
ಮಂಗಳೂರು: ಈ ಫುಟ್‌ಪಾತ್‌ನಲ್ಲಿ ನಡೆಯಲು ಗುಂಡಿಗೆ ಬೇಕು!
Team Udayavani, Dec 6, 2022, 5:40 AM IST

ಮಹಾನಗರ: ಸ್ಮಾರ್ಟ್‌ಸಿಟಿಯಾಗಿ ಮಂಗಳೂರು ನಗರ ಬೆಳೆಯುತ್ತಿದ್ದರೂ ಕೆಲವೊಂದು ಮೂಲ ಸೌಲಭ್ಯಗಳು ಮತ್ತಷ್ಟು ಸುಧಾರಿಸಬೇಕಿದೆ. ನಗರದ ಕೆಲವು ಕಡೆಗಳಲ್ಲಿ ವ್ಯವಸ್ಥಿತ ಫುಟ್‌ಪಾತ್ ನಿರ್ಮಾಣವಾದರೂ ಹಲವು ಕಡೆಗಳಲ್ಲಿ ಇನ್ನೂ ಹಳೆ ಕಾಲದ ಫುಟ್‌ಪಾತ್ ಇದೆ. ಗುಂಡಿ ಬಿದ್ದ ಫುಟ್‌ಪಾತ್‌ನಲ್ಲಿ ಪಾದಚಾರಿಗಳು ನಡೆಯುವುದಂತೂ ಸವಾಲಾಗಿ ಪರಿಣಮಿಸಿದೆ.
ಆಸ್ಪತ್ರೆ, ಶಿಕ್ಷಣ ಸಂಸ್ಥೆ ಎದುರೇ ಅಪಾಯ!
ನಗರದ ಕೆಲವೊಂದು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಎದುರೇ ಫುಟ್‌ಪಾತ್‌ಗಳು ಬಾಯ್ದೆರೆದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮುಖ್ಯವಾಗಿ ಬೆಂದೂರ್‌ವೆಲ್‌ನಿಂದ ಬಲ್ಮಠ ಕಡೆಗೆ ಬರುವ ಮಂಗಳೂರು ನರ್ಸಿಂಗ್ ಹೋಂ ಎದುರು ಮತ್ತು ಎ.ಜೆ. ಟವರ್ ಬಳಿ, ಮೇರಿಹಿಲ್, ಬಂದರು, ಕೊಡಿಯಾಲಬೈಲು ಸಹಿತ ಹಲವು ಕಡೆಗಳಲ್ಲಿ ಫುಟ್‌ಪಾತ್‌ನಲ್ಲಿ ಗುಂಡಿ ಬಿದ್ದು ಅಪಾಯ ಸೂಚಿಸುವಂತಿದೆ.
ವಾಕಿಂಗ್ ಮಾಡುವುದು ಹೇಗೆ?
ನಗರದ ಬಹುತೇಕ ಫುಟ್‌ಪಾತ್‌ಗಳು ಅಲ್ಲಲ್ಲಿ ಗುಂಡಿಯಾಗಿದ್ದು, ಸಾರ್ವಜನಿಕರಿಗೆ ನಡೆಯಲು ಕಷ್ಟದ ಪರಿಸ್ಥಿತಿ ಇದೆ. ಫುಟ್‌ಪಾತ್‌ಗೆ
ಅಳವಡಿಸಿದ ಸ್ಲಾಬ್ ಮುರಿದು ಹೋಗಿದ್ದು, ಪಾದಚಾರಿಗಳಿಗೆ ಅಪಾಯ ಎದುರಾಗಿದೆ. ಇದೇ ಕಾರಣಕ್ಕೆ ಸಾರ್ವಜನಿಕರು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲಿ ನಡೆಯುವುದು ಕಂಡುಬರುತ್ತಿದೆ. ಕೆಲವು ಕಡೆ ಅರ್ಧ ಭಾಗದವರೆಗೆ ಮಾತ್ರ ಫುಟ್‌ಪಾತ್ ಕೆಲಸ ಆಗಿದ್ದು, ಕಾಮಗಾರಿ ಉದ್ದೇಶಕ್ಕೆ ಫುಟ್‌ಪಾತ್ ಅನ್ನು ಅಗೆಯಲಾಗಿದೆ.
ವಿಸ್ತರಣೆಯಾಗಬೇಕಿದೆ ಫುಟ್‌ಪಾತ್
ನಗರದ ಕೆಲವೊಂದು ಕಡೆಗಳಲ್ಲಿ ಫುಟ್‌ಪಾತ್ ಕೆಲಸ ಅರ್ಧಂಬರ್ಧ ಸಾಗಿದೆ. ಪಂಪ್‌ವೆಲ್‌ನಿಂದ ಕಂಕನಾಡಿಗೆ ಬರುವಾಗ ರಸ್ತೆಯ ಅರ್ಧ ಭಾಗದವರೆಗೆ ಫುಟ್‌ಪಾತ್ ಇದೆ. ಆದರೆ ಬಳಿಕ ಫುಟ್‌ಪಾತ್ ಮಾಯವಾಗಿದೆ. ಈ ಪ್ರದೇಶದಲ್ಲಿ ಹುಲ್ಲು, ಗಿಡ-ಗಂಟಿ ಬೆಳೆದಿದ್ದು, ಪಾದಚಾರಿಗಳಿಗೆ ಫುಟ್‌ಪಾತ್ ಕಾಣದೆ ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಈ ರಸ್ತೆಯಲ್ಲಿ ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನಗಳೂ ಅತ್ತಿಂದಿತ್ತ ಸಂಚರಿಸುತ್ತಿರುತ್ತದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರು – ಬಸ್ ನಡುವೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು

