಂಡಿದ್ದರು.
ಇದು ಪಾವ್ಲುಚೆಂಕೋವಾ ಅವರ 50ನೇ ಗ್ರಾನ್‌ಸ್ಲಾಮ್‌ ಪಂದ್ಯಾವಳಿಯಾಗಿದೆ. ಅತ್ಯಧಿಕ ಗ್ರಾನ್‌ಸ್ಲಾಮ್‌ ಆಡಿದ ಬಳಿಕ ಫೈನಲ್‌ ಪ್ರವೇಶಿಸಿದ ದಾಖಲೆಯೂ ಇದಾಗಿದೆ. ಇಟಲಿಯ ರಾಬರ್ಟಾ ವಿನ್ಸಿ 44 ಗ್ರಾನ್‌ಸ್ಲಾಮ್‌ ಕೂಟದ ಬಳಿಕ ಫೈನಲ್‌ ತಲುಪಿದ್ದು ದಾಖಲೆಯಾಗಿತ್ತು.

ಟಾಪ್ ನ್ಯೂಸ್

ವಿದ್ಯುತ್ ಅವಘಡದಿಂದ ಹೊತ್ತಿ ಉರಿದ ಮನೆ : ಮನೆಯಲ್ಲಿದ್ದ ಸೊತ್ತುಗಳು ಬೆಂಕಿಗಾಹುತಿ

ವಿದ್ಯುತ್ ಅವಘಡದಿಂದ ಹೊತ್ತಿ ಉರಿದ ಮನೆ : ಸೊತ್ತುಗಳು ಬೆಂಕಿಗಾಹುತಿ

haj

ಹಜ್‌ ಯಾತ್ರೆ : ಈ ವರ್ಷವೂ ಸೀಮಿತ ಮಂದಿಗೆ ಅವಕಾಶ

68979877

ಕೋವಿಡ್ : ರಾಜ್ಯದಲ್ಲಿಂದು 21614 ಸೋಂಕಿತರು ಗುಣಮುಖ; 9785 ಹೊಸ ಪ್ರಕರಣ ದೃಢ

ಅನ್‌ಲಾಕ್ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಅನುಷ್ಠಾನ ಮಾಡಿ : ಉಡುಪಿ ಜಿಲ್ಲಾಧಿಕಾರಿ ಸೂಚನೆ

ಅನ್‌ಲಾಕ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ: ಉಡುಪಿ ಜಿಲ್ಲಾಧಿಕಾರಿ ಸೂಚನೆ

9687

ಅನಾಥ ಅಪ್ರಾಪ್ತೆಯರ ಜೊತೆ ಮದುವೆಯಾದ ಯುವಕರು : ದೂರು ದಾಖಲು

ಉಡುಪಿ ತಾಲೂಕಿನಾದ್ಯಂತ ಉತ್ತಮ ಮಳೆ: ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಉಡುಪಿ ತಾಲೂಕಿನಾದ್ಯಂತ ಉತ್ತಮ ಮಳೆ: ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಕಳೆದ 3 ತಿಂಗಳ ಬಳಿಕ ಭಾರೀ ಇಳಿಕೆ; ದೆಹಲಿಯಲ್ಲಿ 24ಗಂಟೆಯಲ್ಲಿ 213 ಕೋವಿಡ್ ಪ್ರಕರಣ ಪತ್ತೆ

ಕಳೆದ 3 ತಿಂಗಳ ಬಳಿಕ ಭಾರೀ ಇಳಿಕೆ; ದೆಹಲಿಯಲ್ಲಿ 24ಗಂಟೆಯಲ್ಲಿ 213 ಕೋವಿಡ್ ಪ್ರಕರಣ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ವಿಶ್ವನಾಥನ್‌ ಆನಂದ್‌ ಜೊತೆ ನಟ ಕಿಚ್ಚ ಸುದೀಪ್‌ ಚೆಸ್‌ ಆಟ!