ಸಿದ್ದು ಹೆಣವನ್ನು ನಾಯಿನೂ ಮೂಸುವುದಿಲ್ಲ, ಅದನ್ನು ನಾವು ಯಾಕೆ ಮುಟ್ಟಬೇಕು: ಈಶ್ವರಪ್ಪ

ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೂ ಭಾರತದ ಬಜೆಟ್ ಮೇಲೆ ವಿಶ್ವದ ಚಿತ್ತ ನೆಟ್ಟಿದೆ; ಪ್ರಧಾನಿ ಮೋದಿ

ಕಾರ್ಕಳ: ಗೇರು ಬೀಜ ಫ್ಯಾಕ್ಟರಿಯಲ್ಲಿ ಲಾರಿ ಚಾಲಕನ ಕೊಲೆ

ಉಡುಪಿ ಸಂತೆಕಟ್ಟೆ: ವಿದ್ಯಾರ್ಥಿಗಳಿದ್ದ ಕಾರಿಗೆ ಲಾರಿ ಢಿಕ್ಕಿ; ಲಾರಿ ಸಹಿತ ಚಾಲಕ ಪರಾರಿ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಕಾರು – ಬಸ್ ನಡುವೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು

ಸಿದ್ದು ಹೆಣವನ್ನು ನಾಯಿನೂ ಮೂಸುವುದಿಲ್ಲ, ಅದನ್ನು ನಾವು ಯಾಕೆ ಮುಟ್ಟಬೇಕು: ಈಶ್ವರಪ್ಪ

ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೂ ಭಾರತದ ಬಜೆಟ್ ಮೇಲೆ ವಿಶ್ವದ ಚಿತ್ತ ನೆಟ್ಟಿದೆ; ಪ್ರಧಾನಿ ಮೋದಿ

ಕಾರ್ಕಳ: ಗೇರು ಬೀಜ ಫ್ಯಾಕ್ಟರಿಯಲ್ಲಿ ಲಾರಿ ಚಾಲಕನ ಕೊಲೆ

ಉಡುಪಿ ಸಂತೆಕಟ್ಟೆ: ವಿದ್ಯಾರ್ಥಿಗಳಿದ್ದ ಕಾರಿಗೆ ಲಾರಿ ಢಿಕ್ಕಿ; ಲಾರಿ ಸಹಿತ ಚಾಲಕ ಪರಾರಿ