ವಿಶ್ವನಾಥನ್‌ ಆನಂದ್‌ ಜೊತೆ ನಟ ಕಿಚ್ಚ ಸುದೀಪ್‌ ಚೆಸ್‌ ಆಟ!

Novak Djokovic  won against Rafael Nadal at French open semi

ದಿಗ್ಗಜರ ಕಾಳಗ: ಫ್ರೆಂಚ್ ಓಪನ್ ಸೆಮಿಫೈನಲ್ ನಲ್ಲಿ ಜೋಕೊವಿಕ್ ಎದುರು ಸೋತ ನಡಾಲ್

ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ವರೆಗೆ ಭಾರತ ತಂಡದ ಪಯಣ ಹೇಗಿತ್ತು?

ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ವರೆಗೆ ಭಾರತ ತಂಡದ ಪಯಣ ಹೇಗಿತ್ತು?

ಸೌತಾಂಪ್ಟನ್‌ ಅಂಗಳದಲ್ಲಿ ಟೀಂ ಇಂಡಿಯಾದ ಕಠಿಣ ಅಭ್ಯಾಸ

ಸೌತಾಂಪ್ಟನ್‌ ಅಂಗಳದಲ್ಲಿ ಟೀಂ ಇಂಡಿಯಾದ ಕಠಿಣ ಅಭ್ಯಾಸ

MUST WATCH

udayavani youtube

ಕಾರವಾರ: ವೃದ್ಧೆಯನ್ನು 5 ಕಿ.ಮೀ ಗುಡ್ಡದ ಇಳಿಜಾರಿನಲ್ಲಿ ಹೊತ್ತು ಆಸ್ಪತ್ರೆ ಸಾಗಿಸಿದ ಯುವಕರು

udayavani youtube

SSLC ಪರೀಕ್ಷೆ: ಯಾವ ವಿದ್ಯಾರ್ಥಿಯನ್ನು ಫೈಲ್ ಮಾಡಲ್ಲ, ಕನಿಷ್ಠ ಅಂಕವೂ ನಿಗದಿ ಮಾಡಿಲ್ಲ!

udayavani youtube

28 ಹೆಂಡತಿಯರ ಮುಂದೆ 37 ನೇ ಬಾರಿಗೆ ವಿವಾಹವಾದ ಭೂಪ

udayavani youtube

ಕಲಾವತಿ ದಯಾನಂದ್ ಧ್ವನಿಯಲ್ಲಿ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’

udayavani youtube

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

ಹೊಸ ಸೇರ್ಪಡೆ

ವಿದ್ಯುತ್ ಅವಘಡದಿಂದ ಹೊತ್ತಿ ಉರಿದ ಮನೆ : ಮನೆಯಲ್ಲಿದ್ದ ಸೊತ್ತುಗಳು ಬೆಂಕಿಗಾಹುತಿ

ವಿದ್ಯುತ್ ಅವಘಡದಿಂದ ಹೊತ್ತಿ ಉರಿದ ಮನೆ : ಸೊತ್ತುಗಳು ಬೆಂಕಿಗಾಹುತಿ

haj

ಹಜ್‌ ಯಾತ್ರೆ : ಈ ವರ್ಷವೂ ಸೀಮಿತ ಮಂದಿಗೆ ಅವಕಾಶ

68979877

ಕೋವಿಡ್ : ರಾಜ್ಯದಲ್ಲಿಂದು 21614 ಸೋಂಕಿತರು ಗುಣಮುಖ; 9785 ಹೊಸ ಪ್ರಕರಣ ದೃಢ

ಅನ್‌ಲಾಕ್ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಅನುಷ್ಠಾನ ಮಾಡಿ : ಉಡುಪಿ ಜಿಲ್ಲಾಧಿಕಾರಿ ಸೂಚನೆ

ಅನ್‌ಲಾಕ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ: ಉಡುಪಿ ಜಿಲ್ಲಾಧಿಕಾರಿ ಸೂಚನೆ

9687

ಅನಾಥ ಅಪ್ರಾಪ್ತೆಯರ ಜೊತೆ ಮದುವೆಯಾದ ಯುವಕರು : ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.